ವೀಡಿಯೊ..| ಭಾರತದ ರಕ್ಷಣಾ ವ್ಯವಸ್ಥೆಗಳ ಬಗ್ಗೆ ಚೀನಾ ಗುಪ್ತಚರ ಮಾಹಿತಿ ನೀಡಿದ್ದನ್ನು ಒಪ್ಪಿಕೊಂಡ ಪಾಕಿಸ್ತಾನದ ರಕ್ಷಣಾ ಸಚಿವ

ಇಸ್ಲಾಮಾಬಾದ್: ಭಾರತದೊಂದಿಗಿನ ಮಿಲಿಟರಿ ಸಂಘರ್ಷದ ಸಮಯದಲ್ಲಿ ಚೀನಾವು ಪಾಕಿಸ್ತಾನಕ್ಕೆ ನಿರ್ಣಾಯಕ ಗುಪ್ತಚರ ಮಾಹಿತಿಯನ್ನು ನೀಡಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಒಪ್ಪಿಕೊಂಡಿದ್ದಾರೆ.
ಈ ಮಾಹಿತಿಯು ಭಾರತದ ವಾಯು ರಕ್ಷಣಾ ವ್ಯವಸ್ಥೆಗಳ ಬಗ್ಗೆ ವಿವರಗಳನ್ನು ಒಳಗೊಂಡಿತ್ತು ಎಂದು ವರದಿಯಾಗಿದೆ.
ಸಂದರ್ಶನವೊಂದರಲ್ಲಿ, ಪಾಕಿಸ್ತಾನದ ಖವಾಜಾ ಆಸಿಫ್, ಭಾರತದ ಜೊತೆ ಸಂಘರ್ಷದ ನಂತರ ಪಾಕಿಸ್ತಾನವು ಹೆಚ್ಚಿನ ಎಚ್ಚರಿಕೆಯಲ್ಲಿದೆ ಎಂದು ಹೇಳಿದ್ದಾರೆ. ಹಾಗೂ ಸೇನಾ ಸಂಘರ್ಷದ ಸಮಯದಲ್ಲಿ ಭಾರತದ ರಕ್ಷಣಾ ಸಾಮರ್ಥ್ಯಗಳಿಗೆ ಸಂಬಂಧಿಸಿದ ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಚೀನಾವು ಪಾಕಿಸ್ತಾನಕ್ಕೆ ಸಹಾಯ ಮಾಡಿದೆ ಎಂದು ಒತ್ತಿ ಹೇಳಿದರು.

“ಭಾರತದೊಂದಿಗಿನ ನಾಲ್ಕು ದಿನಗಳ ಸೇನಾ ಸಂಘರ್ಷದ ನಂತರ, ಪಾಕಿಸ್ತಾನವು ಹೆಚ್ಚಿನ ಎಚ್ಚರಿಕೆಯಲ್ಲಿದೆ ಮತ್ತು ಒಂದು ತಿಂಗಳಿಗಿಂತ ಹೆಚ್ಚು ಸಮಯದ ನಂತರವೂ ತನ್ನ ಭದ್ರತೆ ಹಾಗೂ ವಾಚ್‌ ಮಾಡುವುದನ್ನು ಕಡಿಮೆ ಮಾಡಿಲ್ಲ” ಎಂದು ಆಸಿಫ್ ಹೇಳಿದರು. “ಕಾರ್ಯತಂತ್ರದ ಮಿತ್ರರಾಷ್ಟ್ರಗಳಾಗಿರುವ ರಾಷ್ಟ್ರಗಳು ಸಾಮಾನ್ಯವಾಗಿ ಪರಸ್ಪರ ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳುತ್ತವೆ ಮತ್ತು ನಾವು ಚೀನಾದೊಂದಿಗೆ ಮಾಡಿರುವುದು ಇದನ್ನೇ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ದೆಹಲಿ ಹೋಟೆಲ್‌ನಲ್ಲಿ ಅಗ್ನಿ ಅವಘಡ : 21 ಮಂದಿ ಸಾವು ; ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಧುಮುಕಿದ ಇಬ್ಬರು ಮಹಿಳೆಯರು

ಮಿತ್ರರಾಷ್ಟ್ರಗಳ ನಡುವಿನ ಜಂಟಿ ಗುಪ್ತಚರ ವಿನಿಮಯ
ಉಪಗ್ರಹ ಚಿತ್ರಣ ಸೇರಿದಂತೆ ಸೂಕ್ಷ್ಮ ದತ್ತಾಂಶಗಳ ವಿನಿಮಯವು ಕಾರ್ಯತಂತ್ರದ ಹಿತಾಸಕ್ತಿಗಳನ್ನು ಹಂಚಿಕೊಳ್ಳುವ ದೇಶಗಳ ನಡುವಿನ ನಿಯಮಿತ ವಿಷಯವಾಗಿದೆ ಎಂದು ಆಸಿಫ್ ಹೇಳಿದ್ದಾರೆ. ಪಾಕಿಸ್ತಾನದಂತೆಯೇ ಚೀನಾ ಕೂಡ ಭಾರತದ ಬಗ್ಗೆ ತನ್ನದೇ ಆದ ಭದ್ರತಾ ಕಾಳಜಿಗಳನ್ನು ಹೊಂದಿದೆ, ಇದು ನಿಕಟ ಗುಪ್ತಚರ ಸಹಕಾರಕ್ಕೆ ಆಧಾರವನ್ನು ಸೃಷ್ಟಿಸಿದೆ ಎಂದು ಅವರು ಗಮನಿಸಿದರು.
“ರಾಷ್ಟ್ರಗಳು ವಿಶೇಷವಾಗಿ ಬೆದರಿಕೆ ಪರಸ್ಪರ ಇದ್ದಾಗ ತಮಗೆ ತಿಳಿದಿರುವ ವಿಷಯಗಳನ್ನು ಹಂಚಿಕೊಳ್ಳುವುದು ಸಾಮಾನ್ಯ. ಚೀನಾ ನಮ್ಮಂತೆಯೇ ಭಾರತದಿಂದ ಸವಾಲುಗಳನ್ನು ಎದುರಿಸುತ್ತಿದೆ. ಉಪಗ್ರಹ ಆಧಾರಿತ ಗುಪ್ತಚರ ಮತ್ತು ಕಣ್ಗಾವಲು ಮಾಹಿತಿಗಳನ್ನು ಹಂಚಿಕೊಳ್ಳುವುದು ನಮ್ಮ ನಿರಂತರ ಕಾರ್ಯತಂತ್ರದ ಸಹಯೋಗದ ಭಾಗವಾಗಿದೆ” ಎಂದು ಅವರು ಹೇಳಿದರು.

https://x.com/i/status/1938229868535402643

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚಿದ ಮಿಲಿಟರಿ ಚಟುವಟಿಕೆಯ ಹಿನ್ನೆಲೆಯಲ್ಲಿ ಈ ಹೇಳಿಕೆಗಳು ಬಂದಿವೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಪ್ರತೀಕಾರವಾಗಿ, ಭಾರತೀಯ ಸಶಸ್ತ್ರ ಪಡೆಗಳು ಗಡಿಯಾಚೆಗಿನ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಪ್ರಾರಂಭಿಸಿದವು. ಇದರ ನಂತರ ಪಾಕಿಸ್ತಾನದಿಂದ ಗಡಿಯಾಚೆಗಿನಿಂದ ಶೆಲ್ ದಾಳಿ ನಡೆಯಿತು, ಇದರಲ್ಲಿ ನಿಯಂತ್ರಣ ರೇಖೆಯ (LoC) ಉದ್ದಕ್ಕೂ ನಾಗರಿಕ ಪ್ರದೇಶಗಳ ಮೇಲಿನ ದಾಳಿಗಳು ಸೇರಿವೆ.
ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತೀಯ ಸೇನೆ ಬಲವಾಗಿ ಪ್ರತಿದಾಳಿ ನಡೆಸಿತು. ಭಾರತೀಯ ಕ್ಷಿಪಣಿಗಳು 11 ಪಾಕಿಸ್ತಾನಿ ವಾಯುನೆಲೆಗಳನ್ನು ಹೊಡೆದು ನಾಶಪಡಿಸಿದವು, ಇದರಿಂದಾಗಿ ಪಾಕಿಸ್ತಾನವು ಹಿಂದೆ ಸರಿಯಬೇಕಾಯಿತು ಎಂದು ವರದಿಗಳು ಸೂಚಿಸುತ್ತವೆ.

ಪ್ರಮುಖ ಸುದ್ದಿ :-   ಒಎಸ್‌ಎಂ ಮೌಲ್ಯಮಾಪನ ವಿವಾದದ ಬೆನ್ನಲ್ಲೇ ಬಿಗ್ ಸರ್ಜರಿ: ಸಿಬಿಎಸ್‌ಇ ನೂತನ ಮುಖ್ಯಸ್ಥರಾಗಿ ಲೋಖಂಡೆ ಪ್ರಶಾಂತ ಸೀತಾರಾಮ ನೇಮಕ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement