ರಾಂಚಿ: ಜಾರ್ಖಂಡ್ ಸಚಿವ ಹಫೀಜುಲ್ ಹಸನ್ ಅವರು ಮುಸ್ಲಿಮರಿಗೆ modlu ಶರಿಯತ್ ಮತ್ತು ನಂತರ ದೇಶದ ಸಂವಿಧಾನ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಬಿಜೆಪಿಯ ಜಾರ್ಖಂಡ್ ಘಟಕ ಹಂಚಿಕೊಂಡಿರುವ ವಿಡಿಯೋದಲ್ಲಿ ಜಾರ್ಖಂಡ್‌ನ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಹಫೀಜುಲ್ ಹಸನ್, ಶ “ಶರಿಯತ್ ನಮಗೆ ಮುಖ್ಯವಾಗಿದೆ. ಕುರಾನ್ ನಮ್ಮ ಹೃದಯದಲ್ಲಿದೆ ಮತ್ತು ಸಂವಿಧಾನ ನಮ್ಮ ಕೈಯಲ್ಲಿದೆ. ಇಸ್ಲಾಂನಲ್ಲಿ ಮೊದಲು ಶರಿಯತ್‌ಗೆ ಆದ್ಯತೆ, ನಂತರ ಸಂವಿಧಾನ” ಎಂದು ಹಸನ್ ಹೇಳಿದ್ದಾರೆ.
ಶರಿಯತ್ ಎಂಬುದು ಇಸ್ಲಾಮಿಕ್ ಕಾನೂನಾಗಿದ್ದು, ಮುಸ್ಲಿಮರಿಗೆ ನೈತಿಕ ಮತ್ತು ಧಾರ್ಮಿಕ ಮಾರ್ಗದರ್ಶನ ನೀಡುವ ತತ್ವಗಳ ಸಮೂಹವಾಗಿದೆ. ಇದು ಅರೇಬಿಕ್‌ನಲ್ಲಿ ‘ಮಾರ್ಗ’ ಅಥವಾ ‘ದಾರಿ’ ಎಂದರ್ಥವನ್ನು ಹೊಂದಿದೆ.
ಆದಾಗ್ಯೂ, ವಿವಾದದ ನಂತರ, ಹಸನ್ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, “ಶರಿಯತ್ ಮೇರೆ ಸೀನೇ ಮೇ ಹೈ ಪರ್ ಬಾಬಾಸಾಹೇಬ್ ಕಾ ಸಂವಿಧಾನ್ ಹಾತ್ ಮೇ ಹೈ (ಶರಿಯತ್ ನಮ್ಮ ಹೃದಯದಲ್ಲಿದೆ, ಆದರೆ ಬಾಬಾಸಾಹೇಬ್ ಅವರ ಸಂವಿಧಾನ ನಮ್ಮ ಕೈಯಲ್ಲಿದೆ) ಎಂದು ನಾನು ಹೇಳಿದ್ದೆ. ಸಂವಿಧಾನ ಮತ್ತು ಶರಿಯತ್ ಎರಡೂ ನಮಗೆ ಸಮಾನವಾಗಿ ಮುಖ್ಯ ಎಂದು ಯೂ ಟರ್ನ್ ಹೊಡೆದಿದ್ದಾರೆ.
“ನೀವು ಸಂವಿಧಾನವನ್ನು ಕೈಯಲ್ಲಿ ಹಿಡಿದಿರುವ ಬಾಬಾಸಾಹೇಬ ಅಂಬೇಡ್ಕರ ಅವರ ಪ್ರತಿಮೆಗಳನ್ನು ನೋಡಿದ್ದೀರಿ. ನಾವು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಂದ ಬಂದಿದ್ದೇವೆ. ಅವರು ನಮಗೆ ಮೀಸಲಾತಿ ನೀಡಿದರು ಮತ್ತು ಅದಕ್ಕಾಗಿಯೇ ನಾವು ಮುಂದಿದ್ದೇವೆ” ಎಂದು ಜೆಎಂಎಂ ನಾಯಕ ರಾಂಚಿಯಲ್ಲಿ ನಡೆದ ಜೆಎಂಎಂನ 13 ನೇ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸುವ ಮೊದಲು ಹೇಳಿದರು.
“ಭಾರತವು ಬಾಬಾಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರ ಸಂವಿಧಾನದ ಮೇಲೆ ಮಾತ್ರ ನಡೆಯುತ್ತದೆ ಮತ್ತು ಅದು ಸರ್ವೋಚ್ಚವಾಗಿ ಉಳಿಯುತ್ತದೆ” ಎಂದು ಬಿಜೆಪಿ ಹೇಳಿದೆ.
ಎನ್‌ಡಿಎಯ ಮಿತ್ರ ಪಕ್ಷವಾಗಿರುವ ಉತ್ತರ ಪ್ರದೇಶದ ಸಚಿವ ಸಂಜಯ ನಿಶಾದ್, ಹಸನ್ ಅವರಂತಹ ಜನರು ಶರಿಯತ್ ಅನ್ನು ಅನುಸರಿಸಲು ಬಯಸಿದರೆ ಪಾಕಿಸ್ತಾನಕ್ಕೆ ಹೋಗಬೇಕು ಎಂದು ಹೇಳಿದರು.
“ಶರಿಯತ್ ಜನರು ಪಾಕಿಸ್ತಾನ ಎಂಬ ಹೆಸರಿನಲ್ಲಿ ತಮ್ಮದೇ ಆದ ಸ್ಥಳವನ್ನು ಮಾಡಿಕೊಂಡರು. ಅಂತಹ ಜನರು ಅಲ್ಲಿಗೆ ಹೋಗಬೇಕು. ಅವರಿಗೆ ಅಲ್ಲಿಗೆ ಹೋಗಲು ವೀಸಾ ನೀಡಲಾಗುವುದು” ಎಂದು ಅವರು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ