ಅಹಮದಾಬಾದ್: ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಪತನಗೊಂಡ ವಿಮಾನದ ಬ್ಲ್ಯಾಕ್ ಬಾಕ್ಸ್ (Black Box) ಮತ್ತು ಡಿವಿಆರ್ ಪತ್ತೆಯಾಗಿವೆ.
ಗುಜರಾತ್ ಸರ್ಕಾರದ 40 ಸಿಬ್ಬಂದಿಯ ಸಹಾಯದಿಂದ ವಿಮಾನ ಅಪಘಾತ ತನಿಖಾ ಬ್ಯೂರೋ(AAIB)ದ ದೊಡ್ಡ ತಂಡವು ಬ್ಲ್ಯಾಕ್ ಬಾಕ್ಸ್ ಎಂದು ಕರೆಯಲಾಗುವ ಡಿಜಿಟಲ್ ಫ್ಲೈಟ್ ಡೇಟಾ ರೆಕಾರ್ಡರ್ (DFDR)ಪತ್ತೆ ಮಾಡಿದೆ. ಈ ಬ್ಲ್ಯಾಕ್‌ಬಾಕ್ಸ್‌ನಲ್ಲಿನ ಡಾಟಾದ ಸಹಾಯದಿಂದ ವಿಮಾನ ಅಪಘಾತಕ್ಕೆ ನಿಖರ ಕಾರಣದ ಬಗ್ಗೆ ಪತ್ತೆ ಹಚ್ಚಲಾಗುತ್ತದೆ.
ಬ್ಲ್ಯಾಕ್ ಬಾಕ್ಸ್ ಒಂದು ಎಲೆಕ್ಟ್ರಾನಿಕ್ ಸಾಧನ ಫ್ಲೈಟ್ ಡೇಟಾ ರೆಕಾರ್ಡರ್ (FDR) ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ಎಂಬ ಎರಡು ಸಾಧನಗಳನ್ನು ಒಳಗೊಂಡಿದೆ. ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯ (NTSB) ವೆಬ್‌ಸೈಟ್ ಪ್ರಕಾರ, ಸಿವಿಆರ್ (CVR) ರೇಡಿಯೋ ಪ್ರಸರಣಗಳು ಮತ್ತು ಪೈಲಟ್‌ನ ಧ್ವನಿಗಳು ಮತ್ತು ಎಂಜಿನ್ ಶಬ್ದಗಳಂತಹ ಶಬ್ದಗಳನ್ನು ಸಂಗ್ರಹಿಸುತ್ತದೆ.
ಬ್ಲ್ಯಾಕ್ ಬಾಕ್ಸ್ ವಿಮಾನದ ಎಂಜಿನ್ ವೇಗ, ಎತ್ತರ, ದಿಕ್ಕು, ಇಂಧನ ಮಟ್ಟ, ಮತ್ತು ಇತರ ತಾಂತ್ರಿಕ ಮಾಹಿತಿಯನ್ನು ದಾಖಲಿಸುತ್ತದೆ. ಈ ಡೇಟಾವನ್ನು ಸಂಗ್ರಹಿಸಿ, ಕ್ರ್ಯಾಶ್-ನಿರೋಧಕ ಮೆಮೊರಿಯಲ್ಲಿ ಸಂಗ್ರಹಿಸಲಾಗುತ್ತದೆ. ಇದು ಸಾಮಾನ್ಯವಾಗಿ 25 ಗಂಟೆಗಳವರೆಗಿನ ಡೇಟಾವನ್ನು ದಾಖಲಿಸುತ್ತದೆ. ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಪೈಲಟ್‌ಗಳ ಸಂಭಾಷಣೆ, ರೇಡಿಯೋ ಸಂವಹನ, ಮತ್ತು ಕಾಕ್‌ಪಿಟ್‌ನಲ್ಲಿನ ಶಬ್ದ, ಎಂಜಿನ್ ಶಬ್ದ, ಎಚ್ಚರಿಕೆ ಸಿಗ್ನಲ್‌ಗಳನ್ನು ರೆಕಾರ್ಡ್ ಮಾಡುತ್ತದೆ. ಇದು ಕೊನೆಯ 2 ಗಂಟೆಗಳ ಸಂಭಾಷಣೆಯನ್ನು ಸಂಗ್ರಹಿಸುತ್ತದೆ.ಇದರ ಮುಖ್ಯ ಉದ್ದೇಶ ವಿಮಾನ ಅಪಘಾತವಾದರೆ ಅದಕ್ಕೆ ಕಾರಣ ಕಂಡುಹಿಡಿಯಲು ಇದು ಸಹಕಾರಿಯಾಗುತ್ತದೆ.
ಬ್ಲ್ಯಾಕ್ ಬಾಕ್ಸ್ ಮತ್ತು ಇತರ ರೆಕಾರ್ಡರ್ಗಳನ್ನು ಪ್ರಯೋಗಾಲಯಕ್ಕೆ ತಂದ ಬಳಿಕ, ತಜ್ಞರು ಅವುಗಳ ಡೇಟಾವನ್ನು ಸುಲಭವಾಗಿ ರಿಟ್ರೀವ್ ಮಾಡಬಹುದಾ ಎಂದು ಪರಿಶೀಲಿಸುತ್ತಾರೆ. ಸಮರ್ಪಕ ಸ್ಥಿತಿಯಲ್ಲಿದ್ದರೆ ಡೇಟಾವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಆದರೆ, ಹಾನಿಗೊಳಗಾಗಿದ್ದರೆ ಡೇಟಾ ರಿಟ್ರೀವ್ ಮಾಡುವುದು ಕಷ್ಟಕರವಾಗಬಹುದು.
ನಿಮ್ಮ ಕಾಮೆಂಟ್ ಬರೆಯಿರಿ