ಕಾರವಾರ : ಗಾಳಿ ಮಳೆಗೆ ಬೃಹತ್ ಮರವೊಂದು ಕಾರಿನ ಮೇಲೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಜಿಲ್ಲಾಧಿಕಾರಿ ಸನಿಹದ ಆಸ್ಪತ್ರೆಯ ಮುಂಭಾಗದಲ್ಲಿ ಭಾನುವಾರ ನಡೆದಿದೆ ಎಂದು ವರದಿಯಾಗಿದೆ.
ಭಾನುವಾರ ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿದೆ. ಸಂತೆಯ ದಿನವಾದ ಕಾರಣ ಪಿಕಳೆ ರಸ್ತೆಯಲ್ಲಿ ಜನ ಸಂಚಾರ ಹೆಚ್ಚಾಗಿತ್ತು. ಮರದ ಕೆಳಗಿದ್ದ ಕಾರೊಂದರ ಮೇಲೆ ಬೃಹತ್ ಮರ ಉರುಳುಬಿದ್ದಿದ್ದು, ಬೃಹತ್ ಟೊಂಗೆ ಕಾರಿನ ಮೇಲೆ ಬಿದ್ದ ಪರಿಣಾಮ ಕಾರವಾರ ತಾಲೂಕಿನ ಮಲ್ಲಾಪುರದ 60 ವರ್ಷದ ಮಹಿಳೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮಹಿಳೆಯನ್ನುತಾಲೂಕಿನ ಮಲ್ಲಾಪುರದ ಲಕ್ಷ್ಮೀ ಎಂದು ಗುರುತಿಸಲಾಗಿದೆ.
ಗರ್ಭಿಣಿ ಸೊಸೆಯನ್ನು ಅವರು ಆಸ್ಪತ್ರೆಗೆ ಕರೆತಂದ್ದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಮಗ ಹಾಗೂ ಸೊಸೆ ಆಸ್ಪತ್ರೆಯ ಒಳಗೆ ಚೆಕ್ ಅಪ್ ಮಾಡಿಸುವಾಗ ಮಹಿಳೆ ಕಾರಿನಲ್ಲಿ ಕುಳಿತಿದ್ದರು. ಆಗ ಮರ ಉರುಳಿ ಕಾರಿನ ಮೇಲೆ ಬಿದ್ದಿದೆ. ಮರದ ಕೆಳಗಿದ್ದ ಮೂವರು ವ್ಯಾಪಾರಿಗಳಿಗೂ ಸಣ್ಣ ಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ.
ಕ್ರೇನ್ ತರಿಸಿದ ಪೊಲೀಸರು ತಕ್ಷಣ ಕಾರ್ಯಾಚರಣೆ ಪ್ರಾರಂಭಿಸಿದರು. ಅಂಬುಲೆನ್ಸ್ ಮೂಲಕ ಕಾರಿನಲ್ಲಿದ್ದ ಮಹಿಳೆಯನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು ಮರದ ಬಿದ್ದ ರಭಸಕ್ಕೆ ಒಂದು ಟ್ರಾನ್ಸಫಾರ್ಮರ್ ಹಾಗೂ ನಾಲ್ಕಾರು ಕಂಬಗಳು ಸಹ ಉರುಳಿವೆ


ನಿಮ್ಮ ಕಾಮೆಂಟ್ ಬರೆಯಿರಿ