ಜಗತ್ತಿನ ಅತ್ಯಂತ ಅಮೂಲ್ಯವಾದ ಕಣ್ಣೀರು ; ಒಂಟೆಯ ಕಣ್ಣೀರಿನ ಹನಿ 26 ಜಾತಿ ವಿಷದ ಹಾವುಗಳ ಕಡಿತಕ್ಕೆ ದಿವ್ಯ ಔಷಧ : ಹೊಸ ಅಧ್ಯಯನ

ಮರುಭೂಮಿ ಪ್ರದೇಶಗಳಿಗೆ ಬಹಳ ಉಪಯುಕ್ತ ಪ್ರಾಣಿಗಳೆಂದು ಪರಿಗಣಿಸಲಾದ ಒಂಟೆಗಳು ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಯನ್ನು ತರಬಹುದು. ಒಂಟೆಗಳ ಕಣ್ಣೀರು ವಿಷಯ ಹಾವುಗಳ ಕಡಿತಕ್ಕೆ ರಾಮಬಾಣವಾಗಬಹುದು ಎಂದು ಹೊಸ ಸಂಶೋಧನೆಯೊಂದು ಹೇಳುತ್ತದೆ. ಬಿಕಾನೆರ್ ಮೂಲದ ರಾಷ್ಟ್ರೀಯ ಒಂಟೆ ಸಂಶೋಧನಾ ಕೇಂದ್ರ (NRCC) ನಡೆಸಿದ ಅಧ್ಯಯನವು ಒಂಟೆ ಕಣ್ಣೀರಿನಲ್ಲಿ ಕಂಡುಬರುವ ಪ್ರತಿಕಾಯಗಳು ವಿವಿಧ 26 ಜಾತಿಯ ಹಾವುಗಳ ವಿಷವನ್ನು ತಟಸ್ಥಗೊಳಿಸಬಹುದು ಎಂದು ಕಂಡುಹಿಡಿದಿದೆ. ಈ ಅಧ್ಯಯನವು ಹಾವು ಕಡಿತದ ಚಿಕಿತ್ಸೆಗೆ ಹೊಸ ದಾರಿಯನ್ನು ತೆರೆಯಬಹುದು ಎಂದು ನಿರೀಕ್ಷಿಸಲಾಗಿದೆ.
ರಾಜಸ್ಥಾನದ ಬಿಕಾನೇರ್‌ನಲ್ಲಿರುವ ರಾಷ್ಟ್ರೀಯ ಒಂಟೆ ಸಂಶೋಧನಾ ಕೇಂದ್ರ (NRCC) ನಡೆಸಿದ ಮಹತ್ವದ ಅಧ್ಯಯನದಲ್ಲಿ ಒಂಟೆ ಕಣ್ಣೀರು ಮತ್ತು ರೋಗನಿರೋಧಕ ವ್ಯವಸ್ಥೆ(immune systems)ಗಳಿಂದ ಪಡೆದ ಪ್ರತಿಕಾಯಗಳು (antibodies) ಹಾವಿನ ವಿಷವನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ, ಹಾವು ಕಡಿತಕ್ಕೆ ಚಿಕಿತ್ಸೆ ನೀಡಲು ಹೊಸ ಮಾರ್ಗವನ್ನು ತೆರೆಯುತ್ತದೆ ಎಂದು ಕಂಡುಬಂದಿದೆ. ಇದು ಒಂಟೆ ಸಾಕಣೆದಾರರ ಆದಾಯವನ್ನು ಹೆಚ್ಚಿಸಲು ಕಾರಣವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಲಿವರ್‌ಪೂಲ್ ಸ್ಕೂಲ್ ಆಫ್ ಟ್ರಾಪಿಕಲ್ ಮೆಡಿಸಿನ್‌ನಲ್ಲಿರುವ ಸ್ನೇಕ್‌ಬೈಟ್ ರಿಸರ್ಚ್ ಸೆಂಟರ್ ಅಧ್ಯಯನ ಕೂಡ ಒಂಟೆ ಕಣ್ಣೀರು ಹಾವು ಕಡಿತದ ಔಷಧಕ್ಕೆ ಪರಿಣಾಮಕಾರಿ ಎಂದು ಕಂಡುಹಿಡಿದಿದೆ. ಇದಕ್ಕೂ ಮೊದಲು, ದುಬೈನ ಕೇಂದ್ರ ಪಶುವೈದ್ಯಕೀಯ ಸಂಶೋಧನಾ ಪ್ರಯೋಗಾಲಯದ ಸಂಶೋಧನೆಯು ಒಂಟೆ ಕಣ್ಣೀರಿನ ಈ ಅದ್ಭುತ ಸಾಮರ್ಥ್ಯಗಳ ಬಗ್ಗೆ ಬೆಳಕು ಚೆಲ್ಲಿತ್ತು. ಇದರಿಂದಾಗಿ, ಒಂಟೆ ಕಣ್ಣೀರಿನ ಬೆಲೆ ಇನ್ನಷ್ಟು ಹೆಚ್ಚಾಗಬಹುದು.

ಒಂಟೆಯ ಕಣ್ಣೀರು ಹಾವಿನ ವಿಷದ ವಿರುದ್ಧ ಎಷ್ಟು ಶಕ್ತಿಶಾಲಿ..?
ವರದಿಗಳ ಪ್ರಕಾರ, ಒಂಟೆ ಕಣ್ಣೀರಿನಲ್ಲಿ ಕಂಡುಬರುವ ಪ್ರತಿಕಾಯಗಳು ವಿವಿಧ 26 ಜಾತಿಯ ಹಾವುಗಳ ವಿಷವನ್ನು ತಟಸ್ಥಗೊಳಿಸಬಹುದು ಎಂದು ಕಂಡುಂದಿದೆ. ರಾಷ್ಟ್ರೀಯ ಒಂಟೆ ಸಂಶೋಧನಾ ಕೇಂದ್ರದ (NRCC) ವಿಜ್ಞಾನಿಗಳು ಸಂಶೋಧಕರು ಹಲವಾರು ಪ್ರಯೋಗಗಳನ್ನು ನಡೆಸಿದರು, ಇದರಲ್ಲಿ ಅವರು ಒಂಟೆಗಳಿಗೆ (Camelus dromedarius) ಹಾವಿನ ಅತ್ಯಂತ ವಿಷಕಾರಿ ಜಾತಿಯಾದ ಗರಗಸದ ಸ್ಕೇಲ್ಡ್ ವೈಪರ್ (Echis carinatus sochureki)) ವಿಷವನ್ನು ಚುಚ್ಚಿದರು. ಈ ಹಾವು ಕಚ್ಚಿದ ನಂತರ ಬದುಕುವುದು ಕಷ್ಟ ಎಂದು ಪರಿಗಣಿಸಲಾಗಿದೆ. ಒಂಟೆ ಕಣ್ಣೀರಿನಿಂದ ಹೊರತೆಗೆಯಲಾದ ಪ್ರತಿಕಾಯಗಳು ಇದರ ವಿಷದ ಮಾರಕ ಪರಿಣಾಮಗಳನ್ನು ತಟಸ್ಥಗೊಳಿಸುವಲ್ಲಿ ಯಶಸ್ವಿಯಾಗಿವೆ. ಒಂಟೆಯ ಕಣ್ಣೀರು ಮತ್ತು ರಕ್ತದಿಂದ ಹೊರತೆಗೆಯಲಾದ ಪ್ರತಿಕಾಯಗಳು ವಿಷದ ಮಾರಕ ಪರಿಣಾಮಗಳನ್ನು – ವಿಶೇಷವಾಗಿ ರಕ್ತಸ್ರಾವ ಮತ್ತು ಕೋಗುಲೋಪತಿ(coagulopathy)ಯನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಿತು ಎಂದು ಕಂಡುಬಂದಿದೆ.
ಅಲ್ಲದೆ, ಒಂಟೆ ಪ್ರತಿಕಾಯಗಳು ಕಡಿಮೆ ಅಲರ್ಜಿ ಸಮಸ್ಯೆಗಳನ್ನು ಹೊಂದಿದ್ದವು ಮತ್ತು ಕುದುರೆ ಇಮ್ಯುನೊಗ್ಲಾಬ್ಯುಲಿನ್ (IgG) ನಿಂದ ತಯಾರಿಸಿದ ಸಾಂಪ್ರದಾಯಿಕ ಪ್ರತಿವಿಷ(antivenoms)ಗಳ ಪರಿಣಾಮಕ್ಕೆ ಹೋಲಿಸಿದರೆ ಇದು ಹೆಚ್ಚು ಪ್ರಬಲವಾಗಿದ್ದವು ಎಂಬುದು ಕಂಡುಬಂದಿದೆ.

ಪ್ರಮುಖ ಸುದ್ದಿ :-   ಕುಟುಂಬದಲ್ಲಿ ದುರಂತ ; ಪಾಪ ಪ್ರಜ್ಞೆಯಿಂದ ನರಳಿ ಪೊಲೀಸ್‌ ಠಾಣೆಗೆ ಬಂದು 39 ವರ್ಷಗಳ ಹಿಂದೆ ಕೊಲೆ ಮಾಡಿದ್ದನ್ನು ಒಪ್ಪಿಕೊಂಡ ವ್ಯಕ್ತಿ....!

ಒಂಟೆ ಕಣ್ಣೀರಿನಲ್ಲಿ ವಿಶೇಷ ರೀತಿಯ ಪ್ರತಿವಿಷಗಳಿವೆ, ಅವು ಹಾವಿನ ವಿಷದ ವಿರುದ್ಧ ಅತ್ಯಂತ ಪರಿಣಾಮಕಾರಿ ಎಂದು ಸಂಶೋಧಕರು ಹೇಳುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಹಾವಿನ ವಿಷಕ್ಕೆ ಚಿಕಿತ್ಸೆ ನೀಡಲು ಒಂಟೆ ಕಣ್ಣೀರಿನಿಂದ ಪರಿಣಾಮಕಾರಿ ಔಷಧಿಗಳನ್ನು ತಯಾರಿಸಬಹುದು. ಈ ರೀತಿಯ ಔಷಧವು ಭಾರತ ಸೇರಿದಂತೆ ದೇಶಗಳಿಗೆ ಹೆಚ್ಚಿನ ಪರಿಹಾರವನ್ನು ತರಬಹುದು, ಅಲ್ಲಿ ಪ್ರತಿ ವರ್ಷ ಹಾವು ಕಡಿತದಿಂದ ಸಾವಿರಾರು ಸಾವುಗಳು ಸಂಭವಿಸುತ್ತವೆ. ಅಲ್ಲದೆ, ಕುದುರೆಯಿಂದ ಪ್ರತಿವಿಷದ ಉತ್ಪಾದನೆಗೆ ದುಬಾರಿ ಮತ್ತು ಸಂಗ್ರಹಿಸಲು ಸಂಕೀರ್ಣವಾಗಿವೆ ಎಂದು ಹೇಳಲಾಗಿದೆ.
ಭಾರತದಲ್ಲಿ ಹಾವು ಕಡಿತದಿಂದ ವರ್ಷಕ್ಕೆ ಸುಮಾರು 58,000 ಸಾವುಗಳು ಸಂಭವಿಸುತ್ತವೆ ಮತ್ತು 1,40,000 ಅಂಗವೈಕಲ್ಯ ಪ್ರಕರಣಗಳಿಗೆ ಸಾಕ್ಷಿಯಾಗುತ್ತದೆ. ಇದು ಜಾಗತಿಕವಾಗಿ ಅತಿ ಹೆಚ್ಚು. ರಾಷ್ಟ್ರೀಯ ಒಂಟೆ ಸಂಶೋಧನಾ ಕೇಂದ್ರ(NRCC)ವು ಒಂಟೆಯಿಂದ ಪಡೆದ ಪ್ರತಿಕಾಯಗಳು ಕಡಿಮೆ ವೆಚ್ಚದಾಯಕ, ಸುರಕ್ಷಿತ ಮತ್ತು ಉತ್ಪಾದಿಸಲು ಸುಲಭವಾದ ಚಿಕಿತ್ಸೆಗಳಿಗೆ ಕಾರಣವಾಗಬಹುದು. ಹಾವು ಕಡಿತಗಳು ಸಾಮಾನ್ಯವಾಗಿರುವ ಮತ್ತು ಸಕಾಲಿಕ ವೈದ್ಯಕೀಯ ನೆರವು ಪಡೆಯುವುದು ಹೆಚ್ಚು ಕಷ್ಟಕರವಾದ ಗ್ರಾಮೀಣ ಪ್ರದೇಶದ ರೋಗಿಗಳಿಗೆ ಇದು ಉತ್ತಮ ಚಿಕಿತ್ಸೆಗೆ ದಾರಿಮಾಡಿಕೊಡಬಹುದು ಎಂದು ನಿರೀಕ್ಷಿಸಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಬಾಲಕರ ಹುಚ್ಚಾಟ : ರೀಲ್‌ ಸ್ಟಂಟ್‌ ಮಾಡಲು ವೇಗವಾಗಿ ಚಲಿಸುತ್ತಿದ್ದ ರೈಲಿನ ಕೆಳಗೆ ಮಲಗಿದ ಬಾಲಕ : ಮೂವರು ಅಪ್ರಾಪ್ತರ ಬಂಧನ

ರಾಜಸ್ಥಾನದ ಬಿಕಾನೇರ್, ಜೈಸಲ್ಮೇರ್ ಮತ್ತು ಜೋಧಪುರದಂತಹ ಪ್ರದೇಶಗಳಲ್ಲಿ ಒಂಟೆ ಸಾಕಣೆ ಮಾಡುವವರ ಆರ್ಥಿಕ ಪರಿವರ್ತನೆಗೂ ಈ ಸಂಶೋಧನೆ ಕಾರಣವಾಗಬಹುದು. ಕಣ್ಣೀರು ಮತ್ತು ರಕ್ತದ ಮಾದರಿಗಳನ್ನು ನಿಯಂತ್ರಿತವಾಗಿ ಮತ್ತು ಸುರಕ್ಷಿತವಾಗಿ ಹೊರತೆಗೆಯಲು ತಮ್ಮ ಒಂಟೆಗಳನ್ನು ನೀಡುವಂತೆ ಎನ್‌ಆರ್‌ಸಿಸಿ (NRCC) ಸ್ಥಳೀಯ ರೈತರನ್ನು ಪ್ರೋತ್ಸಾಹಿಸಿದೆ. ಪ್ರತಿಯಾಗಿ, ಅವರಿಗೆ ಸಾಕಷ್ಟು ಹಣ ನೀಡಲಾಗುತ್ತದೆ.
ವರದಿಯ ಪ್ರಕಾರ, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಇತರ ಖಾಸಗಿ ಔಷಧ ತಯಾರಕರು ಸೇರಿದಂತೆ ಔಷಧೀಯ ಕಂಪನಿಗಳು ಈಗ ಒಂಟೆಯಿಂದ ಪಡೆದ ಪ್ರತಿಕಾಯಗಳನ್ನು ಹುಡುಕುತ್ತಿವೆ. ಅಂದಾಜಿನ ಪ್ರಕಾರ, ರೈತರು ಪ್ರತಿ ಒಂಟೆಗೆ ತಿಂಗಳಿಗೆ ₹5,000 ರಿಂದ ₹10,000 ಹೆಚ್ಚುವರಿ ಆದಾಯ ಗಳಿಸುತ್ತಾರೆ, ಇದು ಅವರಿಗೆ ಹೊಸ ಆದಾಯದ ಮೂಲವನ್ನು ಸೃಷ್ಟಿಸುತ್ತದೆ. ಅವುಗಳ ವಿಶಿಷ್ಟ ರೋಗನಿರೋಧಕ ಶಕ್ತಿ ಮತ್ತು ತೀವ್ರ ಹವಾಮಾನಕ್ಕೆ ಹೊಂದಿಕೊಳ್ಳುವ ಗುಣಧರ್ಮದಿಂದಾಗಿ, ಈಗ ಒಂಟೆಗಳನ್ನು ಹೊಸ ಬೆಳಕಿನಲ್ಲಿ ನೋಡಲಾಗುತ್ತಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement