ಮನ ಕಲಕುವ ವೀಡಿಯೊ | ಅಕಾಲಿಕ ಮಳೆಯಿಂದ ಕೊಚ್ಚಿ ಹೋಗುತ್ತಿದ್ದ ಧಾನ್ಯ ಉಳಿಸಲು ರೈತನ ಹತಾಶ ಪ್ರಯತ್ನ ; ನಂತರ ಕೇಂದ್ರ ಸಚಿವರಿಂದ ಕರೆ

ನವದೆಹಲಿ: ಮಹಾರಾಷ್ಟ್ರದ ರೈತನೊಬ್ಬ ತನ್ನ ಬೆಳೆಯನ್ನು ಭಾರೀ ಮಳೆಯಲ್ಲಿ ಕೊಚ್ಚಿ ಹೋಗದಂತೆ ತಡೆಯಲು ಹತಾಶ ಪ್ರಯತ್ನ ನಡೆಸಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಮಹಾರಾಷ್ಟ್ರದ ಹಲವಾರು ಜಿಲ್ಲೆಗಳಲ್ಲಿ ಅಕಾಲಿಕ ಮಳೆಯಿಂದಾಗಿ ರೈತರು ಅನುಭವಿಸುತ್ತಿರುವ ನಷ್ಟವನ್ನು ಈ ವೀಡಿಯೊ ಪ್ರತಿಬಿಂಬಿಸುತ್ತದೆ.
ವೀಡಿಯೊದಲ್ಲಿರುವ ರೈತ ಗೌರವ ಪನ್ವಾರ್ ಮಹಾರಾಷ್ಟ್ರದ ವಾಶಿಮ್‌ನ ಮಾರುಕಟ್ಟೆಗೆ ತನ್ನ ಕಡಲೆಕಾಯಿ ಬೆಳೆಯನ್ನು ತಂದಿದ್ದರು. ಧಾರಾಕಾರವಾಗಿ ಮಳೆ ಬೀಳಲು ಆರಂಭಿಸಿ ಅದು ತನ್ನ ಕಷ್ಟಪಟ್ಟು ಸಂಪಾದಿಸಿದ ಬೆಳೆಯನ್ನು ಕಿತ್ತುಕೊಳ್ಳಲು ಪ್ರಾರಂಭಿಸಿದಾಗ, ಪನ್ವಾರ್, ಅಸಹಾಯಕತೆಯಿಂದ, ಅದನ್ನು ತಮ್ಮ ಬರಿ ಕೈಗಳಿಂದ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ.

ಈ ಹೃದಯವಿದ್ರಾವಕ ದೃಶ್ಯವು ಕೇಂದ್ರ ಕೃಷಿ ಸಚಿವರನ್ನು ಮುಟ್ಟಿತು ಹಾಗೂ ಅವರು ರೈತನಿಗೆ ಕರೆ ಮಾಡಿ ಆದ ನಷ್ಟವನ್ನು ಸರ್ಕಾರದಿಂದ ನೀಡಲಾಗುವುದು ಎಂದು ಭರವಸೆ ನೀಡಿದರು.ಕೇಂದ್ರ ಸಚಿವ ಶಿವರಾಜ ಸಿಂಗ್‌ ಚೌಹಾಣ ಅವರು X ನಲ್ಲಿ ಗೌರವ ಪನ್ವಾರ್ ಅವರೊಂದಿಗಿನ ತಮ್ಮ ಸಂಭಾಷಣೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಕರೆಯಲ್ಲಿ, ರೈತ ತಾನು ಬಹಳಷ್ಟು ನಷ್ಟವನ್ನು ಅನುಭವಿಸಿದ್ದೇನೆ ಎಂದು ಹೇಳುವುದನ್ನು ಕೇಳಬಹುದು.
“ಇದು (ವಿಡಿಯೋ) ನನಗೆ ನೋವುಂಟು ಮಾಡಿದೆ. ಆದರೆ, ಚಿಂತಿಸಬೇಡಿ. ಮಹಾರಾಷ್ಟ್ರ ಸರ್ಕಾರವು ರೈತರ ಸಮಸ್ಯೆಯ ಬಗ್ಗೆ ತುಂಬಾ ಸೂಕ್ಷ್ಮವಾಗಿದೆ. ನಾನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ರಾಜ್ಯದ ಕೃಷಿ ಸಚಿವರೊಂದಿಗೆ ಮಾತನಾಡಿದ್ದೇನೆ. ನಾನು ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದೇನೆ. ನೀವು ಮತ್ತು ನಿಮ್ಮ ಕುಟುಂಬವು ಯಾವುದೇ ತೊಂದರೆ ಅನುಭವಿಸದಂತೆ ಯಾವುದೇ ನಷ್ಟ ಸಂಭವಿಸಿದ್ದರೂ ಅದನ್ನು ನೀಡಲಾಗುವುದು” ಎಂದು ಚೌಹಾಣ ಹೇಳಿದ್ದಾರೆ.

“ಸೋಮವಾರದೊಳಗೆ ತಾನು ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುವುದಾಗಿ ಅವರು ತಿಳಿಸಿದ್ದು ನಾವೆಲ್ಲರೂ ನಿಮ್ಮೊಂದಿಗಿದ್ದೇವೆ” ಎಂದು ಭರವಸೆ ನೀಡಿದ್ದಾರೆ.ಮಳೆಯಲ್ಲಿ ಒದ್ದೆಯಾದಾಗಿನಿಂದ, ತಾವು ಸ್ವಲ್ಪ ಅಸ್ವಸ್ಥರಾಗಿರುವುದಾಗಿ ರೈತ ಪನ್ವರ್ ಸಚಿವರಿಗೆ ತಿಳಿಸಿದರು.
ಇದಕ್ಕೂ ಮೊದಲು, ಮಹಾರಾಷ್ಟ್ರ ಎನ್‌ಸಿಪಿ (ಶರದ್ ಪವಾರ್) ಅಧ್ಯಕ್ಷ ಜಯಂತ ಪಾಟೀಲ ಕೂಡ ಈ ವೀಡಿಯೊವನ್ನು ಉಲ್ಲೇಖಿಸಿ, ಸಂತ್ರಸ್ತ ರೈತರಿಗೆ ಪರಿಹಾರ ಮತ್ತು ಬೆಂಬಲ ನೀಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
“ರಾಜ್ಯವು ಭಾರೀ ಅಕಾಲಿಕ ಮಳೆಯನ್ನು ಅನುಭವಿಸುತ್ತಿದೆ, ಹಲವಾರು ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯಾಗಿದೆ. ಇದು ಗಮನಾರ್ಹ ಬೆಳೆ ಹಾನಿಯನ್ನುಂಟುಮಾಡಿದೆ ಮತ್ತು ಹವಾಮಾನ ಇಲಾಖೆಯು ಮುಂಬರುವ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ನೀಡಿದೆ. ಪೀಡಿತ ರೈತರಿಗೆ ತಕ್ಷಣದ ಸಹಾಯವನ್ನು ನೀಡುವಂತೆ ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ” ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಆಪರೇಷನ್ ಸಿಂಧೂರ : ಪಾಕಿಸ್ತಾನದ ಮೇಲೆ ಮತ್ತೊಂದು ಯಶಸ್ವಿ ದಾಳಿಯ ವೀಡಿಯೊ ಬಿಡುಗಡೆ ಮಾಡಿದ ಭಾರತೀಯ ಸೇನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement