ವಿಶ್ವದಲ್ಲೇ ಇದೇ ಮೊದಲ ಬಾರಿಗೆ ಸಂಪೂರ್ಣ ಸ್ವಯಂಚಾಲಿತ ಐವಿಎಫ್ (IVF) ಸಿಸ್ಟಂ ಮತ್ತು ಕೃತಕ ಬುದ್ಧಿಮತ್ತೆ (AI) ಸಹಾಯದಿಂದ ಮಗು ಜನಿಸಿದೆ.
ಫಲೀಕರಣಕ್ಕೆ ಸಹಾಯ ಮಾಡಲು ಕೃತಕ ಬುದ್ಧಿಮತ್ತೆ (AI) ಸಹಾಯದಿಂದ ಸಂಪೂರ್ಣ ಸ್ವಯಂಚಾಲಿತ ಐವಿಎಫ್ (IVF) ಸಿಸ್ಟಂ ಅನ್ನು ಬಳಸಿಕೊಳ್ಳಲಾಗಿದೆ. ಈ ಬೆಳವಣಿಗೆಯು ಫಲವತ್ತತೆ ಚಿಕಿತ್ಸೆಗಳಲ್ಲಿ ಪ್ರಮುಖ ಬದಲಾವಣೆಯನ್ನು ಸೂಚಿಸಬಹುದು.
ನ್ಯೂಯಾರ್ಕ್ ಮೂಲದ ಬಯೋಟೆಕ್ ಸಂಸ್ಥೆ ಕನ್ಸೀವೇಬಲ್ ಲೈಫ್ ಸೈನ್ಸಸ್ ಅಭಿವೃದ್ಧಿಪಡಿಸಿದ ಈ ಯಂತ್ರವನ್ನು ಇಂಟ್ರಾಸೈಟೋಪ್ಲಾಸ್ಮಿಕ್ ಸ್ಪರ್ಮ್ ಇಂಜೆಕ್ಷನ್ (ICSI) ಎಂದು ಕರೆಯಲ್ಪಡುವ ಕಾರ್ಯವಿಧಾನದ 23 ನಿರ್ಣಾಯಕ ಹಂತಗಳನ್ನು ಪೂರ್ಣಗೊಳಿಸಲು ಬಳಸಲಾಯಿತು. ನಿರ್ವಾಹಕರು ನೇರಪ್ರಸಾರದ ಮೂಲಕ ಪ್ರಕ್ರಿಯೆಯನ್ನು ದೂರದಿಂದಲೇ ಮೇಲ್ವಿಚಾರಣೆ ಮಾಡಿದರು. ಪ್ರತಿ ಹಂತವನ್ನು ಒಂದು ಗುಂಡಿಯನ್ನು ಒತ್ತುವ ಮೂಲಕ ಪ್ರಾರಂಭಿಸಿದರು.
ಇದು ಸಾಂಪ್ರದಾಯಿಕ ಹಸ್ತಚಾಲಿತ ಪ್ರಕ್ರಿಯೆಯಾದ ಇಂಟ್ರಾಸೈಟೋಪ್ಲಾಸ್ಮಿಕ್ ಸ್ಪರ್ಮ್ ಇಂಜೆಕ್ಷನ್ (ICSI) ವಿಧಾನವನ್ನು ಬದಲಾಯಿಸುತ್ತದೆ, ಸಾಂಪ್ರದಾಯಿಕ ವಿದಾನದಲ್ಲಿ ವೀರ್ಯವನ್ನು ನೇರವಾಗಿ ಮೊಟ್ಟೆಗೆ ಚುಚ್ಚಲಾಗುತ್ತದೆ.
“ಈ ಮಟ್ಟದ ಯಾಂತ್ರೀಕರಣವು ಫಲಿತಾಂಶಗಳ ಮೇಲೆ ಪರಿಣಾಮ ಬೀರುವ ಮಾನವ ದೋಷ ಮತ್ತು ಆಯಾಸದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ” ಎಂದು ಕಂಪನಿಯ ಸಹ-ಸಂಸ್ಥಾಪಕ ಮತ್ತು ಸಂತಾನೋತ್ಪತ್ತಿ ಚಿಕಿತ್ಸೆಯಲ್ಲಿ ಪರಿಣಿತರಾದ ಜಾಕ್ವೆಸ್ ಕೋಹೆನ್ ಹೇಳಿದರು.
ಸಂಪೂರ್ಣ ಸ್ವಯಂಚಾಲಿತ ಐವಿಎಫ್ (IVF) ಸಿಸ್ಟಂ ಅನ್ನು ಪರೀಕ್ಷಿಸಲು, ಸಂಶೋಧಕರು ಬಂಜೆತನವಿದ್ದ ದಂಪತಿಗಳನ್ನು ನೇಮಿಸಿಕೊಂಡರು. ಅಂಡೋತ್ಪತ್ತಿ ಸಮಸ್ಯೆಗಳಿಂದಾಗಿ ಮಹಿಳಾ ಸಂಗಾತಿ ದಾನಿ ಅಂಡಾಣುಗಳನ್ನು ಪಡೆದರು.
ಎಂಟು ದಾನಿ ಅಂಡಾಣುಗಳಲ್ಲಿ ಐದು ಸ್ವಯಂಚಾಲಿತ ವ್ಯವಸ್ಥೆಯನ್ನು ಬಳಸಿಕೊಂಡು ಮತ್ತು ಮೂರು ಸಾಂಪ್ರದಾಯಿಕ ಇಂಟ್ರಾಸೈಟೋಪ್ಲಾಸ್ಮಿಕ್ ಸ್ಪರ್ಮ್ ಇಂಜೆಕ್ಷನ್ (ICSI) ವಿಧಾನದ ಮೂಲಕ ಫಲವತ್ತಾಗಿಸಲಾಯಿತು. ಎಲ್ಲಾ ಎಂಟು ಭ್ರೂಣಗಳಾಗಿ ಅಭಿವೃದ್ಧಿ ಹೊಂದಿದವು. ನಂತರ ಕೃತಕಬುದ್ಧಿಮತ್ತೆ (AI) ಮಾದರಿಯು ಭ್ರೂಣಗಳನ್ನು ಮೌಲ್ಯಮಾಪನ ಮಾಡಿ ಸ್ವಯಂಚಾಲಿತ ಪ್ರಕ್ರಿಯೆಯಿಂದ ಎರಡು ಭ್ರೂಣಗಳು ಹೆಚ್ಚು ಫಲೀಕರಣವಾಗುತ್ತದೆ ಪರಿಗಣಿಸಲ್ಪಟ್ಟವು. ಒಂದು ಭ್ರೂಣವನ್ನು ಅಳವಡಿಸಲು ಸಾಧ್ಯವಾಗಲಿಲ್ಲ, ಆದರೆ ಇನ್ನೊಂದು ಯಶಸ್ವಿ ಜನನಕ್ಕೆ ಕಾರಣವಾಯಿತು.
ಲಂಡನ್ ವಿಶ್ವವಿದ್ಯಾಲಯದ ಸಂತಾನೋತ್ಪತ್ತಿ ವಿಜ್ಞಾನ ಪ್ರಾಧ್ಯಾಪಕ ಜಾಯ್ಸ್ ಹಾರ್ಪರ್ ಈ ಫಲಿತಾಂಶವನ್ನು “ಪರಿಕಲ್ಪನೆಯ ರೋಮಾಂಚಕಾರಿ ಪುರಾವೆ” ಎಂದು ಬಣ್ಣಿಸಿದ್ದಾರೆ, ಆದರೆ ಈ ವ್ಯವಸ್ಥೆಯು ಸಾಂಪ್ರದಾಯಿಕ ಐವಿಎಫ್ (IVF)ಗಿಂತ ಹೆಚ್ಚು ಪರಿಣಾಮಕಾರಿಯಾಗಿದೆಯೇ ಎಂದು ನಿರ್ಧರಿಸಲು ಹೆಚ್ಚು ಹಾಗೂ ನಿಯಂತ್ರಿತ ಪ್ರಯೋಗಗಳನ್ನು ನಡೆಸಬೇಕಾಗುತ್ತದೆ ಎಂದು ಗಮನಿಸಿದರು.
ದೃಶ್ಯ ಸೂಚನೆಗಳ ಆಧಾರದ ಮೇಲೆ ಸೂಕ್ತ ಸ್ಪರ್ಮ್ ಅನ್ನು ಆಯ್ಕೆ ಮಾಡಲು ಈ ವ್ಯವಸ್ಥೆಯು ಕೃತಕ ಬುದ್ಧಿಮತ್ತೆಯನ್ನು ಸಂಯೋಜಿಸುತ್ತದೆ ಮತ್ತು ಇಂಜೆಕ್ಷನ್ ಮಾಡುವ ಮೊದಲು ಅವುಗಳನ್ನು ನಿಶ್ಚಲಗೊಳಿಸಲು ಲೇಸರ್ ಅನ್ನು ಬಳಸುತ್ತದೆ.
ವೆಚ್ಚದ ಕಾರಣದಿಂದಾಗಿ ತಕ್ಷಣವೇ ಜನಪ್ರಿಯ ಆಗುವ ನಿರೀಕ್ಷೆ ಇಲ್ಲದಿದ್ದರೂ, ಮತ್ತಷ್ಟು ಅಭಿವೃದ್ಧಿ ಮತ್ತು ಪ್ರಮಾಣೀಕರಣದೊಂದಿಗೆ ಇದರ ವೆಚ್ಚವು ಕ್ರಮೇಣ ಕಡಿಮೆಯಾಗುತ್ತದೆ ಎಂದು ಕೋಹೆನ್ ನಂಬುತ್ತಾರೆ.
ಈ ಹೊಸ ವ್ಯವಸ್ಥೆಯಲ್ಲಿ ಈಗ ಐಸಿಎಸ್‌ಐ (ICSI) ಕಾರ್ಯವಿಧಾನದ ಎಲ್ಲಾ 23 ಹಂತಗಳನ್ನು ಮಾನವ ಕೈಗಳಿಲ್ಲದೆ, ಎಐ (AI) ಅಥವಾ ರಿಮೋಟ್ ಡಿಜಿಟಲ್ ನಿಯಂತ್ರಣದ ಮೂಲಕ ನಿರ್ವಹಿಸಬಹುದು.
ಜರ್ನಲ್ ರಿಪ್ರೊಡಕ್ಟಿವ್ ಬಯೋಮೆಡಿಸಿನ್ ಆನ್‌ಲೈನ್‌ನಲ್ಲಿ ಪ್ರಕಟವಾದ ಈ ಸಾಧನೆಯು ಭ್ರೂಣಶಾಸ್ತ್ರಜ್ಞ ಡಾ. ಜಾಕ್ವೆಸ್ ಕೋಹೆನ್ ನೇತೃತ್ವದ ನ್ಯೂಯಾರ್ಕ್ ಮತ್ತು ಮೆಕ್ಸಿಕೋದ ಗ್ವಾಡಲಜರಾದ ಕನ್ಸೀವಬಲ್ ಲೈಫ್ ಸೈನ್ಸಸ್‌ನ ತಜ್ಞರ ತಂಡವು ರಚಿಸಿದ ಸ್ವಯಂಚಾಲಿತ ಸಿಸ್ಟಂನಲ್ಲಿ ನಡೆದ ಪ್ರಯೋಗವಾಗಿದೆ. ಪ್ರ
ಗಂಡು ಮಗುವಿನ ಜನನವು ಗ್ವಾಡಲಜರಾದ ಹೋಪ್ ಐವಿಎಫ್ ಮೆಕ್ಸಿಕೊದಲ್ಲಿ ನಡೆಯಿತು. ಹಿಂದಿನ ವಿಫಲ ಪ್ರಯತ್ನದ ನಂತರ ದಾನಿ ಅಂಡಾಣುಗಳೊಂದಿಗೆ ಐವಿಎಫ್ (IVF) ಚಿಕಿತ್ಸೆಗೆ ಒಳಗಾಗಿದ್ದ 40 ವರ್ಷದ ಮಹಿಳೆಯೊಬ್ಬರು ಈ ಹೊಸ ಸ್ವಯಂಚಾಲಿತ ಪ್ರಕ್ರಿಯೆಯನ್ನು ಬಳಸಿಕೊಂಡು ಗರ್ಭಿಣಿಯಾದರು. ಈ ವ್ಯವಸ್ಥೆಯನ್ನು ಬಳಸಿಕೊಂಡು ಫಲವತ್ತಾಗಿಸಿದ ಐದು ಅಂಡಾಣುಗಳಲ್ಲಿ, ನಾಲ್ಕು ಯಶಸ್ವಿಯಾಗಿ ಫಲವತ್ತಾದವು.
ಒಂದು ಭ್ರೂಣವು ಆರೋಗ್ಯಕರ ಬ್ಲಾಸ್ಟೊಸಿಸ್ಟ್ ಆಗಿ ಅಭಿವೃದ್ಧಿ ಹೊಂದಿತು, ಅದನ್ನು ಫ್ರೀಜ್ ಮಾಡಿ ನಂತರ ವರ್ಗಾಯಿಸಲಾಯಿತು, ಇದು ಆರೋಗ್ಯಕರ ಗಂಡು ಮಗುವಿನ ಜನನಕ್ಕೆ ಕಾರಣವಾಯಿತು.
ಸ್ವಯಂಚಾಲಿತ ವ್ಯವಸ್ಥೆಯು ವೀರ್ಯ ಇಂಜೆಕ್ಷನ್ ಪ್ರಕ್ರಿಯೆಯ ಪ್ರತಿಯೊಂದು ಭಾಗವನ್ನು ನಿರ್ವಹಿಸಿತು, ಇದರಲ್ಲಿ ಎಐ (AI)ಯೊಂದಿಗೆ ಸ್ಪರ್ಮ್ ಅನ್ನು ಆಯ್ಕೆ ಮಾಡುವುದು, ಲೇಸರ್ ಮೂಲಕ ಅದನ್ನು ನಿಶ್ಚಲಗೊಳಿಸುವುದು ಮತ್ತು ಅಂಡಾಣುವಿಗೆ ಚುಚ್ಚುವುದು ಸೇರಿದಂತೆ – ಇವೆಲ್ಲವೂ ಹೆಚ್ಚಿನ ವೇಗ ಮತ್ತು ನಿಖರತೆಯೊಂದಿಗೆ ನಡೆಯಿತು.
“ಈ ಹೊಸ ವ್ಯವಸ್ಥೆಯು ನಾವು ಐವಿಎಫ್ ಮಾಡುವ ವಿಧಾನವನ್ನು ಬದಲಾಯಿಸಬಹುದು. ಇದು ಹೆಚ್ಚಿನ ಸ್ಥಿರತೆಯನ್ನು ನೀಡುತ್ತದೆ, ಪ್ರಯೋಗಾಲಯ ಸಿಬ್ಬಂದಿಗೆ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಅಂಡಾಣುಗಳ ಬದುಕುಳಿಯುವಿಕೆಯನ್ನು ಸುಧಾರಿಸಬಹುದು” ಎಂದು ಡಾ. ಕೊಹೆನ್ ಹೇಳುತ್ತಾರೆ.
ಹೆಚ್ಚಿನ ರೋಗಿಗಳಲ್ಲಿ ಇದರ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ದೃಢೀಕರಿಸಲು ಹೆಚ್ಚಿನ ಅಧ್ಯಯನಗಳು ಬೇಕಾಗುತ್ತವೆ ಎಂದು ಅವರು ಹೇಳಿದರು, ಆದರೆ ಈ ಮಗುವಿನ ಜನನವು ಸಂಪೂರ್ಣ ಸ್ವಯಂಚಾಲಿತ ಐವಿಎಫ್ (IVF) ಕಡೆಗೆ ಒಂದು ಪ್ರಮುಖ ಹೆಜ್ಜೆಯಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ