ಮಂಡ್ಯ : ಮಂಡ್ಯ ಜಿಲ್ಲೆಯಲ್ಲಿ ಪಿಕ್ನಿಕ್ ವೇಳೆ ಕಾವೇರಿ ನದಿ ಬಳಿ ಫೋಟೋ ತೆಗೆದುಕೊಳ್ಳಲು ಹೋಗಿ ನಿರ್ಮಾಣ ಹಂತದಲ್ಲಿರುವ ಸೇತುವೆಯಿಂದ ಆಯತಪ್ಪಿ ಬಿದ್ದು ವ್ಯಕ್ತಿಯೊಬ್ಬರು ನಾಪತ್ತೆಯಾದ ಘಟನೆ ಶ್ರೀರಂಗಪಟ್ಟಣದಲ್ಲಿ ಬಳಿ ನಡೆದಿದೆ ಎಂದು ವರದಿಯಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಈ ದುರಂತದ ವೀಡಿಯೊ ವೈರಲ್ ಆಗಿದ್ದು, ಆಯತಪ್ಪಿ ಬಿದ್ದ ನಂತರ ವ್ಯಕ್ತಿ ಕಾವೇರಿ ನದಿಯ ಬಲವಾದ ಪ್ರವಾಹದಲ್ಲಿ ಸಿಲುಕಿ ನಾಪತ್ತೆಯಾಗಿದ್ದಾರೆ.
ವರದಿಯ ಪ್ರಕಾರ, ಮೈಸೂರಿನ ಆಟೋರಿಕ್ಷಾ ಚಾಲಕ 36 ವರ್ಷದ ಮಹೇಶ ಎಂದು ಗುರುತಿಸಲಾದ ವ್ಯಕ್ತಿ ಶ್ರೀರಂಗಪಟ್ಟಣದ ಸರ್ವ ಧರ್ಮ ಆಶ್ರಮದ ಸಮೀಪದ ಕೃಷ್ಣ ರಾಜ ಸಾಗರ (ಕೆಆರ್‌ಎಸ್) ಪ್ರದೇಶದ ಬಳಿ ಸ್ನೇಹಿತರೊಂದಿಗೆ ಪಿಕ್ನಿಕ್‌ಗೆ ಬಂದಿದ್ದರು.
ಮಹೇಶ ತನ್ನ ಫೋಟೋ ತೆಗೆಯಲು ಪ್ರಯತ್ನಿಸುತ್ತಿದ್ದಾಗ ಸಮತೋಲನ ತಪ್ಪಿ ಸೇತುವೆಯಿಂದ ಆಯತಪ್ಪಿ ಬಿದ್ದಿದ್ದಾರೆ ಎಂದು ಹೇಳಲಾಗಿದೆ. ಹೆಚ್ಚಿದ್ದ ನೀರಿನ ಮಟ್ಟ ಮತ್ತು ಬಲವಾದ ಪ್ರವಾಹದಿಂದಾಗಿ, ಅವರು ಕಾವೇರಿ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸೇರಿದಂತೆ ರಕ್ಷಣಾ ತಂಡಗಳು ಸ್ಥಳದಲ್ಲಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿವೆ.
ವೈರಲ್ ಆದ ವಿಡಿಯೋದಲ್ಲಿ, ಮಹೇಶ ಅವರು ಹಿಂದೆ ಸರಿದು ಕಟ್ಟೆ ಮೇಲೆ ಕೂರಲು ಪ್ರಯತ್ನಿಸುತ್ತಿದ್ದರು. ಆಗ ಅವರು ನಿಯಂತ್ರಣ ತಪ್ಪಿ ನದಿಗೆ ಬಿದ್ದಿದ್ದಾರೆ. ಮಾಹಿತಿ ಸಿಕ್ಕ ತಕ್ಷಣವೇ ಆಗಮಿಸಿರುವ ರಕ್ಷಣಾ ಸಿಬ್ಬಂದಿ ಹಾಗೂ ಅಗ್ನಿಶಮಾಕ ದಳದವರು ತೀವ್ರ ಹುಡುಕಾಟ ನಡೆಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ