ನವದೆಹಲಿ : ಉಗ್ರರ ನೆಲೆಗಳ ಮೇಲೆ ಭಾರತ ನಡೆಸಿದ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನವು ಭಾರತೀಯ ಸೇನಾ ನೆಲೆಯನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡಲು ಮುಂದಾಗಿದ್ದು, ಆದರೆ ಬಾರತ ಅದನ್ನು ವಿಫಲಗೊಳಿಸಿದೆ. ಭಾರತವು ಪಾಕ್ ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ಅಲ್ಲದೆ, ಪಾಕಿಸ್ತಾನದ ಫೈಟರ್ ಜೆಟ್ ಎಫ್-16 ಅನ್ನು ಭಾರತೀಯ ಸೇನಾಪಡೆ ಧ್ವಂಸಗೊಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಜಮ್ಮು ವಾಯುನೆಲೆ, ಜೈಸಲ್ಮೇರ್, ಪಠಾಣ್‌ಕೋಟ್, ಅಖ್ನೂರ್, ರಾಜೌರಿ,ಪೂಂಚ್, ತಂಗಹಾರ್, ಸೇರಿದಂತೆ ಗಡಿ ಸಮೀಪದ ಹಲವಾರು ಪ್ರದೇಶಗಳ ಮೇಲೆ ಪಾಕಿಸ್ತಾನ ಡ್ರೋನ್ ದಾಳಿಗೆ ಯತ್ನಿಸಿದ್ದು, ಇದನ್ನು ಭಾರತೀಯ ಸೇನೆ ವಿಫಲಗೊಳಿಸಿದೆ.
ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ಗುಜರಾತ್ ಸೇರಿದಂತೆ ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳ 15 ನಗರಗಳಲ್ಲಿರುವ ಮಿಲಿಟರಿ ಸ್ಥಾಪನೆಗಳನ್ನು ಗುರಿಯಾಗಿಸಿಕೊಂಡು ಭಾರತದೊಂದಿಗೆ ಉದ್ವಿಗ್ನತೆಯನ್ನು ಹೆಚ್ಚಿಸಲು ಪಾಕಿಸ್ತಾನ ನಿನ್ನೆ ತಡರಾತ್ರಿ ಮತ್ತು ಇಂದು ಬೆಳಗಿನ ಜಾವ ಮಾಡಿದ ಪ್ರಯತ್ನಗಳನ್ನು ನಿರಾಕರಿಸಲಾಗಿದೆ ಎಂದು ಸರ್ಕಾರ ಗುರುವಾರ ತಿಳಿಸಿದೆ.
ಶ್ರೀನಗರ, ಪಠಾಣ್‌ಕೋಟ್, ಅಮೃತಸರ, ಲುಧಿಯಾನ, ಚಂಡೀಗಢ ಮತ್ತು ಇತರ ಸ್ಥಳಗಳಲ್ಲಿರುವ ಮಿಲಿಟರಿ ಸೌಲಭ್ಯಗಳ ಮೇಲೆ ದಾಳಿ ಮಾಡಲು ಪಾಕ್ ಮಾಡಿದ ಪ್ರಯತ್ನಗಳಿಗೆ ಪ್ರತಿಕ್ರಿಯೆಯಾಗಿ, ಲಾಹೋರ್ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಪಾಕಿಸ್ತಾನದ ವಾಯು ರಕ್ಷಣಾ ರಾಡಾರ್‌ಗಳು ಮತ್ತು ವ್ಯವಸ್ಥೆಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಪಡೆಗಳು ದಾಳಿ ಮಾಡಿ ಅದನ್ನು ನಾಶಗೊಳಿಸಲಾಗಿದೆ ಎಂದು ಸರ್ಕಾರ ಹೇಳಿದೆ.
ಜಮ್ಮು ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಲು ಪಾಕಿಸ್ತಾನ ವಿಫಲ ಪ್ರಯತ್ನ ನಡೆಸಿದ್ದು,, ಎಸ್ -400 ಹಲವಾರು ಪಾಕ್ ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ಪಾಕಿಸ್ತಾನದಿಂದ ಕಳುಹಿಸಲಾದ ಕ್ಷಿಪಣಿ, ಡ್ರೋನ್‌ಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿದೆ.
ಪಾಕಿಸ್ತಾನದ 1 ಎಫ್-16, 2 ಜೆಎಫ್-17 ಫೈಟರ್ ಜೆಟ್‌ಗಳನ್ನು ಉಡೀಸ್ ಮಾಡಿದೆ. ಜಮ್ಮುವಿನಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ.
ಭಾರತವು ಪಾಕಿಸ್ತಾನದ ವಾಯು ರಕ್ಷಣಾ ಪಡೆಗಳನ್ನು ನಾಶಮಾಡಲು ಹಾರ್ಪಿ ಡ್ರೋನ್‌ಗಳನ್ನು ಬಳಸಿತು, ಅಲ್ಲದೆ, ಭಾರತದ ನಗರಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ ಕ್ಷಿಪಣಿಗಳನ್ನು ಹೊಡೆದುರುಳಿಸಲು ರಷ್ಯಾ ನಿರ್ಮಿತ ಎಸ್ -400 ರಕ್ಷಣಾ ವ್ಯವಸ್ಥೆಯನ್ನು ಬಳಸಿತು ಎಂದು ಮೂಲಗಳು ತಿಳಿಸಿವೆ ಎಂದು ಎಎನ್‌ಐ ವರದಿ ಮಾಡಿದೆ.
ಪ್ರಮುಖವಾಗಿ ಚನಿ ಹಿಮತ್, ಆರ್‌ಎಸ್ ಪುರ, ಜಮ್ಮುವಿನ 3 ಕಡೆಯಲ್ಲಿ ಪಾಕಿಸ್ತಾನ ಸೇನೆಯು ಡ್ರೋನ್ ದಾಳಿಗೆ ಯತ್ನ ಮಾಡಿದೆ. ಇದೇವೇಳೆ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್‌ನಿಂದ ಗುಂಡಿನ ದಾಳಿ ಮುಂದುವರಿದಿದೆ. ಈ ಮಧ್ಯೆ ಜಮ್ಮುವಿನಾದ್ಯಂತ ವಾಯು ದಾಳಿ ಸೈರನ್ ಮೊಳಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ