ಆಪರೇಶನ್ ಸಿಂಧೂರ ಕಾರ್ಯಾಚರಣೆಯ ನಂತರ ಪಾಕಿಸ್ತಾನಕ್ಕೆ ಹಿನ್ನಡೆಯಾಗಿದ್ದು, ಅದನ್ನು ಒಪ್ಪಕೊಳ್ಳದ ಪಾಕಿಸ್ತಾನದ ಈಗ ಪದೇಪದೇ ಮುಜುಗರಕ್ಕೆ ಒಳಗಾಗುತ್ತಿದೆ. ಈಗ ಪಾಕಿಸ್ತಾನಕ್ಕೆ ಅದರ ಉಪಪ್ರಧಾನಿಯೇ ಮತ್ತೊಂದು ಮುಜುಗರಕ್ಕೆ ಕಾರಣರಾಗಿದ್ದಾರೆ. ಪಾಕಿಸ್ತಾನದ ಉಪ ಪ್ರಧಾನಮಂತ್ರಿ ಮತ್ತು ವಿದೇಶಾಂಗ ಸಚಿವರಾದ ಇಶಾಕ್ ದಾರ್ ಅವರು ಸೆನೆಟ್ ಅನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ನಕಲಿ ಸುದ್ದಿಯನ್ನು ಉಲ್ಲೇಖಿಸಿ ತನ್ನ ದೇಶದಲ್ಲೇ ನಗೆಪಾಟಲಿಗೆ ಈಡಾಗಿದ್ದಾರೆ. ಅವರ ಸ್ವಂತ ದೇಶದ ಪತ್ರಿಕೆಗಳೇ ಅವರು ಉಲ್ಲೇಖಿಸಿರುವುದು ನೈಜ ಸುದ್ದಿಯಲ್ಲಿ, ಇದು ಸುಳ್ಳು ಸುದ್ದಿ ಎಂದು ಹೇಳಿವೆ.
ಗುರುವಾರ, ಇಶಾಕ್ ದಾರ್ ತಮ್ಮ ದೇಶದ ವಾಯುಪಡೆಯನ್ನು ಶ್ಲಾಘಿಸುವಾಗ ಬ್ರಿಟನ್ ಮೂಲದ ದಿ ಡೈಲಿ ಟೆಲಿಗ್ರಾಫ್ ಪತ್ರಿಕೆಯ ಪುಟವನ್ನು ಉಲ್ಲೇಖಿಸಿದರು. ಪಾಕಿಸ್ತಾನವು ಭಾರತದ ಆರು ಯುದ್ಧವಿಮಾನಗಳನ್ನು ಹೊಡೆದುರುಳಿಸಿದೆ. ದಿ ಡೈಲಿ ಟೆಲಿಗ್ರಾಫ್ ಪತ್ರಿಕೆಯು “ಪಾಕಿಸ್ತಾನ ವಾಯುಪಡೆಯು ಆಕಾಶದ ನಿರ್ವಿವಾದ ರಾಜ (Pakistan Air Force is the undisputed king of the skies)” ಎಂದು ಬರೆದಿದೆ ಎಂದು ದಾರ್ ತಮ್ಮ ಭಾಷಣದಲ್ಲಿ ಹೇಳಿದ್ದರು.
ಕೆಲವು ಗಂಟೆಗಳ ನಂತರ, ಪಾಕಿಸ್ತಾನದ ಪತ್ರಿಕೆಯಾದ ದಿ ಡಾನ್ ಫ್ಯಾಕ್ಟ್ ಚೆಕ್ ಮಾಡಿ, ದಾರ್ ಉಲ್ಲೇಖಿಸಿದ ವರದಿಯು ವಾಸ್ತವದಲ್ಲಿ ನಕಲಿ ವರದಿಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ ಎಂದು ಸ್ಪಷ್ಟಪಡಿಸಿತು.
ದಿ ಡಾನ್ ವರದಿಯ ಪ್ರಕಾರ, ಈ ವಿಷಯವನ್ನು ಅದರ ಐವೆರಿಫೈ ಪಾಕಿಸ್ತಾನ ತಂಡವು ಪರಿಶೀಲನೆ ನಡೆಸಿತು, ಇದು ವೈರಲ್ ಫೋಟೋದಲ್ಲಿ ವ್ಯತ್ಯಾಸಗಳನ್ನು ಕಂಡುಹಿಡಿದಿದೆ ಮತ್ತು ದಾರ್ ಹೇಳಿದ ಉಲ್ಲೇಖಿಸಿದ ಮಾಹಿತಿಯು ಸುಳ್ಳು ಎಂದು ತೀರ್ಮಾನಿಸಿದೆ. ಅಂತಹ ಯಾವುದೇ ಸುದ್ದಿಯನ್ನು ಹಂಚಿಕೊಂಡಿದೆಯೇ ಎಂದು ನೋಡಲು ದಿ ಡೈಲಿ ಟೆಲಿಗ್ರಾಫ್ ಅನ್ನು ಪರಿಶೀಲಿಸಿತು.
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯ ನಡುವೆ, ಪಾಕಿಸ್ತಾನ ವಾಯುಪಡೆಯನ್ನು “ಆಕಾಶದ ರಾಜ” ಎಂದು ಘೋಷಿಸುವ ದಿ ಡೈಲಿ ಟೆಲಿಗ್ರಾಫ್‌ನ ಮುಖಪುಟವನ್ನು ತೋರಿಸುವ ನಕಲಿ ಚಿತ್ರವು ಮೇ 10 ರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಆದಾಗ್ಯೂ, ಚಿತ್ರದಲ್ಲಿ ಕಾಗುಣಿತ ದೋಷಗಳು, ತಪ್ಪಾಗಿ ಟೈಪ್ ಮಾಡಿದ ಮತ್ತು ಜಂಪ್ ಮಾಡಿದ ವಾಕ್ಯಗಳು ಮತ್ತು ಭಾಷಾ ಅಸಂಗತತೆಗಳು ಸೇರಿದಂತೆ ಹಲವು ವ್ಯತ್ಯಾಸಗಳು ಕಂಡುಬಂದಿವೆ ಎಂದು ವರದಿಯಾಗಿದೆ.
ನಂತರ, ದಿ ಡಾನ್‌ನ ಸತ್ಯ ಪರಿಶೀಲನೆಯನ್ನು ಪಾಕಿಸ್ತಾನ ಮೂಲದ ಹಲವರು ಪ್ರತಿಧ್ವನಿಸಿದರು. “ನಕಲಿ ಸುದ್ದಿಗಳು ಸತ್ಯವನ್ನು ಹೇಗೆ ಮರೆಮಾಡುತ್ತವೆ: ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್ ಅವರು ಸೆನೆಟ್‌ನಲ್ಲಿ ಮಾಡಿದ ಭಾಷಣದಲ್ಲಿ, ಭಾರತದ ಮೇಲೆ ಪಿಎಎಫ್ ಪ್ರಾಬಲ್ಯದ ಮಾಡಿದೆ ಎಂಬುದನ್ನು ಪುಷ್ಟೀಕರಿಸಲು ಈ ಸುಳ್ಳು ಸುದ್ದಿಯನ್ನು ಉಲ್ಲೇಖಿಸಿದರು. ನಿಸ್ಸಂದೇಹವಾಗಿ, ಪಿಎಎಫ್ ಪ್ರಾಬಲ್ಯ ಸಾಧಿಸಿದೆ – ಆದರೆ ಪ್ರಶ್ನೆಯಲ್ಲಿರುವ ಚಿತ್ರ ನಕಲಿ” ಎಂದು ಪಾಕಿಸ್ತಾನಿ ಪತ್ರಕರ್ತರೊಬ್ಬರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಪಾಕಿಸ್ತಾನದ ಅನೇಕ ವಿಶ್ವಾಸಾರ್ಹ ಪತ್ರಕರ್ತರು ದಿನವಿಡೀ ಈ ಚಿತ್ರವನ್ನು ಹಂಚಿಕೊಂಡರು ಮತ್ತು ಉಲ್ಲೇಖಿಸಿದರು, ಇದು “ಪಾಕಿಸ್ತಾನ ವಾಯುಪಡೆ: ದಿ ಅನ್ಡಿಸ್ಪ್ಯೂಟೆಡ್ ಕಿಂಗ್ ಆಫ್ ದಿ ಸ್ಕೈಸ್” ಎಂಬ ಶೀರ್ಷಿಕೆಯೊಂದಿಗೆ ದಿ ಡೈಲಿ ಟೆಲಿಗ್ರಾಫ್‌ನ ಮುಖಪುಟವಾಗಿದೆ ಎಂದು ಹೇಳಿಕೊಂಡರು. ಈ ಚಿತ್ರವು ಕೃತಕಬುದ್ಧಿಮತ್ತೆ (AI)- ರಚಿತ ಚಿತ್ರವಾಗಿದೆ.
ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಕೂಡ ದಾರ್ ಅವರ ವೀಡಿಯೊವನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ” ಇದು ಪಾಕಿಸ್ತಾನದ ಸುಳ್ಳು ಮತ್ತು ಹತಾಶೆಯ ಜಾಲವನ್ನು ಬಹಿರಂಗಪಡಿಸುತ್ತದೆ” ಎಂದು ಬರೆದಿದ್ದಾರೆ. “ಮುಖ ಉಳಿಸಿಕೊಳ್ಳುವ ಸ್ಪಷ್ಟ ಪ್ರಯತ್ನದಲ್ಲಿ, ಉಪ ಪ್ರಧಾನ ಮಂತ್ರಿ ಇಶಾಕ್ ದಾರ್, ದಿ ಟೆಲಿಗ್ರಾಫ್ ಪತ್ರಿಕೆಯು ಪಾಕಿಸ್ತಾನ ವಾಯುಪಡೆಯನ್ನು “ಆಕಾಶದ ನಿರ್ವಿವಾದ ರಾಜ” ಎಂದು ಘೋಷಿಸಿದೆ ಎಂದು ಹೇಳುವ ಮೂಲಕ ದೇಶದ ಸೆನೆಟ್ ಅನ್ನು ದಾರಿ ತಪ್ಪಿಸಿದ್ದಾರೆ. “ಈ ಹೇಳಿಕೆ ಎಷ್ಟು ಆಕ್ರೋಶಭರಿತವಾಗಿತ್ತೆಂದರೆ, ಪಾಕಿಸ್ತಾನದ ಪ್ರಮುಖ ಪತ್ರಿಕೆ ಡಾನ್ ಕೂಡ ಸತ್ಯವನ್ನು ಪರಿಶೀಲಿಸಿ ಅದನ್ನು ಸುಳ್ಳು ಎಂದು ಸಾಬೀತುಪಡಿಸಲು ಒತ್ತಾಯಿಸಲ್ಪಟ್ಟಿತು” ಎಂದು ಅವರು ಬರೆದಿದ್ದಾರೆ.
ಈ ಸುದ್ದಿಯ ತುಣುಕನ್ನು ಪ್ರೆಸ್ ಇನ್ಫರ್ಮೇಷನ್ ಬ್ಯೂರೋದ ಫ್ಯಾಕ್ಟ್ ಚೆಕ್ ತಂಡವು ಸಹ ಸತ್ಯ-ಪರಿಶೀಲನೆ ಮಾಡಿದೆ, ಇದು ಒಂದು ನಕಲಿ ಸುದ್ದಿ ಎಂದು ಹೇಳಿದೆ.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿ, ‘ಆಪರೇಷನ್ ಸಿಂಧೂರ್’ ಅನ್ನು ಪ್ರಾರಂಭಿಸಿದ ನಂತರ, ಭಾರತವು ಪಾಕಿಸ್ತಾನದ ಬಗ್ಗೆ ಹಲವು ಬಾರಿ ಸತ್ಯ ಪರಿಶೀಲನೆ ನಡೆಸಿದೆ.
‘ಆಪರೇಷನ್ ಸಿಂಧೂರ’ ಅಡಿಯಲ್ಲಿ ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿದ ನಂತರ, ಪಾಕಿಸ್ತಾನದ ಬಗ್ಗೆ ಹಲವು ಬಾರಿ ಸುಳ್ಳು ಹೇಳಿರುವುದು ಬಯಲಾಗಿದೆ. ಇದು ಅಂಥದ್ದೇ ಮತ್ತೊಂದು ಘಟನೆಯಷ್ಟೇ.
ನಿಮ್ಮ ಕಾಮೆಂಟ್ ಬರೆಯಿರಿ