2024ರಲ್ಲಿ ಸತ್ಯ ನಾಡೆಲ್ಲಾ, ಪಿಚೈ ಹಿಂದಿಕ್ಕಿ ದಾಖಲೆಯ 1,157 ಕೋಟಿ ರೂ. ಪಡೆದ ಭಾರತೀಯ ಮೂಲದ ಟೆಸ್ಲಾ ಕಾರ್ಯನಿರ್ವಾಹಕ ಅಧಿಕಾರಿ…!

ಟೆಸ್ಲಾ ಕಂಪನಿಯ ಭಾರತೀಯ ಮೂಲದ ಮುಖ್ಯ ಹಣಕಾಸು ಅಧಿಕಾರಿ ವೈಭವ್ ತನೇಜಾ ಅವರು 2024 ರಲ್ಲಿ $139 ಮಿಲಿಯನ್ (ಸುಮಾರು ರೂ. 1,157 ಕೋಟಿ) ಪಡೆದಿದ್ದಾರೆ. 2023 ರ ಬಡ್ತಿಯ ನಂತರದ ಅವರ ವೇತನ ಪ್ಯಾಕೇಜ್, ಷೇರು ಆಯ್ಕೆಗಳು ಮತ್ತು ಇಕ್ವಿಟಿಗಳಿಂದಾಗಿ ಹೆಚ್ಚಿನ ಹಣ ಪಡೆದಿದ್ದಾರೆ. ಇದು ಹಲವಾರು ಉನ್ನತ ಟೆಕ್‌ಕಂಪನಿಗಳ ಸಿಇಒಗಳ ಗಳಿಕೆಯನ್ನು ಮೀರಿಸಿದೆ.
ವೈಭವ್‌ ತನೇಜಾ ಅವರ ಮೂಲ ವೇತನ $400,000 (ರೂ. 3.33 ಕೋಟಿ), ಆದರೆ ಒಟ್ಟು ಗಳಿಕೆಯು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರು $79.1 ಮಿಲಿಯನ್ (658 ಕೋಟಿ ರೂ. ) ಗಳಿಸಿದ್ದನ್ನು ಮತ್ತು ಆಲ್ಫಾಬೆಟ್ ಮುಖ್ಯಸ್ಥ ಸುಂದರ್ ಪಿಚೈ ಅವರು $10.73 ಮಿಲಿಯನ್ (89 ಕೋಟಿ ರೂ.) ಗಳಿಸಿದ್ದನ್ನು ಮೀರಿದೆ.
2017 ರಲ್ಲಿ ಟೆಸ್ಲಾ ಸೇರಿದ 47 ವರ್ಷದ ಕಾರ್ಯನಿರ್ವಾಹಕ ಅಧಿಕಾರಿ ವೈಭವ್‌ ತನೇಜಾ, ಷೇರು ಬೆಲೆ ಏರಿಕೆಯಿಂದ ಲಾಭ ಪಡೆದರು, ಇದು ಮೇ 19, 2025 ರ ಹೊತ್ತಿಗೆ ಟೆಸ್ಲಾ ಶೇರು $342 ( 28,400 ರೂ,) ಕ್ಕೆ ಏರಿದೆ. ವಿದ್ಯುತ್ ವಾಹನ ವಿತರಣೆಗಳು ಮತ್ತು ಲಾಭಗಳು ಕುಸಿದಿದ್ದರೂ, ಟೆಸ್ಲಾದ ಷೇರು ಮೌಲ್ಯದ ಹೆಚ್ಚಳದಿಂದ ಅದರ ಇಕ್ವಿಟಿ ಆಧಾರಿತ ವೇತನವನ್ನು ಗಮನಾರ್ಹವಾಗಿ ಹೆಚ್ಚಿಸಿತು. ತನೇಜಾ ಅವರ ಪಾವತಿಯು ಈಗ ಸಿಎಫ್‌ಒಗೆ ಪಾವತಿ ಮಾಡಿದ ಇದುವರೆಗಿನ ಅತ್ಯಧಿಕ ವೇತನವಾಗಿದೆ, 2024 ರಲ್ಲಿ ಕಂಪನಿಯು ದಿವಾಳಿತನಕ್ಕೆ ಅರ್ಜಿ ಸಲ್ಲಿಸುವ ಮೊದಲು 2020 ರಲ್ಲಿ ನಿಕೋಲಾ ಸಿಎಫ್‌ಒ ಸ್ಥಾಪಿಸಿದ್ದ ಹಿಂದಿನ ದಾಖಲೆಯಾದ $86 ಮಿಲಿಯನ್ (715 ಕೋಟಿ ರೂ.) ಅನ್ನು ಮೀರಿಸಿದೆ.

ಪ್ರಮುಖ ಸುದ್ದಿ :-   ಆಪರೇಷನ್ ಸಿಂಧೂರ | ಭಾರತದ ವಿರುದ್ಧ ಸೋಲಿನ ನಂತರವೂ ಪಾಕಿಸ್ತಾನದ ಸೇನಾ ಮುಖ್ಯಸ್ಥನಿಗೆ ಅತ್ಯುನ್ನತ ಮಿಲಿಟರಿ ಹುದ್ದೆಗೆ ಬಡ್ತಿ...!

ವೈಭವ್ ತನೇಜಾ ಯಾರು?
ವೈಭವ್ ತನೇಜಾ ಒಬ್ಬ ಚಾರ್ಟರ್ಡ್ ಅಕೌಂಟೆಂಟ್. ಅವರು ದೆಹಲಿ ವಿಶ್ವವಿದ್ಯಾಲಯದಿಂದ ವಾಣಿಜ್ಯ ಪದವಿ ಪಡೆದಿದ್ದಾರೆ ಎಂದು ಅವರ ಲಿಂಕ್ಡ್‌ಇನ್ ತಿಳಿಸಿದೆ.
ತನೇಜಾ ಅವರು ಭಾರತ ಮತ್ತು ಅಮೆರಿಕ ಎರಡರಲ್ಲೂ 17 ವರ್ಷಗಳ ಕಾಲ (1999-2016) ಪ್ರೈಸ್‌ ವಾಟರ್‌ ಹೌಸ್‌ ಕೂಪರ್ಸ್ (PwC) ನಲ್ಲಿ ಕೆಲಸ ಮಾಡಿದರು.
ಮಾರ್ಚ್ 2016 ರಲ್ಲಿ, ತನೇಜಾ ಸೌರಶಕ್ತಿ ಕಂಪನಿಯಾದ ಸೋಲಾರ್‌ ಸಿಟಿ ಕಾರ್ಪೊರೇಷನ್‌ಗೆ ಸೇರಿದರು. ಸೋಲಾರ್‌ಸಿಟಿಯಲ್ಲಿ, ಅವರು ಉಪಾಧ್ಯಕ್ಷರಾಗಿ ಮತ್ತು ನಂತರ ಕಾರ್ಪೊರೇಟ್ ನಿಯಂತ್ರಕರಾಗಿ ಸೇವೆ ಸಲ್ಲಿಸಿದರು. ಅದೇ ವರ್ಷದಲ್ಲಿ ಟೆಸ್ಲಾ ಸೋಲಾರ್‌ ಸಿಟಿಯನ್ನು ಸ್ವಾಧೀನಪಡಿಸಿಕೊಂಡರು, ನಂತರ ತನೇಜಾ ಎರಡೂ ಕಂಪನಿಗಳ ಯಶಸ್ವಿ ಏಕೀಕರಣದ ವೇಳೆ ಲೆಕ್ಕಪತ್ರ ತಂಡಗಳನ್ನು ಮುನ್ನಡೆಸಿದರು.
ಅವರು 2017 ರಲ್ಲಿ ಟೆಸ್ಲಾವನ್ನು ಸೇರಿದರು, ಸಹಾಯಕ ಕಾರ್ಪೊರೇಟ್ ನಿಯಂತ್ರಕರಾಗಿ ಪ್ರಾರಂಭಿಸಿ 2018 ರಲ್ಲಿ ಟೆಸ್ಲಾ’ಸ್ ಕಾರ್ಪೊರೇಟ್ ನಿಯಂತ್ರಕರಾಗಿ ಸೇವೆ ಸಲ್ಲಿಸಿದರು. 2019 ರಲ್ಲಿ, ಅವರನ್ನು ಟೆಸ್ಲಾ’ಸ್‌ನಲ್ಲಿ ಮುಖ್ಯ ಲೆಕ್ಕಪತ್ರ ಅಧಿಕಾರಿಯಾಗಿ ಬಡ್ತಿ ನೀಡಲಾಯಿತು.
2021 ರಲ್ಲಿ, ವೈಭವ್ ತನೇಜಾ ಅವರನ್ನು ಟೆಸ್ಲಾದ ಭಾರತೀಯ ಅಂಗಸಂಸ್ಥೆಯಾದ ಟೆಸ್ಲಾ ಇಂಡಿಯಾ ಮೋಟಾರ್ಸ್ ಮತ್ತು ಎನರ್ಜಿ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾಗಿ ನೇಮಿಸಲಾಯಿತು. ಅವರನ್ನು ಆಗಸ್ಟ್ 2023 ರಲ್ಲಿ ಟೆಸ್ಲಾ’ಸ್‌ನ ಮುಖ್ಯ ಹಣಕಾಸು ಅಧಿಕಾರಿ (CFO) ಆಗಿ ನೇಮಿಸಲಾಯಿತು.

ಪ್ರಮುಖ ಸುದ್ದಿ :-   ಆಪರೇಷನ್ ಸಿಂಧೂರ | ಭಾರತದ ವಿರುದ್ಧ ಸೋಲಿನ ನಂತರವೂ ಪಾಕಿಸ್ತಾನದ ಸೇನಾ ಮುಖ್ಯಸ್ಥನಿಗೆ ಅತ್ಯುನ್ನತ ಮಿಲಿಟರಿ ಹುದ್ದೆಗೆ ಬಡ್ತಿ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement