ಶಿರಸಿ : ಇಂದಿನಿಂದ (ಜು.11) ಸಾಂಪ್ರದಾಯಿಕ ತರಕಾರಿ ಬೀಜ ಮೇಳ-ಮಲೆನಾಡು ಮೇಳ

ಶಿರಸಿ : ಉತ್ತರಕನ್ನಡ ಸಾವಯವ ಒಕ್ಕೂಟ , ಶಿರಸಿ ಮತ್ತು ವನಸ್ತ್ರೀ ಸಂಸ್ಥೆ ಸಹಯೋಗದಲ್ಲಿ ಎರಡು ದಿನಗಳ ಮಲೆನಾಡು ಮೇಳ ಹಾಗೂ ಸಾಂಪ್ರದಾಯಿಕ ತರಕಾರಿ ಬೀಜ ಮೇಳವನ್ನು ಜುಲೈ 11 ಮತ್ತು 12ರಂದು ಇಲ್ಲಿನ ಎಪಿಎಂಸಿಯ ಹೊಸ ಮಾರುಕಟ್ಟೆ ಆವರಣದಲ್ಲಿರುವ ಟಿಆರ್‌ಸಿ ಬ್ಯಾಂಕ್ ಪಕ್ಕದ ಪಿಸಿಆರ್‌ಡಿ ಬ್ಯಾಂಕ್ ಕಟ್ಟಡದ ನೆಲಸಿರಿ ಅರ್ಗ್ಯಾನಿಕ್ ಹಬ್‌ನಲ್ಲಿ ಆಯೋಜಿಸಲಾಗಿದೆ.
ಜುಲೈ 11 ಮತ್ತು 12ರಂದು ಬೆಳಿಗ್ಗೆ 10ರಿಂದ ಸಂಜೆ 7 ಗಂಟೆ ವರೆಗೆ ನಡೆಯಲಿದೆ. ಮೇಳದಲ್ಲಿ ವಿವಿಧ ರೀತಿಯ ತರಕಾರಿ ಬೀಜಗಳ ಪ್ರರ್ಶನ ಮತ್ತು ಮಾರಾಟ, ಗೃಹೋತ್ಪನ್ನ, ಹೂವು ಹಾಗೂ ತರಕಾರಿ ಸಸ್ಯಗಳ ಪ್ರರ್ಶನ ಮತ್ತು ಮಾರಾಟ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ. 8660553054 ಸಂಪರ್ಕಿಸಲು ಕೋರಲಾಗಿದೆ.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಹೇರ್‌ ಕಟ್‌ ಮಾಡಿಸಿಕೊಳ್ಳಲು ಹೇಳಿದ್ದಕ್ಕೆ ಗುರು ಪೂರ್ಣಿಮೆ ದಿನವೇ ಪ್ರಾಂಶುಪಾಲರನ್ನು ಇರಿದು ಕೊಂದ ಇಬ್ಬರು ವಿದ್ಯಾರ್ಥಿಗಳು...!

ನಿಮ್ಮ ಕಾಮೆಂಟ್ ಬರೆಯಿರಿ

advertisement