ಸಂಡೂರಿನಲ್ಲಿ ಸಿಕ್ಕಿಬಿದ್ದ ʼಬ್ಲ್ಯಾಕ್ ಮೇಲ್ʼ ಕಾಮುಕ ; ಈತನ ಮೊಬೈಲ್‌ ನಲ್ಲಿತ್ತು 13500ಕ್ಕೂ ಹೆಚ್ಚು ಮಹಿಳೆಯರ ಅಶ್ಲೀಲ ಫೋಟೋ, ವೀಡಿಯೊಗಳು !

ಮುಂಬೈ ಪೊಲೀಸರು ಎರಡು ವರ್ಷಗಳ ಕಾಲ ಹುಡುಕಾಟ ನಡೆಸಿದ ನಂತರ ಸೈಬರ್ ಲೈಂಗಿಕ ಅಪರಾಧಗಳಿಗೆ ಬೇಕಾಗಿದ್ದ 25 ವರ್ಷದ ವ್ಯಕ್ತಿಯನ್ನು ಕರ್ನಾಟಕದ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಬಂಧಿಸಿದ್ದಾರೆ. ಆರೋಪಿ ಶುಭಂ ಕುಮಾರ ಮನೋಜಪ್ರಸಾದ ಸಿಂಗ್ ಎಂಬಾತನನ್ನು ಸಂಡೂರು ಪಟ್ಟಣದಲ್ಲಿ ಪತ್ತೆಹಚ್ಚಲಾಗಿದ್ದು, ಅಲ್ಲಿ ಈತ ಖಾಸಗಿ ಕಂಪನಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ.
ಮುಂಬೈನ ವಿದ್ಯಾರ್ಥಿನಿಯೊಬ್ಬರು ನೀಡಿದ ದೂರಿನ ಮೇರೆಗೆ ಈ ಬಂಧನ ನಡೆದಿದೆ. ಮುಂಬೈನ ವಿದ್ಯಾರ್ಥಿನಿ ನೀಡಿದ ದೂರಿನ ನಂತರ ಸೈಬರ್ ಅಪರಾಧ ಅಧಿಕಾರಿಗಳ ತನಿಖೆ ಶುರು ಮಾಡಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಆರೋಪಿಯು ನಗ್ನ ವೀಡಿಯೊ ಕರೆಗಾಗಿ ತನ್ನ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದ್ದ ಎಂದು ದೂರು ನೀಡಿದ ಹುಡುಗಿ ಆರೋಪಿಸಿದ್ದಾಳೆ. ಅವಳು ನಿರಾಕರಿಸಿದಾಗ, ಆಕೆಯ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಮ್ ಪುಟವನ್ನು ರಚಿಸಿ, ಮಾನಹಾನಿಮಾಡುವ ಅವಳ ಎಐ(AI) ರಚಿತ ಅಶ್ಲೀಲ ಚಿತ್ರಗಳನ್ನು ಅಪ್‌ಲೋಡ್ ಮಾಡಿದ್ದ. ಆಕೆಯ ದೂರಿನ ನಂತರ, ದಹಿಸರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಾಂತ್ರಿಕ ತನಿಖೆಯನ್ನು ಪ್ರಾರಂಭಿಸಿದ್ದರು.

ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಗೂಗಲ್‌ನ ವಿವರಗಳನ್ನು ಒಳಗೊಂಡಂತೆ ಡಿಜಿಟಲ್ ಫೂಟ್‌ಸ್ಟೆಪ್ಸ್‌ ಮತ್ತು ತಾಂತ್ರಿಕ ಇನ್‌ಪುಟ್‌ಗಳನ್ನು ಬಳಸಿಕೊಂಡು, ಪೊಲೀಸರು ಆರೋಪಿಯ ಐಪಿ ವಿಳಾಸವನ್ನು ಕರ್ನಾಟಕದ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಪತ್ತೆಹಚ್ಚಿದರು. ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುವ ಶುಭಂಕುಮಾರ ಮನೋಜಪ್ರಸಾದ ಸಿಂಗ್ (25) ಎಂದು ಗುರುತಿಸಲಾದ ಆರೋಪಿಯನ್ನು ನಂತರ ಬಂಧಿಸಲಾಯಿತು.
ಶುಭಂ ಮಹಿಳೆಯರ ಹೆಸರಿನಲ್ಲಿ ಹಲವಾರು ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳನ್ನು ರಚಿಸಿ ಅವರಿಗೆ ಮಾನಹಾನಿ ಮತ್ತು ಕಿರುಕುಳ ನೀಡಲು ಅಶ್ಲೀಲ ವೀಡಿಯೊಗಳನ್ನು ಅಪ್‌ಲೋಡ್ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಮುಂಬೈನಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಎರಡು ವರ್ಷಗಳಿಂದ ಈತನಿಗಾಗಿ ಹುಡುಕಾಟ ನಡೆಸಿದ್ದರು. ಈತ ಅಪರಾಧಗಳನ್ನು ನಡೆಸಲು 10 ಕ್ಕೂ ಹೆಚ್ಚು ನಕಲಿ ಪ್ರೊಫೈಲ್‌ಗಳು ಮತ್ತು 90 ಕ್ಕೂ ಹೆಚ್ಚು ಇಮೇಲ್ ಐಡಿಗಳನ್ನು ರಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಸೌದಿ ಅರೇಬಿಯಾದ ʼಸ್ಲೀಪಿಂಗ್ ಪ್ರಿನ್ಸ್ʼ 20 ವರ್ಷಗಳಿಂದ ಕೋಮಾದಲ್ಲಿ

ಮಹಿಳೆಯರನ್ನು ಟಾರ್ಗೆಟ್‌ ಮಾಡಲು ಈತ ವೀಡಿಯೊ ಕರೆಗಳನ್ನು ಬಳಸಿಕೊಳ್ಳುತ್ತಿದ್ದ, ನಂತರ ಅಸಭ್ಯ ವೀಡಿಯೊಗಳನ್ನು ಎಡಿಟ್‌ ಮಾಡಿ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಸಾರ ಮಾಡುತ್ತಿದ್ದ ಎಂದು ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ. ಈತನ ಮೊಬೈಲ್ ಫೋನ್‌ನಲ್ಲಿ 13,500 ಕ್ಕೂ ಹೆಚ್ಚು ಮಹಿಳೆಯರ ಅಶ್ಲೀಲ ಛಾಯಾಚಿತ್ರಗಳು ಮತ್ತು ವೀಡಿಯೊಗಳು ಪತ್ತೆಯಾಗಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಗೂಗಲ್‌ನ ತಾಂತ್ರಿಕ ಮಾಹಿತಿಗಳನ್ನು ಬಳಸಿಕೊಂಡು ಈತನ ಡಿಜಿಟಲ್ ಜಾಡನ್ನು ಪತ್ತೆಹಚ್ಚಲಾಯಿತು, ನಂತರ ಮುಂಬೈ ಪೊಲೀಸರ ತಂಡವು ಸಂಡೂರಿನಲ್ಲಿ ಆತನನ್ನು ಬಂಧಿಸಿತು.
ದಹಿಸರ್ ಪೊಲೀಸ್ ಇನ್ಸ್‌ಪೆಕ್ಟರ್ ಅಬ್ದುಲ್ ಹಕ್ ದೇಸಾಯಿ ಹೇಳಿಕೆ ಪ್ರಕಾರ, ಆರೋಪಿ ದೆಹಲಿಯಲ್ಲಿ ವಿಶೇಷ ಕಂಪ್ಯೂಟರ್ ತರಬೇತಿಯನ್ನು ಪಡೆದಿದ್ದ, ಅದನ್ನು ಆನ್‌ಲೈನ್‌ನಲ್ಲಿ ಹುಡುಗಿಯರನ್ನು ಶೋಷಿಸಲು ದುರುಪಯೋಗಪಡಿಸಿಕೊಳ್ಳುತ್ತಿದ್ದ. ಮಹಿಳೆಯರ ಗಮನ ಸೆಳೆಯಲು ಈತ ಆಕರ್ಷಕ ಎಐ (AI)- ರಚಿತ ಪ್ರೊಫೈಲ್ ಚಿತ್ರಗಳನ್ನು ರಚಿಸುತ್ತಿದ್ದ.

ಅವರು ಈತನಿಂದ ವಿನಂತಿಗಳನ್ನು ಸ್ವೀಕರಿಸಿದ ನಂತರ, ಈತ ಅವರ ನಿಜವಾದ ಫೋಟೋಗಳನ್ನು ಸಂಗ್ರಹಿಸಿ, ಎಐ (AI) ಬಳಸಿ ಅದನ್ನು ಅಶ್ಲೀಲವಾಗಿ ಮಾರ್ಫ್ ಮಾಡುತ್ತಿದ್ದ ಮತ್ತು ನಂತರ ಅವರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ.
ಬಂಧನದ ಸಮಯದಲ್ಲಿಯೂ, ಈತ 50 ಕ್ಕೂ ಹೆಚ್ಚು ಮಹಿಳೆಯರೊಂದಿಗೆ ಸಂವಹನ ನಡೆಸುತ್ತಿದ್ದನಂತೆ. ಪೊಲೀಸರು ಈಗ ಈತನಿಂದ ತೊಂದರೆಗೊಳಗಾದ ಇತರ ಸಂಭಾವ್ಯ ಮಹಿಳೆಯರನ್ನು ಗುರುತಿಸಲು ಮತ್ತು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ. ಈತನಿಂದ ಕಿರುಕುಳಕ್ಕೊಳಗಾದ ಯಾವುದೇ ಮಹಿಳೆಯರು ಮುಂದೆ ಬಂದು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ದಹಿಸರ್ ಪೊಲೀಸರು ಮನವಿ ಮಾಡಿದ್ದಾರೆ.
ಡಿಸಿಪಿ ವಲಯ 12ರ ಮಹೇಶ ಚಿಮ್ಟೆ, ಹಿರಿಯ ಪಿಐ ಅಶೋಕ ಹೊನ್ಮನೆ, ಪಿಐ ಎ.ಎಚ್. ​​ದೇಸಾಯಿ ಮತ್ತು ಸೈಬರ್ ಸೆಲ್ ಎಪಿಐ ಅಂಕುಶದಂಡ್ಗೆ ಅವರ ನೇತೃತ್ವದ ತಂಡವು ಈ ಕಾರ್ಯಾಚರಣೆಯನ್ನು ನಡೆಸಿತು.

ಪ್ರಮುಖ ಸುದ್ದಿ :-   ಮದ್ಯ ಹಗರಣ ; ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆಂಧ್ರ ಮಾಜಿ ಸಿಎಂ ಜಗನ್ಮೋಹನ ರೆಡ್ಡಿ ಆಪ್ತನ ಬಂಧನ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement