ಯಲ್ಲಾಪುರ : ಪ್ರಪಾತದ ಬಳಿ ಖಾಸಗಿ ಬಸ್ಸೊಂದು ಲಾರಿಗೆ ಡಿಕ್ಕಿಯಾಗಿ ಪಲ್ಟಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರೆಬೈಲ ಘಟ್ಟದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ ಎಂದು ವರದಿಯಾಗಿದೆ.
ಅದೃಷ್ಟವಶಾತ್ ಬಸ್ಸಿನಲ್ಲಿದ್ದ 25 ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ. ಬೆಂಗಳೂರಿನಿಂದ ಗೋವಾಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಲಾರಿಗೆ ಡಿಕ್ಕಿಯಾಗಿ ಅಪಘಾತಕ್ಕೀಡಾಗಿದೆ. ಈ ವೇಳೆ ಬಸ್ ಹಾಗೂ ಲಾರಿ ಪ್ರಪಾತಕ್ಕೆ ಬೀಳದೆ ಅದೃಷ್ಟವಶಾತ್ ಅರ್ಧದಲ್ಲೇ ನಿಂತಿದೆ. ಘಟನೆಯಲ್ಲಿ 25 ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವ್ ಆಗಿದ್ದಾರೆ.
ಅರಬೈಲ ಘಟ್ಟ ಅತ್ಯಂತ ಅಪಾಯ ಕಾರಿ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ. ಲಾರಿಯಾಗಲಿ, ಬಸ್ಸಾಗಲಿ ಒಂದಡಿಯಷ್ಟು ಮುಂದೆ ಹೋಗಿದ್ದರೆ ಭಾರಿ ಆಳದ ಪ್ರಪಾತಕ್ಕೆ ವಾಹನ ಬೀಳುತ್ತಿತ್ತು. ಅದೃಷ್ಟವಶಾತ್ ಬಸ್ಸು ರಸ್ತೆ ಮೇಲೆ ಪಲ್ಟಿ ಹೊಡೆದರೆ ಲಾರಿ ಪ್ರಪಾತದಲ್ಲಿ ಬೀಳುವುದಕ್ಕೆ ಸ್ವಲ್ಪದರಲ್ಲೇ ತಪ್ಪಿದೆ. ತುಂಬಾ ಮಬ್ಬು ಕವಿದ ವಾತಾವರಣದಿಂದಾಗಿ ಈ ಅನಾಹುತ ಸಂಭವಿಸಿರಬಹುದೆನ್ನಲಾಗಿದೆ.ಈ ಬಗ್ಗೆ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ