ಕೇಂದ್ರ ಸಚಿವ ಜಿತನ ಮಾಂಝಿ ಮೊಮ್ಮಗಳನ್ನು ಗುಂಡಿಕ್ಕಿ ಕೊಂದ ಗಂಡ…!?

ಗಯಾ : ಆಘಾತಕಾರಿ ಘಟನೆಯೊಂದರಲ್ಲಿ, ಕೇಂದ್ರ ಸಚಿವರಾದ ಜಿತನ್ ರಾಮ ಮಾಂಝಿ ಅವರ ಮೊಮ್ಮಗಳನ್ನು ಬುಧವಾರ (ಏಪ್ರಿಲ್ 9) ಗಯಾದಲ್ಲಿ ಅವರ ಪತಿಯೇ ಗುಂಡಿಕ್ಕಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇಂದ್ರ ಸಚಿವರಾದ ಜಿತನ್ ರಾಮ ಮಾಂಝಿ ಮೊಮ್ಮಗಳು ಸುಷ್ಮಾ ದೇವಿ ಅವರನ್ನು ಗಯಾದಲ್ಲಿರುವ ಅವರ ಮನೆಯಲ್ಲಿ ಅವರ ಪತಿ ರಮೇಶ ಗುಂಡಿಕ್ಕಿ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳನ್ನು ಬಂಧಿಸಲು ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.
ಗಯಾ ಜಿಲ್ಲೆಯ ಅತ್ರಿ ಬ್ಲಾಕ್‌ನ ಟೆಟುವಾ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ವರದಿಗಳ ಪ್ರಕಾರ, ಅತ್ರಿ ಬ್ಲಾಕ್‌ನ ಟೆಟುವಾ ಗ್ರಾಮದಲ್ಲಿ ಸಂತ್ರಸ್ತೆ ಸುಷ್ಮಾ ದೇವಿ, ಅವರ ಮಕ್ಕಳು ಮತ್ತು ಸಹೋದರಿ ಪೂನಂ ಕುಮಾರಿ ಮನೆಯಲ್ಲಿದ್ದಾಗ ಈ ಘಟನೆ ನಡೆದಿದೆ.

ಗಯಾ ಲೋಕಸಭಾ ಕ್ಷೇತ್ರದ ಸಂಸದ ಮತ್ತು ಕೇಂದ್ರ ಸರ್ಕಾರದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವರಾಗಿರುವ ಜಿತನ್‌ ರಾಮ ಮಾಂಝಿ ಬಿಹಾರದಲ್ಲಿ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಮಿತ್ರಪಕ್ಷವಾದ ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) ಸ್ಥಾಪಕರೂ ಆಗಿದ್ದಾರೆ.
ಪೂನಂಕುಮಾರಿ ಪ್ರಕಾರ, ಸುಷ್ಮಾ ಮತ್ತು ಅವರ ಪತಿ ರಮೇಶ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೆಲಸದಿಂದ ಮನೆಗೆ ಹಿಂದಿರುಗಿದ ನಂತರ ಅವರ ನಡುವೆ ಜಗಳ ನಡೆಯಿತು. ಜಗಳದ ಸಮಯದಲ್ಲಿ ರಮೇಶ ದೇಶೀಯ ಪಿಸ್ತೂಲ್ ತೆಗೆದುಕೊಂಡು ಸುಷ್ಮಾ ಮೇಲೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ. ಇನ್ನೊಂದು ಕೋಣೆಯಲ್ಲಿದ್ದ ಪೂನಂ ಮತ್ತು ಸುಷ್ಮಾ ಅವರ ಮಕ್ಕಳು ಸುಷ್ಮಾ ಇದ್ದ ಕೋಣೆಗೆ ಧಾವಿಸಿದಾಗ, ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡುಕೊಂಡರು. ಗುಂಡು ಹಾರಿಸಿದ ನಂತರ, ಆಯುಧವನ್ನು ಎಸೆದು ಸ್ಥಳದಿಂದ ಪರಾರಿಯಾಗಿದ್ದಾನೆ. ಗುಂಡಿನ ಶಬ್ದ ಕೇಳಿದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದರು.

ಪ್ರಮುಖ ಸುದ್ದಿ :-   ಆಮಿಷ...ಮದುವೆ.. ನಂತರ ಚಿನ್ನಾಭರಣ-ಹಣದೊಂದಿಗೆ ಪಲಾಯನ...: ಕೊನೆಗೂ ಬಲೆಗೆಬಿದ್ದ 25 ಪುರುಷರನ್ನು ವಂಚಿಸಿದ್ದ 'ಲೂಟಿಕೋರ ವಧು'...!

ಸುಷ್ಮಾ ಅದೇ ಬ್ಲಾಕ್‌ನಲ್ಲಿ ವಿಕಾಸ ಮಿತ್ರ (ಅಭಿವೃದ್ಧಿ ಕಾರ್ಯಕರ್ತೆ) ಆಗಿ ಕೆಲಸ ಮಾಡುತ್ತಿದ್ದರು. ಅವರ ಪತಿ ರಮೇಶ ಪಾಟ್ನಾದಲ್ಲಿ ನೆಲೆಸಿರುವ ಟ್ರಕ್ ಚಾಲಕ.
ಸುಷ್ಮಾ ಗಂಭೀರ ಸ್ಥಿತಿಯಲ್ಲಿರುವುದನು ಕಂಡ ಗ್ರಾಮಸ್ಥರು ತಕ್ಷಣ ಸುಷ್ಮಾ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದರು, ಆದರೆ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಪೊಲೀಸರು ಕೂಡಲೇ ಸ್ಥಳಕ್ಕೆ ತಲುಪಿ ಮೃತ ದೇಹವನ್ನು ವಶಕ್ಕೆ ಪಡೆದರು. ನಂತರ ಅವರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮತ್ತು ತನಿಖೆ ನಡೆದಿದ್ದು, ಗಂಡನಿಗಾಗಿ ಹುಡುಕಾಟ ಮುಂದುವರೆದಿದೆ.

ಸುಷ್ಮಾ ಮತ್ತು ರಮೇಶ ಸುಮಾರು 14 ವರ್ಷಗಳ ಹಿಂದೆ ಅಂತರ್ಜಾತಿ ವಿವಾಹವಾಗಿದ್ದರು. ಘಟನೆಯ ಸಮಯದಲ್ಲಿ, ಸುಷ್ಮಾ ಅವರ ಸಹೋದರಿ ಮತ್ತು ಮಕ್ಕಳು ಮನೆಯ ಇನ್ನೊಂದು ಕೋಣೆಯಲ್ಲಿದ್ದರು. ಗುಂಡೇಟಿನ ಶಬ್ದ ಕೇಳಿದಾಗ, ಅವರು ಸ್ಥಳಕ್ಕೆ ಧಾವಿಸಿದರು ಮತ್ತು ಸುಷ್ಮಾ ನೆಲದ ಮೇಲೆ ಬಿದ್ದಿರುವುದನ್ನು ಕಂಡುಕೊಂಡರು. ಶಬ್ದ ಕೇಳಿದ ನಂತರ ನೆರೆಹೊರೆಯವರು ಸಹ ಬಂದರು.
ಆರೋಪಿಗಳನ್ನು ಪತ್ತೆಹಚ್ಚಲು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಗಯಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಆನಂದಕುಮಾರ ತಿಳಿಸಿದ್ದಾರೆ. “ಪುರಾವೆಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಂಡ ಮತ್ತು ತಾಂತ್ರಿಕ ತಜ್ಞರನ್ನು ಅಪರಾಧ ಸ್ಥಳಕ್ಕೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಟೈಮ್ 100 ಲೋಕೋಪಕಾರಿ 2025 ಜಾಗತಿಕ ಪಟ್ಟಿ ; ಭಾರತದ ಅಂಬಾನಿ ದಂಪತಿ, ಅಜೀಂ ಪ್ರೇಮಜಿ, ನಿಖಿಲ್ ಕಾಮತಗೆ ಸ್ಥಾನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement