ಕಾಶ್ಮೀರ | ಪಹಲ್ಗಾಮ್‌ ಭಯೋತ್ಪಾದಕ ದಾಳಿಯಲ್ಲಿ ಮತ್ತೊಬ್ಬ ಕನ್ನಡಿಗ ಸಾವು

ಬೆಂಗಳೂರು : ಕಾಶ್ಮೀರದಲ್ಲಿ ಮಂಗಳವಾರ ಭಯೋತ್ಪಾಕರು ಭೀಕರ ಹತ್ಯಾಕಾಂಡ ನಡೆಸಿದ್ದು, 28 ಪ್ರವಾಸಿಗರು ಸಾವಿಗೀಡಾಗಿದ್ದಾರೆ. ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಮತ್ತೊಬ್ಬ ಕನ್ನಡಿಗ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ಮೃತರನ್ನು ಬೆಂಗಳೂರಿನ ಮತ್ತಿಕೆರೆ ಮೂಲದ ಭರತ ಭೂಷಣ (41) ಎಂದು ಗುರುತಿಸಲಾಗಿದೆ. ಇವರು ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿದ್ದಾರೆ. ಭರತ ಭೂಷಣ ಅವರು ಪತ್ನಿ ಹಾಗೂ ಮಗನ ಜೊತೆ ನಾಲ್ಕು ದಿನಗಳ ಹಿಂದೆ ಕಾಶ್ಮೀರ ಪ್ರವಾಸಕ್ಕೆ ಹೋಗಿದ್ದರು. ಭಯೋತ್ಪಾದಕರು ಹಾರಿಸಿದ ಗುಂಡು ಅಮಿತ್‌ ಅವರ ತಲೆಗೆ ತಗುಲಿ ಅವರು ಸಾವಿಗೀಡಾಗಿದ್ದಾರೆ. ಪತ್ನಿ ಹಾಗೂ ಮಗ ಪಾರಾಗಿದ್ದಾರೆ.

ಈ ಘಟನೆಯಲ್ಲಿ ಶಿವಮೊಗ್ಗ ಮೂಲದ ನಿವಾಸಿ ಮಂಜುನಾಥ ರಾವ್‌ ಸಹ ಮೃತಪಟ್ಟಿದ್ದಾರೆ. ಭರತ ಭೂಷಣ ಅವರು ಮಾಜಿ ಸ್ಪೀಕರ್‌ ಕೆ. ಬಿ. ಕೋಳಿವಾಡ ಅವರ ಅಳಿಯನ ಸ್ನೇಹಿತ ಎಂದು ತಿಳಿದು ಬಂದಿದೆ.
ಮಂಗಳವಾರ ಮಧ್ಯಾಹ್ನದ ವೇಳೆ ಪಹಲ್ಗಾಮ್‌ನ ಬೈಸರನ್ ಹುಲ್ಲುಗಾವಲು ಪ್ರದೇಶದಲ್ಲಿ ಕುದುರೆ ಮೇಲೆ ಕುಳಿತು ಪ್ರವಾಸಿಗರು ಸಮಯ ಕಳೆಯುತ್ತಿದ್ದ ವೇಳೆ ಸೈನಿಕರ ಡ್ರೆಸ್‌ನಲ್ಲಿ ಪ್ರವಾಸಿಗರನ್ನು ಮಾತನಾಡಿಸುವ ನೆಪದಲ್ಲಿ ಬಂದು ಉಗ್ರರು ಅವರ ಮೇಲೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ 28 ಮಂದಿ ಸಾವಿಗೀಡಾಗಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಪ್ರಮುಖ ಸುದ್ದಿ :-   ಕೇವಲ 23ನೇ ವಯಸ್ಸಿಗೆ 19 ಸರ್ಕಾರಿ ಪರೀಕ್ಷೆ ಪಾಸ್ ! ರಾಷ್ಟ್ರಪತಿಯಿಂದ 'ಅಟ್-ಹೋಮ್' ಗೌರವಕ್ಕೆ ಆಯ್ಕೆಯಾದ ಯುವತಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement