ಏರ್‌ ಕಂಡಿಶನ್‌ ವ್ಯವಸ್ಥೆ ಇಲ್ಲ ಎಂದು ಮದುವೆಯನ್ನೇ ರದ್ದುಗೊಳಿಸಿದ ಮದುಮಗಳು..! ವರನ ಕುಟುಂದ ವಿರುದ್ಧ ವರದಕ್ಷಿಣೆ ಪ್ರಕರಣವೂ ದಾಖಲು…!!

ಉತ್ತರ ಪ್ರದೇಶದ ಆಗ್ರಾದ ಶಂಶಾಬಾದ್ ಪಟ್ಟಣದಲ್ಲಿ ನಡೆದ ಒಂದು ಅಸಾಮಾನ್ಯ ಘಟನೆಯಲ್ಲಿ, ವರನ ಕುಟುಂಬದವರು ಏರ್ಪಡಿಸಿದ್ದ ಮದುವೆ ಸ್ಥಳದಲ್ಲಿ ಹವಾನಿಯಂತ್ರಣ ವ್ಯವಸ್ಥೆ ಇಲ್ಲದ ಕಾರಣ ವಧುವು ತಮ್ಮ ಮದುವೆಯನ್ನು ರದ್ದುಗೊಳಿಸಿದ್ದಾಳೆ…! ಆರಂಭದಲ್ಲಿ ತೀವ್ರವಾದ ಉಷ್ವಾಣತೆಯಿಂದ ಉಂಟಾದ  ವಾಗ್ವಾದವು ನಂತರ ವರದಕ್ಷಿಣೆ ಬೇಡಿಕೆ ಮತ್ತು ನಿಂದನೆಯ ಆರೋಪಗಳಾಗಿ ಪರಿಣಮಿಸಿತು.
ವರದಿಗಳ ಪ್ರಕಾರ, ಸಮಾರಂಭದ ಸಮಯದಲ್ಲಿ ವಧುವು ವರನ ಕುಟುಂಬವು ಸ್ಥಳದಲ್ಲಿ ಹವಾನಿಯಂತ್ರಣವನ್ನು ಅಳವಡಿಸಬೇಕೆಂದು ಒತ್ತಾಯಿಸಿದಳು. ಅಲ್ಲಿನ ಅವ್ಯವಸ್ಥೆಯು ತನಗೆ “ಸ್ವೀಕಾರಾರ್ಹವಲ್ಲ ಮತ್ತು ಅಮಾನವೀಯ” ಎಂದು ಹೇಳಿದ ವಧು ಸರಿಯಾದ ವ್ಯವಸ್ಥೆಗಳನ್ನು ಮಾಡದ ಹೊರತು ಮದುವೆಯಾಗಲು ನಿರಾಕರಿಸಿದಳು.
ಆದಾಗ್ಯೂ, ಸಮಸ್ಯೆ ಬಗೆಹರಿಸುವ ಬದಲು, ವರನ ಕುಟುಂಬವು ವಾಗ್ವಾದ ನಡೆಸಿತು. ಇದು ಪರಿಸ್ಥಿತಿ ಮತ್ತಷ್ಟು ಹದಗೆಡಲು ಕಾರಣವಾಯಿತು. ಮದುವೆ ಮುಂದುವರಿಸುವುದರೆ ತನಗೆ ಯಾವುದೇ “ಗೌರವ” ಇರುವುದಿಲ್ಲ ಮತ್ತು ಮದುವೆ ಮುಂದುವರಿದರೆ ತನ್ನ “ಜೀವನ ನರಕವಾಗುತ್ತದೆ” ಎಂದು ಅವಳು ಹೇಳಿದ್ದಾಳೆ. ನಂತರ ವಧು ಮಂಟಪದಿಂದ ಹೊರನಡೆದಿದ್ದಾಳೆ…!

ವರದಕ್ಷಿಣೆ ಆರೋಪಗಳು ಮತ್ತು ಪೊಲೀಸ್ ಪ್ರಕರಣ
ಉದ್ವಿಗ್ನತೆ ಹೆಚ್ಚಾದಂತೆ, ವಧುವಿನ ತಾಯಿ ಸ್ಥಳೀಯ ಪೊಲೀಸರಿಗೆ ಔಪಚಾರಿಕವಾಗಿ ವರದಕ್ಷಿಣೆ ದೂರು ದಾಖಲಿಸಿದರು. “ನಾವು ಎರಡೂ ಕುಟುಂಬಗಳನ್ನು ಒಂದು ನಿರ್ಣಯಕ್ಕೆ ತರಲು ಪ್ರಯತ್ನಿಸಿದೆವು, ಆದರೆ ವಧು ತನ್ನ ನಿರ್ಧಾರದಲ್ಲಿ ದೃಢವಾಗಿ ಉಳಿದಳು ಮತ್ತು ಮದುವೆಯಾಗಲು ನಿರಾಕರಿಸಿದಳು” ಎಂದು ಠಾಣಾಧಿಕಾರಿ ಹಂಸರಾಜ ಭಡೋರಿಯಾ ದಿ ಪ್ರಿಂಟ್‌ಗೆ ತಿಳಿಸಿದ್ದಾರೆ. ಮರುದಿನ ಬೆಳಿಗ್ಗೆ ವಧು ತನ್ನ ಕುಟುಂಬದೊಂದಿಗೆ ಮನೆಗೆ ಮರಳಿದಳು.
ವಧುವಿನ ಕಡೆಯ ಸಂಬಂಧಿಯೊಬ್ಬರು ವರನ ಕುಟುಂಬವು ಮೌಖಿಕ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದರು. “ವಿವಾದವನ್ನು ಶಮನಗೊಳಿಸಲು ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾದಾಗ, ಕುಟುಂಬವು ಮದುವೆ ಏರ್ಪಡಿಸಲು ವರನ ಕಡೆಯವರು ಮಾಡಿದ ವೆಚ್ಚವನ್ನು ಪಾವತಿಸಲು ನಿರ್ಧರಿಸಿತು. ಪಾವತಿ ಮಾಡಿದ ನಂತರ, ಕುಟುಂಬವು ಮದುವೆಯ ಸ್ಥಳವನ್ನು ತೊರೆಯಿತು” ಎಂದು ಸಂಬಂಧಿ ಹೇಳಿದರು.
ವಿವಾದಗಳಿಂದಾಗಿ ಮದುವೆ ರದ್ದಾಗುವುದು ಹೊಸದಲ್ಲವಾದರೂ, ಈ ಘಟನೆಯು ಎರಡು ಸಮಾನಾಂತರ ಸಮಸ್ಯೆಗಳನ್ನು ಎತ್ತಿ ತೋರಿಸಿದೆ. ನಿರಂತರ ವರದಕ್ಷಿಣೆ ಸಂಸ್ಕೃತಿ ಮತ್ತು ಭಾರತದ ಬೆಳೆಯುತ್ತಿರುವ ಹವಾಮಾನ ಬಿಕ್ಕಟ್ಟು ಸಹ ಮದುವೆಗೆ ಅಡ್ಡಿಯಾಗಿದೆ. ಇಂದಿನ ಸುಡುವ ಶಾಖದ ಅಲೆಗಳಲ್ಲಿ, ವಿಶೇಷವಾಗಿ ದೊಡ್ಡ ಮದುವೆಯ ಸಮಯದಲ್ಲಿ ಹವಾನಿಯಂತ್ರಣ ವ್ಯವಸ್ಥೆಯನ್ನು ಇನ್ನು ಮುಂದೆ ಐಷಾರಾಮಿಯಾಗಿ ನೋಡಲಾಗುವುದಿಲ್ಲ, ಅವಶ್ಯಕತೆಯಾಗಿ ನೋಡಲಾಗುತ್ತದೆ.

ಪ್ರಮುಖ ಸುದ್ದಿ :-   ಮೇಘಾಲಯ ಹನಿಮೂನ್ ಕೊಲೆ ಪ್ರಕರಣ ಭೇದಿಸಲು ಸಹಾಯ ಮಾಡಿದ ಮಂಗಳಸೂತ್ರ...!

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement