ಪ್ರತಿದಿನವೂ ಆ ದಿನದ ನೆನಪುಗಳು ಕಾಡುತ್ತಿವೆ..: ಏರ್ ಇಂಡಿಯಾ ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕನಿಗೆ ಕಾಡುವ ನೋವು

ಅನೇಕರಿಗೆ, ಅವರು ‘ಜೀವಂತವಾಗಿ ಉಳಿದ ಅತ್ಯಂತ ಅದೃಷ್ಟಶಾಲಿ ವ್ಯಕ್ತಿ’. ಆದರೆ, ಅಹಮದಾಬಾದ್‌ ಏರ್ ಇಂಡಿಯಾ ವಿಮಾನ (AI-171) ದುರಂತದಲ್ಲಿ ಬದುಕುಳಿದ ಏಕೈಕ ವ್ಯಕ್ತಿಯಾದ 40 ವರ್ಷದ ವಿಶ್ವಾಸಕುಮಾರ ರಮೇಶ ಅವರಿಗೆ, ಈ ಬದುಕುಳಿಯುವಿಕೆ ಒಂದು ಪವಾಡವೂ ಹೌದು, ಶಾಪವೂ ಹೌದು. ಈ ದುರಂತದಲ್ಲಿ ವಿಮಾನದಲ್ಲಿದ್ದ 241 ಜನ ಮತ್ತು ನೆಲದ ಮೇಲಿದ್ದ 19 ಜನ ಸಾವಿಗೀಡಾಗಿದ್ದಾರೆ. … Continued

‘ನಾನು ಇಂಧನ ಕಡಿತಗೊಳಿಸಲಿಲ್ಲ’ : ಅಹಮದಾಬಾದ್‌ ವಿಮಾನ ಅಪಘಾತದ ಪ್ರಾಥಮಿಕ ವರದಿ ಬಿಡುಗಡೆ ; ಪೈಲಟ್‌ಗಳ ಸಂಭಾಷಣೆ ಬಹಿರಂಗ

ನವದೆಹಲಿ : ಏರ್ ಇಂಡಿಯಾ-171 ಅಪಘಾತದ ತನಿಖೆಯ ಪ್ರಾಥಮಿಕ ವರದಿಯನ್ನು ಸರ್ಕಾರ ಶನಿವಾರ ಬಹಿರಂಗಪಡಿಸಿದೆ. ಜೂನ್ 12 ರಂದು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ಪತನಗೊಂಡು ವಿಮಾನದಲ್ಲಿದ್ದ 241 ಜನರ ಸಾವಿಗೆ ಕಾರಣವಾದ ದುರದೃಷ್ಟಕರ ಬೋಯಿಂಗ್ 787 ಡ್ರೀಮ್‌ಲೈನರ್ ಒಳಗೆ ನಡೆದ ಘಟನೆಗಳ ಅನುಕ್ರಮವನ್ನು ಇದು ಬಹಿರಂಗಪಡಿಸಿದೆ. ವಿಮಾನ ಅಪಘಾತ … Continued

ವೀಡಿಯೊ | ಅಹಮದಾಬಾದ್ ವಿಮಾನ ದುರಂತದ ಕೆಲದಿನಗಳ ನಂತರ ಕಚೇರಿಯಲ್ಲಿ ಪಾರ್ಟಿ ; ಏರ್ ಇಂಡಿಯಾ ವೆಂಚರಿನ 4 ಹಿರಿಯ ಸಿಬ್ಬಂದಿ ವಜಾ

ನವದೆಹಲಿ: ಏರ್ ಇಂಡಿಯಾದ ವಿಮಾನ ನಿಲ್ದಾಣದ ಗೇಟ್‌ವೇ ಸೇವೆಗಳನ್ನು ಒದಗಿಸುವ ಎಐಎಸ್‌ಎಟಿಎಸ್‌ (AISATS)ನ ನಾಲ್ವರು ಹಿರಿಯ ಉದ್ಯೋಗಿಗಳಿಗೆ ರಾಜೀನಾಮೆ ನೀಡುವಂತೆ ಸೂಚಿಸಲಾಗಿದೆ. ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ದುರಂತದ ಕೆಲವೇ ದಿನಗಳ ನಂತರ ನೌಕರರು ಕಚೇರಿ ಸ್ಥಳದಲ್ಲಿ ಪಾರ್ಟಿ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ಕ್ರಮ ತೆಗೆದುಕೊಳ್ಳಲಾಗಿದೆ. ಅಹಮದಾಬಾದ್‌ನಲ್ಲಿ 275ಕ್ಕೂ … Continued

ಅಹಮದಾಬಾದ್ ವಿಮಾನ ದರಂತ | ವಿಮಾನ ಬಿದ್ದು ಹೊತ್ತಿ ಉರಿಯುತ್ತಿದ್ದ ಸ್ಥಳದಿಂದ ಬದುಕುಳಿದ ಏಕೈಕ ವ್ಯಕ್ತಿ ನಡೆದು ಬರುವ ಹೊಸ ವೀಡಿಯೊ ವೈರಲ್‌

ಗಾಂಧಿನಗರ: ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ-171 ವಿಮಾನ (Air India) ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ವಿಶ್ವಾಸಕುಮಾರ ರಮೇಶ ಅವರು, ವಿಮಾನ ಅಪಘಾತವಾದ ಸ್ಥಳದಿಂದ ಹೊರಬರುತ್ತಿರುವುದನ್ನು ತೋರಿಸುವ ಹೊಸ ವೀಡಿಯೊವೊಂದು ಹೊರಬಿದ್ದಿದೆ. ಹೊತ್ತಿ ಉರಿಯುತ್ತಿರುವ ವಿಮಾನದಿಂದ ವ್ಯಕ್ತಿ ಪಾರಾಗಿ ಬಂದಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಬೆಂಕಿ ಹೊತ್ತಿ ಉರಿಯುತ್ತಿರುವ ಸ್ಥಳದ ಕ್ಯಾಂಪಸ್‌ನಿಂದ ಅವರು ಹೊರಗೆ ಹೋಗುತ್ತಿದ್ದಾಗ, ಬೆಂಕಿ … Continued

ವಿಮಾನ ಅಪಘಾತ | ಆಗ ಥಾಯ್ ಏರ್‌ವೇಸ್, ಈಗ ಏರ್‌ ಇಂಡಿಯಾ : 30 ವರ್ಷಗಳ ಹಿಂದೆಯೂ 11A ಸೀಟು ವ್ಯಕ್ತಿಯ ಜೀವ ಉಳಿಸಿತ್ತು…!

ನವದೆಹಲಿ : ವಿಮಾನದಲ್ಲಿ 11A ಸೀಟು ನಿಜವಾಗಿಯೂ ರಕ್ಷಕವೇ ? ಅಹಮದಾಬಾದ್‌ನಲ್ಲಿ ನಡೆದ ಏರ್‌ ಇಂಡಿಯಾ ವಿಮಾನ ಅಪಘಾತದ ನಂತರ ಅದೃಷ್ಟಶಾಲಿ ಎಂದು ಹೇಳಲಾದ ಬದುಕುಳಿದ ಏಕೈಕ ವ್ಯಕ್ತಿ ಕುಳಿತಿದ್ದ 11A ಸೀಟಿನ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಥಾಯ್ ಗಾಯಕನೊಬ್ಬ ವಿಮಾನದಲ್ಲಿಅದೇ ಸೀಟಿನಲ್ಲಿ ಕುಳಿತುಕೊಂಡು ಮಾರಕ ವಿಮಾನ ಅಪಘಾತದಲ್ಲಿ ಬದುಕುಳಿದಿದ್ದನ್ನು ಬಹಿರಂಗಪಡಿಸಿದ್ದಾರೆ. ಥಾಯ್ ಏರ್‌ವೇಸ್ ವಿಮಾನದಲ್ಲಿ … Continued

ಅಹಮದಾಬಾದ್ ವಿಮಾನ ಅಪಘಾತ: ಮೃತರ ಸಂಖ್ಯೆ 274ಕ್ಕೆ ಏರಿಕೆ

ಅಹಮದಾಬಾದ್‌ : ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಗುರುವಾರ ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾದ ದುರಂತದಲ್ಲಿ ಸಾವಿನ ಸಂಖ್ಯೆ 274ಕ್ಕೆ ಏರಿದೆ ಎಂದು ಮೂಲಗಳನ್ನು ಉಲ್ಲೇಖಿಸಿದ ಹಲವಾರು ವರದಿಗಳು ತಿಳಿಸಿವೆ. ಸತ್ತವರಲ್ಲಿ ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ಮಾತ್ರವಲ್ಲದೆ, ಮೇಘನಿನಗರ ಪ್ರದೇಶದ ನಿವಾಸಿಗಳು ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗುರುವಾರ ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ … Continued

ವೀಡಿಯೊ…| ಅಹಮದಾಬಾದ್‌ ವಿಮಾನ ದುರಂತ ; ಇಡೀ ವಿಮಾನವೇ ಸುಟ್ಟು ಕರಕಲಾದ್ರೂ ಭಗವದ್ಗೀತೆ ಪುಸ್ತಕಕ್ಕೆ ಏನೂ ಆಗಿಲ್ಲ…!

ಅಹಮದಾಬಾದ್‌ : ಗುಜರಾತಿನ ಅಹಮದಾಬಾದ್‌ನಲ್ಲಿ 265 ಜನರ ಸಾವಿಗೆ ಕಾರಣವಾದ ಏರ್ ಇಂಡಿಯಾ ಫ್ಲೈಟ್ 171 ವಿಮಾನ ಅಪಘಾತದಲ್ಲಿ ಉಂಟಾದ ಬೆಂಕಿಯಲ್ಲಿ ಧಗಧಗಿಸಿ ಹೋದ ವಿಮಾನದ ಅವಶೇಷಗಳಲ್ಲಿ ಭಗವದ್ಗೀತೆಯ ಪುಸ್ತಕ ಸುಡದೆ ಹಾಗೆಯೇ ಇರುವುದು ಕಂಡುಬಂದಿದೆ. ತೀವ್ರ ತೆರನಾದ ಬೆಂಕಿಯ ಜ್ವಾಲೆಯ ಹೊರತಾಗಿಯೂ, ಪವಿತ್ರ ಗ್ರಂಥವು ಹಾನಿಗೊಳಗಾಗದೆ ಉಳಿದಿದೆ. ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್‌ಗೆ ಹೋಗುತ್ತಿದ್ದ ಏರ್‌ … Continued

ಪೈಲಟ್‌ ಗೆ ಸೆಲ್ಯೂಟ್….ಇಲ್ದಿದ್ರೆ ಸುಮಾರು 1500 ಜನರು ಸಾಯುತ್ತಿದ್ದರೇನೋ..? ಅಹಮದಾಬಾದ್‌ ವಿಮಾನ ಅಪಘಾತದ ಬಗ್ಗೆ ಪ್ರತ್ಯಕ್ಷದರ್ಶಿ ಹೇಳಿಕೆ

ಅಹಮದಾಬಾದ್‌ : ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಏರ್ ಇಂಡಿಯಾ ವಿಮಾನ AI 171 ಅಪಘಾತಕ್ಕೀಡಾದ ದೃಶ್ಯವನ್ನು ವೀಕ್ಷಿಸಿದ ಸ್ಥಳೀಯ ನಿವಾಸಿಯೊಬ್ಬರು, ವಿಮಾನವೇನಾದರೂ ವಸತಿ ಪ್ರದೇಶಕ್ಕೆ ಡಿಕ್ಕಿ ಹೊಡೆದಿದ್ದರೆ 1,500 ರಿಂದ 2,000 ಜನರು ಸಾಯಬಹದಿತ್ತು ಎಂದು ಹೇಳಿದ್ದಾರೆ. ದೊಡ್ಡ ದುರಂತವನ್ನು ಸ್ವಲ್ಪದರಲ್ಲೇ ತಪ್ಪಿಸಲಾಯಿತು … Continued

ಅಪಘಾತಕ್ಕೀಡಾದ ವಿಮಾನದ ಸೀಟ್ 11A ನಿಗೂಢತೆ : ವಿಮಾನ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಸಾವನ್ನೇ ಗೆದ್ದಿದ್ದು ಹೇಗೆ..?

ಅಹಮದಾಬಾದ್‌ : ಅಪಘಾತಕ್ಕೀಡಾದ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನದಲ್ಲಿದ್ದ ಕೇವಲ ಒಬ್ಬ ವ್ಯಕ್ತಿ ಮಾತ್ರ ಬದುಕುಳಿದಿದ್ದಾರೆ. ಅಹಮದಾಬಾದ್‌ನ ಸರ್ದಾರ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನ AI-171 ರಲ್ಲಿ 11A ಸೀಟಿನಲ್ಲಿ ಕುಳಿತಿದ್ದ ಭಾರತೀಯ ಮೂಲದ ಬ್ರಿಟೀಷ್‌ ಪ್ರಜೆ ವಿಶ್ವಾಸಕುಮಾರ ರಮೇಶ ಎಂಬವರು … Continued

ಅಹಮದಾಬಾದ್‌ ವಿಮಾನ ಅಪಘಾತ : ಪತನಗೊಂಡ ವಿಮಾನದ ಬ್ಲ್ಯಾಕ್‌ ಬಾಕ್ಸ್‌ ಪತ್ತೆ

ಅಹಮದಾಬಾದ್‌: ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಪತನಗೊಂಡ ವಿಮಾನದ ಬ್ಲ್ಯಾಕ್‌ ಬಾಕ್ಸ್‌ (Black Box) ಮತ್ತು ಡಿವಿಆರ್​ ಪತ್ತೆಯಾಗಿವೆ. ಗುಜರಾತ್ ಸರ್ಕಾರದ 40 ಸಿಬ್ಬಂದಿಯ ಸಹಾಯದಿಂದ ವಿಮಾನ ಅಪಘಾತ ತನಿಖಾ ಬ್ಯೂರೋ(AAIB)ದ ದೊಡ್ಡ ತಂಡವು ಬ್ಲ್ಯಾಕ್‌ ಬಾಕ್ಸ್‌ ಎಂದು ಕರೆಯಲಾಗುವ ಡಿಜಿಟಲ್ ಫ್ಲೈಟ್ ಡೇಟಾ ರೆಕಾರ್ಡರ್ (DFDR)ಪತ್ತೆ ಮಾಡಿದೆ. ಈ ಬ್ಲ್ಯಾಕ್‌ಬಾಕ್ಸ್‌ನಲ್ಲಿನ ಡಾಟಾದ ಸಹಾಯದಿಂದ ವಿಮಾನ ಅಪಘಾತಕ್ಕೆ ನಿಖರ … Continued