ಮತ್ತೊಂದು ಮಾರಕ ವೈರಸ್‌ ಬಗ್ಗೆ ಭವಿಷ್ಯ ನುಡಿದ ಜಪಾನ್‌ ಬಾಬಾ ವಂಗಾ ; 2030ರಲ್ಲಿ ವೈರಸ್ ಉಲ್ಬಣಕ್ಕೆ ನೂರಾರು ಜನರಿಗೆ ಪ್ರಾಣಾಪಾಯ ಎಂದು ಮುನ್ಸೂಚನೆ

ಬಲ್ಗೇರಿಯನ್ ಪ್ರವಾದಿ ಬಾಬಾ ವಂಗಾ ಅವರನ್ನು ಹೋಲುವ ಜಪಾನ್‌ನ ಪ್ರಸಿದ್ಧ ಅತೀಂದ್ರಿಯ ವ್ಯಕ್ತಿಯೊಬ್ಬರು ಭವಿಷ್ಯದ ಮತ್ತೊಂದು ಸಾಂಕ್ರಾಮಿಕ ರೋಗದ ಜಾಗತಿಕ ಬಿಕ್ಕಟ್ಟಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ನಿಖರವಾದ ಭವಿಷ್ಯವಾಣಿಗಳಿಗೆ ಹೆಸರುವಾಸಿಯಾದ ಜಪಾನ್‌ನ ಬಾಬಾ ವಂಗಾ ಎಂದೇ ಕರೆಯಲ್ಪಡುವ ರಿಯೊ ತತ್ಸುಕಿ ಅವರು, 2030 ರಲ್ಲಿ ಹೊರಹೊಮ್ಮುವ ಮಾರಕ ವೈರಸ್ ಬಗ್ಗೆ ಎಚ್ಚರಿಸಿದ್ದಾರೆ. ಈ ವೈರಸ್ ಕೋವಿಡ್‌-19 (COVID-19) ಸಾಂಕ್ರಾಮಿಕ ರೋಗವನ್ನು ನೆನಪಿಸುತ್ತದೆ ಮತ್ತು ಜಾಗತಿಕವಾಗಿ ಆರೋಗ್ಯದ ಗಮನಾರ್ಹವಾಗಿ ತೊಂದರೆ ಉಂಟುಮಾಡಬಹುದು ಎಂದು ಅವರು ಹೇಳುತ್ತಾರೆ.
ತನ್ನ ಭವಿಷ್ಯವಾಣಿಯ ನಿಖರತೆಯಿಂದಾಗಿ ‘ಜಪಾನ್‌ ಬಾಬಾ ವಂಗಾ’ ಎಂದೇ ಹೆರಾಗಿರುವ ತತ್ಸುಕಿ ಅವರು, ಫ್ರೆಡ್ಡಿ ಮರ್ಕ್ಯುರಿ ಮತ್ತು ರಾಜಕುಮಾರಿ ಡಯಾನಾ ಅವರ ಸಾವುಗಳು, 2011 ರ ಕೋಬ್ ಭೂಕಂಪ ಮತ್ತು ಕೋವಿಡ್‌-19 ಸಾಂಕ್ರಾಮಿಕ ರೋಗದಂತಹ ಅನೇಕ ವಿದ್ಯಮಾನಗಳ  ಬಗ್ಗೆ ಈ ಹಿಂದೆ ನಿಖರ ಭವಿಷ್ಯ ನುಡಿದಿದ್ದಾರೆ ಎಂದು ಹೇಳಲಾಗಿದೆ.

‘ದಿ ಫ್ಯೂಚರ್ ಆಸ್ ಐ ಸೀ ಇಟ್’ (1999) ಎಂಬ ತನ್ನ ಪುಸ್ತಕದಲ್ಲಿ, ಅವರು ಏಪ್ರಿಲ್ 2020 ರಲ್ಲಿ ಅಜ್ಞಾತ ವೈರಸ್ ಉತ್ತುಂಗಕ್ಕೇರುವ ಬಗ್ಗೆ ಭವಿಷ್ಯ ನುಡಿದಿದ್ದರು. ಅದು ನಂತರ ಕರಗಿ, ಒಂದು ದಶಕದ ನಂತರ ಮತ್ತೆ ಮರಳುತ್ತದೆ ಎಂದು ಹೇಳಿದ್ದರು. ಈಗ ಅವರು 2030 ರಲ್ಲಿ ಮತ್ತೊಂದು, ಇನ್ನೂ ಹೆಚ್ಚು ವಿನಾಶಕಾರಿ ವೈರಸ್ ತೊಂದರೆ ಉಂಟುಮಾಡಬಹುದು ಎಂದು ಮುನ್ಸೂಚನೆ ನೀಡಿದ್ದಾರೆ. ಇದು ಅನೇಕ ಸಾವುನೋವುಗಳನ್ನು ಉಂಟುಮಾಡಬಹುದು ಎಂದು ಹೇಳಿದ್ದಾರೆ.
ತತ್ಸುಕಿಯ ಭವಿಷ್ಯವಾಣಿಗಳು ಆತಂಕವನ್ನು ಸೃಷ್ಟಿಸಿದೆ. ಅವರು ವೈರಸ್‌ ಭವಿಷ್ಯವಾಣಿಯ ಜೊತೆಗೆ, ಜುಲೈ 2025 ರಲ್ಲಿ ಜಪಾನ್‌ನಲ್ಲಿ ಸಂಭವಿಸುವ ಪ್ರಮುಖ ಭೂಕಂಪದ ಬಗ್ಗೆಯೂ ಎಚ್ಚರಿಕೆ ನೀಡಿದ್ದಾರೆ.
ಭೂಕಂಪದಿಂದ ಸಕ್ರಿಯವಾಗಿರುವ ಪ್ರದೇಶದಲ್ಲಿ ನೆಲೆಗೊಂಡಿರುವ ಜಪಾನ್, ವಾರ್ಷಿಕವಾಗಿ ಸುಮಾರು 1,500 ಭೂಕಂಪಗಳನ್ನು ಅನುಭವಿಸುತ್ತದೆ, ಅವುಗಳಲ್ಲಿ ಹಲವು ಕಡಿಮೆ ತೀವ್ರತೆಯಿರುವ ಕಾರಣಕ್ಕೆ ಗಮನಕ್ಕೆ ಬರುವುದಿಲ್ಲ. ಆದಾಗ್ಯೂ, 2011 ರ ಭೂಕಂಪ ಮತ್ತು ನಂತರದ ಸುನಾಮಿಯು ಫುಕುಶಿಮಾ ಪರಮಾಣು ಸ್ಥಾವರಕ್ಕೆ ಹಾನಿ ಸೇರಿದಂತೆ ವ್ಯಾಪಕ ವಿನಾಶವನ್ನು ಉಂಟುಮಾಡಿತು, ಈ ಘಟನೆಯ ಬಗ್ಗೆ ತತ್ಸುಕಿ ಮೊದಲೇ ಭವಿಷ್ಯ ನುಡಿದಿದ್ದರು.

ಪ್ರಮುಖ ಸುದ್ದಿ :-   ತನ್ನ ಬುಡಕ್ಕೇ ಬಂದಾಗ...| ರಷ್ಯಾ ತೈಲ ಖರೀದಿಗೆ ಭಾರತದ ಮೇಲೆ ಉದ್ದೇಶಿತ ಶೇ.100 ಸುಂಕಕ್ಕೆ ತಾತ್ಕಾಲಿಕ ವಿನಾಯಿತಿ ಘೋಷಿಸಿದ ಟ್ರಂಪ್

ತತ್ಸುಕಿಯ ಪುಸ್ತಕದ ಇತ್ತೀಚಿನ ನವೀಕರಿಸಿದ ಆವೃತ್ತಿಯು ಅವರ ಭೂಕಂಪದ ಮುನ್ಸೂಚನೆಯನ್ನು ಪುನರುಚ್ಚರಿಸಿದೆ, ಇದು ಜಪಾನ್‌ನ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಿದೆ. ಹಾಂಗ್ ಕಾಂಗ್ ಪ್ರಯಾಣ ಸಂಸ್ಥೆ WWPKG ಯ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಯುಯೆನ್ ಅವರು, ಈಸ್ಟರ್ ಸಮಯದಲ್ಲಿ ಜಪಾನ್‌ಗೆ ಪ್ರಯಾಣದ ಬುಕಿಂಗ್‌ಗಳಲ್ಲಿ ಗಮನಾರ್ಹ ಕುಸಿತ ಕಂಡುಬಂದಿದೆ ಎಂದು ಹೇಳಿದ್ದಾರೆ. ಮುಂಬರುವ ತಿಂಗಳುಗಳಲ್ಲಿ ಪ್ರವಾಸವು ಮತ್ತಷ್ಟು ಕುಸಿತವಾಗಬಹುದು ನಿರೀಕ್ಷಿಸಲಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement