ವರದಕ್ಷಿಣೆಯಾಗಿ ಕಿಡ್ನಿಯನ್ನೇ ನೀಡು ಎಂದು ಸೊಸೆಗೆ ಹೇಳಿದ ಅತ್ತೆ-ಮಾವ…!

ಪಾಟ್ನಾ:  ಬಿಹಾರದ ಮಹಿಳೆಯೊಬ್ಬರಿಗೆ ಬೈಕ್, ನಗದು ಮತ್ತು ಆಭರಣಗಳನ್ನು ವರದಕ್ಷಿಣೆಯಾಗಿ ತರಲು ಸಾಧ್ಯವಾಗದಿದ್ದರೆ ಅವರ ಪತಿಗೆ ಮೂತ್ರಪಿಂಡ ದಾನ ಮಾಡುವಂತೆ ಅವರ ಅತ್ತೆ-ಮಾವಂದಿರು ಬೇಡಿಕೆ ಇಟ್ಟಿದ್ದಾರೆ ಎಂದು ವರದಿಯಾಗಿದೆ.
ಉತ್ತರ ಬಿಹಾರದ ಮುಜಫರಪುರದಲ್ಲಿ ತಮ್ಮ ಮಗನಿಗೆ ವರದಕ್ಷಿಣೆಯಾಗಿ ಮೂತ್ರಪಿಂಡವನ್ನು ಬೇಡಿಕೆಯಿಟ್ಟ ವಿಚಿತ್ರ ಘಟನೆ ವರದಿಯಾಗಿದೆ. ಈ ಸಂಬಂಧ ಮುಜಫರಪುರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಪೊಲೀಸರಿಗೆ ಈ ಬಗ್ಗೆ ಹೇಳಿದ ಮಹಿಳೆ, ತಾನು 2021 ರಲ್ಲಿ ವಿವಾಹವಾಗಿದ್ದು,, ತನ್ನ ಅತ್ತೆ-ಮಾವನ ಮನೆ ಮುಜಫರಪುರದ ಬೊಚಾಹಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದೆ ಎಂದು ಹೇಳಿದ್ದಾರೆ.

ಮದುವೆಯ ನಂತರ ಆರಂಭದಲ್ಲಿ ಎಲ್ಲವೂ ಸುಗಮವಾಗಿ ನಡೆಯುತ್ತಿತ್ತು ಆದರೆ ನಂತರ ಅತ್ತೆ-ಮಾವಂದಿರು ತನ್ನನ್ನು ಮಾನಸಿಕವಾಗಿ ಹಿಂಸಿಸಲು ಪ್ರಾರಂಭಿಸಿದರು ಮತ್ತು ದೈಹಿಕವಾಗಿ ಹಲ್ಲೆ ನಡೆಸಿದರು, ತವರು ಮನೆಯಿಂದ ಬೈಕ್ ಮತ್ತು ಹಣವನ್ನು ತರುವಂತೆ ತಾಕೀತು ಮಾಡಿದರು. ಅವರ ಬೇಡಿಕೆಗಳನ್ನು ಒಪ್ಪಲು ಸಾಧ್ಯವಾಗದ ಕಾರಣ, ತಮ್ಮ ಅತ್ತೆ-ಮಾವಂದಿರು ತಮ್ಮ ಅನಾರೋಗ್ಯ ಪೀಡಿತ ಪತಿಗೆ ತನ್ನ ಮೂತ್ರಪಿಂಡಗಳಲ್ಲಿ ಒಂದನ್ನು ದಾನ ಮಾಡುವಂತೆ ಒತ್ತಾಯಿಸಲು ಪ್ರಾರಂಭಿಸಿದರು ಎಂದು ಹೇಳಿದ್ದಾರೆ.
ನನ್ನ ಮದುವೆಯಾದ ಎರಡು ವರ್ಷಗಳ ನಂತರ ನನ್ನ ಗಂಡನ ಮೂತ್ರಪಿಂಡದ ಕಾಯಿಲೆಯ ಬಗ್ಗೆ ನನಗೆ ತಿಳಿದುಬಂತು ಎಂದು ಮಹಿಳೆ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಅಹಮದಾಬಾದ್ ವಿಮಾನ ಅಪಘಾತ : ಭಾರತದ 10 ಅತಿ ದೊಡ್ಡ ವಿಮಾನ ದುರಂತಗಳು

“ಆರಂಭದಲ್ಲಿ, ನನ್ನ ಅತ್ತೆ-ಮಾವ ನನ್ನ ಮೂತ್ರಪಿಂಡವನ್ನು   ಪತಿಗೆ ದಾನ ಮಾಡು ಎಂದು ಹಾಗೆ ಸುಮ್ಮನೆ ಹೇಳುತ್ತಿದ್ದಾರೆಂದು ನಾನು ಭಾವಿಸಿದ್ದೆ. ಆದರೆ ನಂತರ ಅವರು ನನ್ನ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದರು. ನಾನು ನನ್ನ ಮೂತ್ರಪಿಂಡವನ್ನು ದಾನ ಮಾಡಲು ನಿರಾಕರಿಸಿದೆ ಮತ್ತು ಅವರ ಒತ್ತಡಕ್ಕೆ ಮಣಿಯಲಿಲ್ಲ. ಅನಂತರ ನನ್ನನ್ನು ಥಳಿಸಲಾಯಿತು ಮತ್ತು ಮನೆಯಿಂದ ಹೊರಹಾಕಲಾಯಿತು” ಎಂದು ಅವರು ಮಾಹಿತಿ ನೀಡಿದ್ದಾರೆ.”ನಾನು ನಂತರ ನನ್ನ ತವರು ಮನೆಗೆ ಹೋಗಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ” ಎಂದು ಅವರು ಹೇಳಿದರು.
ಪೊಲೀಸರು ಎರಡೂ ಕಡೆಯವರ ನಡುವೆ ಸಂಧಾನದ ಮಾತುಕತೆ ಪ್ರಯತ್ನಿಸಿದರು, ಆದರೆ ಯಶಸ್ವಿಯಾಗಲಿಲ್ಲ. ಮಹಿಳೆ ತನ್ನ ಪತಿಯಿಂದ ವಿಚ್ಛೇದನ ಬೇಕು ಎಂದು ಹೇಳಿದ್ದಾರೆ. ಆದರೆ ಗಂಡ ಅದಕ್ಕೆ ಒಪ್ಪಲಿಲ್ಲ. ನಂತರ, ಮಹಿಳಾ ಪೊಲೀಸ್ ಠಾಣೆಯಲ್ಲಿ 38/25 ಪ್ರಕರಣ ದಾಖಲಾಗಿದ್ದು, ಆಕೆಯ ಪತಿ ಸೇರಿದಂತೆ ಆಕೆಯ ಅತ್ತೆ-ಮಾವನ ಕುಟುಂಬದ ನಾಲ್ವರು ಸದಸ್ಯರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ.
ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ ತನಿಖೆ ಆರಂಭಿಸಲಾಗಿದೆ ಎಂದು ಎಸ್ಪಿ (ಗ್ರಾಮೀಣ) ವಿದ್ಯಾಸಾಗರ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಅಹಮದಾಬಾದ್ ವಿಮಾನ ಪತನ | ವಿಮಾನದಲ್ಲಿದ್ದವರು ಯಾವ್ಯಾವ ದೇಶಕ್ಕೆ ಸೇರಿದವರು ಎಂಬ ಮಾಹಿತಿ ನೀಡಿದ ಏರ್‌ ಇಂಡಿಯಾ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement