ಭಾರತದ ʼಆಪರೇಶನ್‌ ಸಿಂಧೂರʼ ; ಪಾಕಿಸ್ತಾನದ ವಾಯುನೆಲೆ-ಸೈನಿಕರಿಗೆ ಹಾನಿಯಾಗಿದ್ದನ್ನು ಒಪ್ಪಿಕೊಂಡ ಪಾಕ್‌ ವಿದೇಶಾಂಗ ಸಚಿವ…!

ಇಸ್ಲಾಮಾಬಾದ್/ನವದೆಹಲಿ: ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನ ಮತ್ತೊಮ್ಮೆ ಮುಖಭಂಗಕ್ಕೀಡಾಗಿದೆ. ಈ ವರ್ಷದ ಮೇ ತಿಂಗಳಲ್ಲಿ ಭಾರತ ನಡೆಸಿದ ʼಆಪರೇಶನ್‌ ಸಿಂಧೂರʼ ಕಾರ್ಯಾಚರಣೆಯ ‘ನಿಖರ ವೈಮಾನಿಕ ದಾಳಿ’ಯಿಂದ (Precision Strikes) ತನ್ನ ಸೇನಾ ನೆಲೆಗಳಿಗೆ ಭಾರಿ ಹಾನಿಯಾಗಿರುವುದನ್ನು ಪಾಕಿಸ್ತಾನ ಕೊನೆಗೂ ಒಪ್ಪಿಕೊಂಡಿದೆ. ಶನಿವಾರ ನಡೆದ ವರ್ಷಾಂತ್ಯದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನದ ವಿದೇಶಾಂಗ ಸಚಿವ ಮತ್ತು ಉಪ ಪ್ರಧಾನಿ ಇಶಾಕ್ … Continued

ಆಪರೇಶನ್‌ ಸಿಂಧೂರ | ಪಾಕಿಸ್ತಾನದ ಮಿರಾಜ್ ಯುದ್ಧ ವಿಮಾನ, ಚೀನಾ ನಿರ್ಮಿತ ಏರ್ ಡಿಫೆನ್ಸ್ ಧ್ವಂಸ : ಸೇನೆಯಿಂದ ವೀಡಿಯೊ ಬಿಡುಗಡೆ

ನವದೆಹಲಿ: ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವಿಗೀಡಾದ ಘಟನೆಗೆ ಪ್ರತಿಯಾಗಿ ಆರಂಭಿಸಲಾದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಯಲ್ಲಿ ಪಾಕಿಸ್ತಾನದ ಮಿರಾಜ್ ಯುದ್ಧ ವಿಮಾನವನ್ನು ಹೊಡೆದುರುಳಿಸಿರುವುದಾಗಿ ಭಾರತ ಸೋಮವಾರ ತಿಳಿಸಿದೆ. ಭಾರತೀಯ ಸೇನೆಯು X ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಪಾಕಿಸ್ತಾನದ ಮಿರಾಜ್ ಜೆಟ್‌ನ ತುಂಡಾಗಿ ಬಿದ್ದಿರುವ ಅವಶೇಷಗಳು ಕಂಡುಬಂದಿವೆ. ಪಾಕಿಸ್ತಾನದ … Continued

15 ನಗರಗಳ ಮೇಲೆ ಗುರಿಯಿಟ್ಟಿದ್ದ ಪಾಕ್ ಡ್ರೋನ್‌ಗಳು- ಕ್ಷಿಪಣಿಗಳನ್ನು ಹೊಡೆದುರುಳಿಸಿದ ಭಾರತ, ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆ ನಾಶ

ನವದೆಹಲಿ : ಉಗ್ರರ ನೆಲೆಗಳ ಮೇಲೆ ಭಾರತ ನಡೆಸಿದ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನವು ಭಾರತೀಯ ಸೇನಾ ನೆಲೆಯನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡಲು ಮುಂದಾಗಿದ್ದು, ಆದರೆ ಬಾರತ ಅದನ್ನು ವಿಫಲಗೊಳಿಸಿದೆ. ಭಾರತವು ಪಾಕ್ ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ಅಲ್ಲದೆ, ಪಾಕಿಸ್ತಾನದ​ ಫೈಟರ್​ ಜೆಟ್​ ಎಫ್‌-16 ಅನ್ನು ಭಾರತೀಯ ಸೇನಾಪಡೆ ಧ್ವಂಸಗೊಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಜಮ್ಮು ವಾಯುನೆಲೆ, … Continued