ನಡುರಸ್ತೆಯಲ್ಲಿ ವ್ಯಕ್ತಿಯ ಫೋನ್ ಕಸಿದುಕೊಂಡು ಪರಾರಿ ; ಆದ್ರೆ ತನಿಖೆ ವೇಳೆ ಆತನ ಪತ್ನಿಯ ವಿವಾಹೇತರ ಸಂಬಂಧ ಬಯಲಾಯ್ತು…!

ನವದೆಹಲಿ: ದೆಹಲಿಯಲ್ಲಿ ನಡೆದ ಫೋನ್ ಕದ್ದ ಘಟನೆಯಲ್ಲಿ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದ್ದು, ವಿವಾಹೇತರ ಸಂಬಂಧವೊಂದು ಬಯಲಾಗಿದೆ. ಸ್ಕೂಟಿಯಲ್ಲಿ ಬಂದ ಇಬ್ಬರು ವ್ಯಕ್ತಿಗಳು ಫೋನ್ ಕದ್ದ ವ್ಯಕ್ತಿ ದೂರು ನೀಡಿದ ನಂತರ ಇದು ತನ್ನ ಪತ್ನಿಯೇ ಯೋಜಿಸಿದ್ದ ಕೃತ್ಯ ಎಂದು ಬೆಳಕಿಗೆ ಬಂದಿದೆ.
ಆ ವ್ಯಕ್ತಿ ಆರಂಭದಲ್ಲಿ ದಕ್ಷಿಣ ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಅಲ್ಲಿಂದ ತೆರಳಿದ್ದ. ಆದರೆ ನಂತರ, ಪೊಲೀಸರು ತನಿಖೆ ನಡೆಸಿ, 70 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿದಾಗ, ಅವರ ಪತ್ನಿಯೇ ಈ ಕಳ್ಳತನದ ಸಂಚು ರೂಪಿಸಿದ್ದರು ಎಂದು ಕಂಡುಬಂದಿದೆ.
ದಕ್ಷಿಣ ದೆಹಲಿ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಅಂಕಿತ್ ಚೌಹಾಣ ಅವರ ಪ್ರಕಾರ, ಜೂನ್ 19 ರಂದು, ಹಳೆಯ ಯುಕೆ ಪೇಂಟ್ ಫ್ಯಾಕ್ಟರಿ ಬಳಿ ವ್ಯಕ್ತಿಯೊಬ್ಬರ ಫೋನ್ ಕಿತ್ತುಕೊಳ್ಳಲಾಗಿದೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು.

ಪೊಲೀಸರು ಆ ಪ್ರದೇಶದಲ್ಲಿ ಅಳವಡಿಸಲಾದ 70 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿದಾಗ, ಆರೋಪಿ ನೀಲಿ ಟಿ-ಶರ್ಟ್ ಧರಿಸಿರುವುದನ್ನು ಪತ್ತೆ ಹಚ್ಚಿದರು. ದರ್ಯಾಗಂಜ್‌ನಿಂದ ಒಂದು ದಿನದ ಬಾಡಿಗೆಗೆ ಪಡೆದಿದ್ದ ಸ್ಕೂಟರ್‌ನ ನೋಂದಣಿ ಸಂಖ್ಯೆಯನ್ನು ವಸಂತ ಕುಂಜದ ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ (ANPR) ಕ್ಯಾಮೆರಾದಿಂದ ಪೊಲೀಸರು ಪತ್ತೆಹಚ್ಚಿದ್ದಾರೆ.
ಸ್ಕೂಟಿಯನ್ನು ಬಾಡಿಗೆಗೆ ಪಡೆದ ವ್ಯಕ್ತಿಯ ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ಆಧಾರದ ಮೇಲೆ ತನಿಖಾ ತಂಡವು ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಬಲೋತ್ರಾವನ್ನು ತಲುಪಿ ಆರೋಪಿಗಳಲ್ಲಿ ಒಬ್ಬನಾದ ಅಂಕಿತ ಗೆಹ್ಲೋಟ್ ಎಂಬಾತನನ್ನು ಬಂಧಿಸಿತು, ನಂತರ ಪೊಲೀಸರ ವಿಚಾರಣೆ ಈತ ಕಳ್ಳತನದ ಹಿಂದಿನ ಉದ್ದೇಶವನ್ನು ಬಹಿರಂಗಪಡಿಸಿದ್ದಾನೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

ಇನ್ನೊಬ್ಬ ವ್ಯಕ್ತಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಮೊಬೈಲ್‌ ಕಳೆದುಕೊಂಡವನ ಪತ್ನಿ ತನ್ನ ಗಂಡನ ಕೈಯಿಂದ ಮೊಬೈಲ್‌ ಕಿತ್ತುಕೊಳ್ಳಲು ತನ್ನನ್ನು ನೇಮಿಸಿಕೊಂಡಿದ್ದಾಳೆ ಎಂದು ಅಂಕಿತ ಹೇಳಿದ್ದಾನೆ. ಅಂಕಿತ ಪ್ರಕಾರ, ವಿವಾಹೇತರ ಸಂಬಂಧ ಹೊಂದಿರುವ ಒತ್ನಿಯು ತನ್ನ ಪ್ರೇಮಿ ಜೊತೆ ಇರುವ ಚಿತ್ರಗಳು ಅವಳ ಗಂಡನ ಫೋನ್‌ನಲ್ಲಿ ಇತ್ತು. ಅವಳು ಅವುಗಳನ್ನು ಡಿಲೀಟ್‌ ಮಾಡಲು ಬಯಸಿದ್ದಳು ಮತ್ತು ಆದ್ದರಿಂದ ಪತಿಯ ಮೊಬೈಲ್‌ ಕಳುವು ಮಾಡಲು ಸಂಚು ರೂಪಿಸಿದಳು. ತನ್ನ ಗಂಡನ ದೈನಂದಿನ ದಿನಚರಿ, ಕಚೇರಿ ಸಮಯ ಮತ್ತು ಆತ ಓಡಾಡುವ ರಸ್ತೆಯ ವಿವರಗಳನ್ನು ಈಕೆ ಅಂಕಿತನಿಗೆ ನೀಡಿದ್ದಳು.
ಪೊಲೀಸರು ಕದ್ದ ಮೊಬೈಲ್ ಫೋನ್ ಅನ್ನು ಅಂಕಿತ್‌ನಿಂದ ವಶಪಡಿಸಿಕೊಂಡಿದ್ದಾರೆ ಮತ್ತು ಅಂಕಿತ್ ಮತ್ತು ದೂರುದಾರನ ಪತ್ನಿ ಇಬ್ಬರನ್ನೂ ಬಂಧಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಪತಿಗೆ ತನ್ನ ಹೆಂಡತಿಯ ಸಂಬಂಧದ ಬಗ್ಗೆ ತಿಳಿದಿತ್ತು ಮತ್ತು ಅವಳು ಮಲಗಿದ್ದಾಗ ಈ ಚಿತ್ರಗಳನ್ನು ಅವಳ ಮೊಬೈಲ್‌ನಿಂದ ತನ್ನ ಫೋನ್‌ಗೆ ವರ್ಗಾಯಿಸಿಕೊಂಡಿದ್ದಾನೆ. ಪತ್ನಿಗೆ ವಿಷಯ ತಿಳಿದಾಗ, ತನ್ನ ಕುಟುಂಬದ ಮುಂದೆ ತಾನು ಬಹಿರಂಗಗೊಳ್ಳುವ ಭಯದಿಂದ ಅದನ್ನು ಪತಿಯ ಮೊಬೈಲ್‌ನಿಂದ ಅಳಿಸಲು ಈ ಸಂಚು ರೂಪಿಸಿದ್ದಳು.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement