70 ವರ್ಷಗಳ ಲಿವ್-ಇನ್ ಸಂಬಂಧದ ನಂತರ 90 ವರ್ಷದ ಸಂಗಾತಿ ಮದುವೆಯಾದ 95 ವರ್ಷದ ವ್ಯಕ್ತಿ…!

ರಾಜಸ್ಥಾನದ ವೃದ್ಧ ದಂಪತಿಯೊಬ್ಬರು 70 ವರ್ಷಗಳ ಕಾಲ ಲಿವ್-ಇನ್ ಸಂಬಂಧ (live-in relationship)ದಲ್ಲಿ ಕಳೆದ ನಂತರ ಈಗ ವಿವಾಹವಾಗಿದ್ದಾರೆ. ಈ ಮದುವೆಯಲ್ಲಿ ವರ 95 ವರ್ಷದ ರಾಮಭಾಯಿ ಅಂಗಾರಿ ಮತ್ತು ವಧು, 90 ವರ್ಷದ ಜೀವಲಿ ದೇವಿ, ಡುಂಗರಪುರ ಜಿಲ್ಲೆಯ ಗಲಂದರ್ ಗ್ರಾಮದಲ್ಲಿ ತಮ್ಮ ಕುಟುಂಬ ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಪರಸ್ಪರ ವಿವಾಹವಾದರು.
ರಾಜಸ್ಥಾನದ ಬುಡಕಟ್ಟು ಸಮುದಾಯದ ಸಾಂಪ್ರದಾಯಿಕ ನಾತಾ ವ್ಯವಸ್ಥೆಯಡಿಯಲ್ಲಿ ಇವರಿಬ್ಬರು 70 ವರ್ಷಗಳ ಕಾಲ ಒಟ್ಟಿಗೆ ವಾಸಿಸಿದ ನಂತರ ಈಗ ವಿವಾಹವಾಗಿದ್ದಾರೆ. ಎಲ್ಲಾ ವಿವಾಹ ವಿಧಿಗಳನ್ನು ಅನುಸರಿಸಿದ ದಂಪತಿ, ಜೋತ್ರಿ ಪಂಚಾಯತ್‌ನ ಗಲಂದರ್ ಗ್ರಾಮದಲ್ಲಿ ಕುಟುಂಬ, ನೆರೆಹೊರೆಯವರು ಮತ್ತು ಸಮುದಾಯದ ಸದಸ್ಯರ ಸಮ್ಮುಖದಲ್ಲಿ ವಿವಾಹವಾದರು.

ವರದಿಗಳ ಪ್ರಕಾರ,ಏಳು ದಶಕಗಳಿಂದ ನಾತಾ ಸಂಪ್ರದಾಯದಡಿಯಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದ 95 ವರ್ಷದ ರಾಮ ಅಂಗಾರಿ ಮತ್ತು 90 ವರ್ಷದ ಜೀವಲಿ ದೇವಿಗೆ ಆರು ಮಕ್ಕಳಿದ್ದಾರೆ. ಅವರಲ್ಲಿ ನಾಲ್ಕು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು. ಅವರ ಮಕ್ಕಳಲ್ಲಿ, ನಾಲ್ವರು ಪ್ರಸ್ತುತ ಸರ್ಕಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಹಿರಿಯ ಮಗ ಬಾಕು ಅಂಗಾರಿ (60) ಒಬ್ಬ ರೈತ. ಎರಡನೇ ಮಗ ಶಿವರಾಮ (55) ಮತ್ತು ಮೂರನೇ ಮಗ ಕಾಂತಿಲಾಲ (52) ಶಿಕ್ಷಕರು. ನಾಲ್ಕನೇ ಮಗ ಲಕ್ಷ್ಮಣ (52) ರೈತರಾಗಿದ್ದಾರೆ. ಅವರ ಹೆಣ್ಣುಮಕ್ಕಳಾದ ಸುನೀತಾ ಮತ್ತು ಅನಿತಾ ಕ್ರಮವಾಗಿ ಶಿಕ್ಷಕಿ ಮತ್ತು ನರ್ಸ್ ಆಗಿದ್ದಾರೆ. ಮದುವೆ ಸಮಾರಂಬಲ್ಲಿ ಮಕ್ಕಳು, ಮೊಮ್ಮಕ್ಕಳು, ಸೋದರಸಂಬಂಧಿಗಳು, ಸೋದರಳಿಯರು ಮತ್ತು ಸೊಸೆಯಂದಿರು ಸಹ ಮದುವೆ ಭಾಗವಹಿಸಿದ್ದರು.

ಪ್ರಮುಖ ಸುದ್ದಿ :-   ಮುಂಬೈ ಲೋಕಲ್ ರೈಲಿನಿಂದ ಬಿದ್ದು 5 ಮಂದಿಯ ಸಾವಿನ ಶಂಕೆ ; ಹಲವರಿಗೆ ಗಾಯ

ಈ ಸಂದರ್ಭವನ್ನು ಗುರುತಿಸಲು, ರಾಮ ಅಂಗಾರಿ ಅವರಿಗೆ ಸಾಂಪ್ರದಾಯಿಕ ಬಿನೋಲಿ ಎಂಬ ಆಚರಣೆಯ ಪೂರ್ವ-ವಿವಾಹ ಮೆರವಣಿಗೆಯನ್ನು ನಡೆಸಲಾಯಿತು. ಅಧಿಕೃತವಾಗಿ ಮದುವೆಯಾಗಬೇಕೆಂಬ ಪೋಷಕರ ಆಸೆಯನ್ನು ಪೂರೈಸಿದ ದಂಪತಿ ಮಕ್ಕಳು ದೊಡ್ಡ ವಿವಾಹ ಸಮಾರಂಭವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಸಂಗೀತ, ನೃತ್ಯ ಮತ್ತು ಹಳ್ಳಿಯಲ್ಲಿ ಸಭೆ ಸೇರಿತ್ತು. ದಂಪತಿ ವಿವಾಹವು ಮದುವೆಯ ಎಲ್ಲ ಪದ್ಧತಿಗಳನ್ನು ಒಳಗೊಂಡಿತ್ತು: ಹಲ್ದಿ, ಮೆಹಂದಿ, ಮತ್ತು ಡಿಜೆಗಳು, ನೃತ್ಯ ಮತ್ತು ಹಳ್ಳಿಯಾದ್ಯಂತ ಆಚರಣೆಗಳೊಂದಿಗೆ ಪೂರ್ಣ ಪ್ರಮಾಣದ ಬಿಂದೋರಾ ಮೆರವಣಿಗೆ ನಡೆಯಿತು. ವೃದ್ಧ ದಂಪತಿ ಪವಿತ್ರ ವಿವಾಹ ಪ್ರತಿಜ್ಞೆ ತೆಗೆದುಕೊಂಡರು. ಗ್ರಾಮಸ್ಥರು ಭಾಗವಹಿಸಿದ್ದರು ಮತ್ತು ಸಮಾರಂಭವನ್ನು ವೀಕ್ಷಿಸಲು ಸಾವಿರಾರು ಜನರು ಸೇರಿದ್ದರು.

ನಾತಾ ಸಂಪ್ರದಾಯ ಎಂದರೇನು?
ರಾಜಸ್ಥಾನದ ಬುಡಕಟ್ಟು ಸಮುದಾಯಗಳಲ್ಲಿ ಶತಮಾನಗಳಿಂದ ನಾತಾ ಸಂಪ್ರದಾಯವನ್ನು ಅನುಸರಿಸಲಾಗುತ್ತಿದೆ. ಈ ರಾಜ್ಯದಲ್ಲಿ ಆಚರಿಸಲಾಗುವ ಈ ವಿಶಿಷ್ಟ ಸಂಪ್ರದಾಯವು ಪುರುಷರು ಮತ್ತು ಮಹಿಳೆಯರು ಮದುವೆಯಿಲ್ಲದೆ ಒಟ್ಟಿಗೆ ವಾಸಿಸಲು ಅನುವು ಮಾಡಿಕೊಡುತ್ತದೆ. ಅಂತಹ ಸಂಬಂಧದಿಂದ ಜನಿಸಿದ ಮಕ್ಕಳು ತಮ್ಮ ತಂದೆಯ ಆಸ್ತಿಯ ಸಂಪೂರ್ಣ ಆನುವಂಶಿಕ ಹಕ್ಕುಗಳನ್ನು ಹೊಂದಿರುತ್ತಾರೆ. ಆದಾಗ್ಯೂ ಔಪಚಾರಿಕವಾಗಿ, ದಂಪತಿ, ವಿಶೇಷವಾಗಿ ಮಹಿಳೆಯರು, ಹೆಚ್ಚಾಗಿ ಸಾಮಾಜಿಕ ನಿರ್ಬಂಧಗಳನ್ನು ಎದುರಿಸುತ್ತಾರೆ. ಅವರನ್ನು ಸಾಮಾನ್ಯವಾಗಿ ಮದುವೆಗಳು, ಹಲ್ದಿ ಸಮಾರಂಭ ಮತ್ತು ವರನನ್ನು ಮೆರವಣಿಗೆಯಲ್ಲಿ ಸ್ವಾಗತಿಸುವಂತಹ ಪ್ರಮುಖ ಸಮಾರಂಭಗಳಿಂದ ಹೊರಗಿಡಲಾಗುತ್ತದೆ.
ಈ ಮಿತಿಗಳನ್ನು ನಿವಾರಿಸಲು ಮತ್ತು ಪೂರ್ಣ ಸಾಮಾಜಿಕ ಮನ್ನಣೆಯನ್ನು ಪಡೆಯಲು, ಅನೇಕ ಬುಡಕಟ್ಟು ದಂಪತಿ ಈಗ ದಶಕಗಳ ಕಾಲ ಒಟ್ಟಿಗೆ ವಾಸಿಸಿದ ನಂತರವೂ ಔಪಚಾರಿಕ ವಿವಾಹ ಮಾಡಿಕೊಳ್ಳುತ್ತಿದ್ದಾರೆ. 70 ವರ್ಷಗಳ ಕಾಲ ಒಟ್ಟಿಗೆ ಬದುಕಿದ ನಂತರ ರಾಮ ಭಾಯಿ ಮತ್ತು ಜೀವ್ಲಿ ದೇವಿ ಅವರ ಇತ್ತೀಚಿನ ವಿವಾಹವು ಬುಡಕಟ್ಟು ಸಮಾಜದಲ್ಲಿ ಹಕ್ಕುಗಳು, ಗೌರವದ ಕಡೆಗೆ ಬೆಳೆಯುತ್ತಿರುವ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ.

ಪ್ರಮುಖ ಸುದ್ದಿ :-   ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ; ಕೇಂದ್ರ ಸಚಿವ ಚಿರಾಗ್‌ ಪಾಸ್ವಾನ್‌ ಘೋಷಣೆ ; ಬದಲಾಗಲಿದೆಯೇ ಬಿಹಾರ ರಾಜಕೀಯ ಚಿತ್ರಣ..?

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement