ಕುಮಟಾ | ಹಿಂದೂಸ್ತಾನಿ ಗಾಯನ ; ಕೇಂದ್ರ ಸರ್ಕಾರದ ವಿದ್ಯಾರ್ಥಿ ವೇತನಕ್ಕೆ ರಿಷಾ ನಾಯಕ ಆಯ್ಕೆ

ಕುಮಟಾ : ಚಿಕ್ಕ ಪ್ರತಿಭಾವಂತ ಮಕ್ಕಳಿಗೆ ನೀಡುವ ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾದ ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರ (CCRT)ದ ಸಾಂಸ್ಕೃತಿಕ ಪ್ರತಿಭಾ ಶೋಧ ವಿದ್ಯಾರ್ಥಿ ವೇತನಕ್ಕೆ (Cultural Talent Search Scholarship) ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಐದನೇ ತರಗತಿಯ ವಿದ್ಯಾರ್ಥಿನಿ ರಿಷಾ ನಾಯಕ ಆಯ್ಕೆಯಾಗಿದ್ದಾಳೆ.
ರಿಷಾ ನಾಯಕ ಕಳೆದ ಐದಾರು ವರ್ಷಗಳಿಂದ ಕೂಜಳ್ಳಿಯ ಪಂಡಿತ ಗೌರೀಶ ಯಾಜಿ ಅವರಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಗಾಯನವನ್ನು ಕಲಿಯುತ್ತಿದ್ದಾಳೆ. ವಿದ್ಯಾರ್ಥಿನಿ ರಿಷಾ ನಾಯಕ ಕುಮಟಾದ ಶ್ರದ್ಧಾ ನಾಯಕ ಹಾಗೂ ಉದ್ಯಮಿ ಸಂದೀಪ ನಾಯಕ ದಂಪತಿಯ ಪುತ್ರಿ.
ಸಾಂಸ್ಕೃತಿಕ ಪ್ರತಿಭಾ ಶೋಧ ವಿದ್ಯಾರ್ಥಿವೇತನ (CTSS) ಯೋಜನೆಯು ಅತ್ಯುತ್ತಮ ಪ್ರತಿಭಾವಂತ ಮಕ್ಕಳಿಗೆ ಭಾರತೀಯ ಸಂಗೀತ, ನೃತ್ಯ, ನಾಟಕ ಹಾಗೂ ಚಿತ್ರಕಲೆ, ಶಿಲ್ಪಕಲೆ, ಕರಕುಶಲ ವಸ್ತುಗಳು ಮತ್ತು ಸಾಹಿತ್ಯ ಚಟುವಟಿಕೆಗಳಂತಹ ವಿವಿಧ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಹೆಚ್ಚಿನ ತರಬೇತಿ ಪಡೆಯಲು ಅನುಕೂಲವಾಗಲು ನೀಡುವ ವಿದ್ಯಾರ್ಥಿ ವೇತನವಾಗಿದೆ. ಮಾನ್ಯತೆ ಪಡೆದ ಶಾಲೆಗಳಲ್ಲಿ ಅಧ್ಯಯನ ಮಾಡುವ ಅಥವಾ ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಅಭ್ಯಾಸ ಮಾಡುವ ಕುಟುಂಬಗಳಿಗೆ ಸೇರಿದ 10 ರಿಂದ 14 ವರ್ಷ ವಯಸ್ಸಿನ ಪ್ರತಿಭಾವಂತ ಮಕ್ಕಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಹರು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement