ಬುದ್ಧಿವಾದ ಹೇಳಿದ್ದಕ್ಕೆ 3 ವರ್ಷದ ಅಣ್ಣನ ಮಗನನ್ನೇ ಕೊಲೆ ಮಾಡಿದ ತಮ್ಮ

ಬಾಗಲಕೋಟೆ: ಅಣ್ಣ ಬುದ್ಧಿವಾದ ಹೇಳಿದ್ದಕ್ಕೆ ಕೋಪಗೊಂಡು ಈತ 3 ವರ್ಷದ ಅಣ್ಣನ ಮಗುವಿಗೆ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಬೆನಕನವಾಡಿ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಕೊಲೆಯಾದ ಬಾಲಕನನ್ನು ಬೆನಕನವಾಡಿ ಗ್ರಾಮದ ಮಾರುತಿ ವಾಲಿಕಾರ ಎಂಬವರ 3 ವರ್ಷದ ಮಗ ಮಧುಕುಮಾರ ಎಂದು ಗುರುತಿಸಲಾಗಿದೆ. ಈ ಮಗುವಿನ ಚಿಕ್ಕಪ್ಪ ಭೀಮಪ್ಪ ಕೊಲೆ ಆರೋಪಿಯಾಗಿದ್ದಾನೆ. ಅಂಗನವಾಡಿಗೆ ಹೋಗಿದ್ದ ಬಾಲಕನನ್ನು ಚಿಕ್ಕಪ್ಪ ಭೀಮಪ್ಪ ನೇರವಾಗಿ ಮನೆಗೆ ಕರೆದುಕೊಂಡು ಹೋಗಿ,  ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.

ಮಂಗಳವಾರ ಬೆಳಗ್ಗೆ ಮಗುವಿನ ತಂದೆ-ತಾಯಿ ಹೊಲದ ಕೆಲಸಕ್ಕೆ ಹೋಗಿದ್ದರು. ಅಂಗನವಾಡಿಯಲ್ಲಿ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಬಾಲಕನನ್ನು ಭೀಮಪ್ಪ ಕರೆದುಕೊಂಡು ಹೋಗಿದ್ದಾನೆ. ನಂತರ ಈ ಪುಟ್ಟ ಮಗುವಿನ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ‌ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಬಾಲಕ ಮಧುಕುಮಾರ ತಂದೆ ಮಾರುತಿ ಆರೋಪಿ ಭೀಮಪ್ಪ ಡೊಡ್ಡಪ್ಪನ ಮಗನಾಗಿದ್ದಾನೆ. ಅಮೀನಗಢ ಪೊಲೀಸರು ಆರೋಪಿ ಭೀಮಪ್ಪನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕಳೆದ ವರ್ಷ ಭೀಮಪ್ಪ ತನ್ನ ಪತ್ನಿ ಜತೆ ಜಗಳವಾಡಿ, ಕಲ್ಲಿನಿಂದ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಆಗ ಬಾಲಕ ಮಧುಕುಮಾರನ ತಂದೆ ಮಾರುತಿ ಭೀಮಪ್ಪನಿಗೆ ಬೈದು ಬುದ್ಧಿ ಹೇಳಿದ್ದನಂತೆ. ಅದೇ ಸೇಡಿನಿಂದ ಹೀಗ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement