ಥೈಲ್ಯಾಂಡ್-ಕಾಂಬೋಡಿಯಾ ದೇಶಗಳ ನಡುವಿನ ಸಂಘರ್ಷದ ಕೇಂದ್ರಬಿಂದು 1000 ವರ್ಷಗಳ ಹಿಂದಿನ ʼಹಿಂದೂ ದೇವಾಲಯʼಗಳು…!

ನವದೆಹಲಿ: ಸುಮಾರು 1,000 ವರ್ಷಗಳಷ್ಟು ಹಳೆಯದಾದ ಹಿಂದೂ ದೇವಾಲಯಗಳನ್ನು ಹೊಂದಿರುವ ಐತಿಹಾಸಿಕವಾಗಿ ವಿವಾದಿತ ಎಮರಾಲ್ಡ್ ಪ್ರದೇಶದ ಕುರಿತು ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವಿನ ಘರ್ಷಣೆಗಳು ಈಗ ಎರಡು ದೇಶಗಳ ಸಂಬಂಧಗಳನ್ನು ಕೆಳಮಟ್ಟಕ್ಕೆ ತಂದಿವೆ.
ಶಿವನಿಗೆ ಸಮರ್ಪಿತವಾದ ಸುಮಾರು 1,000 ವರ್ಷಗಳಷ್ಟು ವರ್ಷ ಹಳೆಯ ಪ್ರೀಹ್ ವಿಹಾರ ದೇವಾಲಯವು ಕಾಂಬೋಡಿಯಾದ ಡಾಂಗ್ರೆಕ್ ಪರ್ವತಗಳಲ್ಲಿ 525 ಮೀಟರ್ ಎತ್ತರದ ಬಂಡೆಯ ಮೇಲೆ ನೆಲೆಗೊಂಡಿದೆ. ಖಮೇರ್ ಸಾಮ್ರಾಜ್ಯದ ಅಡಿಯಲ್ಲಿ ನಿರ್ಮಿಸಲಾದ ಇದು ಕಾಂಬೋಡಿಯನ್ನರಿಗೆ ಮಾತ್ರವಲ್ಲದೆ ಅವರ ಪಕ್ಷದ ಥೈಲ್ಯಾಂಡ್‌ ದೇಶದವರಿಗೂ ಧಾರ್ಮಿಕ ಸ್ಥಳವಾಗಿದೆ. ಪಶ್ಚಿಮಕ್ಕೆ ಸರಿಸುಮಾರು 95 ಕಿಮೀ ದೂರದಲ್ಲಿ 11ನೇ ಶತಮಾನದ ಶಿವ ದೇವಾಲಯವಾದ ತಾ ಮುಯೆನ್ ಥಾಮ್ ದೇವಾಲಯವಿದೆ. ಈ ದೇವಾಲಯಗಳ ಸಮೂಹವು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಎರಡು ರಾಷ್ಟ್ರಗಳ ನಡುವಿನ ಸಂಘರ್ಷದ ಕೇಂದ್ರಬಿಂದುವಾಗಿದೆ.
ಗುರುವಾರ ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವೆ ತಮ್ಮ ಗಡಿಯಲ್ಲಿ ಮತ್ತೆ ಘರ್ಷಣೆಗಳು ಭುಗಿಲೆದ್ದವು, ಇದು ಒಂದು ದಶಕದಲ್ಲಿ ಅತ್ಯಂತ ಹಿಂಸಾತ್ಮಕ ಸಂಘರ್ಷ ಎಂದು ಪರಿಗಣಿಸಲಾಗಿದೆ. ಘರ್ಷಣೆಯಲ್ಲಿ 12 ಜನರು ಸಾವಿಗೀಡಾದರು ಹಾಗೂ ಡಜನ್ಗಟ್ಟಲೆ ಜನರು ಗಾಯಗೊಂಡರು.

ಥೈಲ್ಯಾಂಡ್‌ನ ಸುರಿನ್ ಪ್ರಾಂತ್ಯದ ಸಮೀಪದ ತಾ ಮುಯೆನ್ ಥಾಮ್ ದೇವಾಲಯದ ಬಳಿ ಗುರುವಾರ ಮುಂಜಾನೆ ಇತ್ತೀಚಿನ ಘರ್ಷಣೆ ಪ್ರಾರಂಭವಾಯಿತು. ಥೈಲ್ಯಾಂಡ್‌ ಹೇಳಿಕೆಯ ಪ್ರಕಾರ, ಕಾಂಬೋಡಿಯನ್ ಪಡೆಗಳು ಥಾಯ್ ಮಿಲಿಟರಿ ಸ್ಥಾನಗಳ ಬಳಿ ವೈಮಾನಿಕ ವಿಚಕ್ಷಣೆಗಾಗಿ ಡ್ರೋನ್‌ಗಳನ್ನು ನಿಯೋಜಿಸಿದಾಗ ಘರ್ಷಣೆ ಪ್ರಾರಂಭವಾಯಿತು. ಥಾಯ್ ಸೈನಿಕರು ಸಂಘರ್ಷ ಕಡಿಮೆ ಮಾಡಲು ಮಾಡಿದ ಪ್ರಯತ್ನಗಳು ವಿಫಲವಾದವು ಮತ್ತು ಸ್ಥಳೀಯ ಸಮಯ 08:20 ರ ಹೊತ್ತಿಗೆ, ಭಾರೀ ಗುಂಡಿನ ಚಕಮಕಿ ಪ್ರಾರಂಭವಾಯಿತು.
ಕಾಂಬೋಡಿಯನ್ ಸೇನೆಯ ಪ್ರಚೋದನೆಯ ನಂತರ ತನ್ನ ಪಡೆಗಳು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದವು ಎಂದು ಥೈಲ್ಯಾಂಡ್ ಹೇಳಿಕೊಂಡಿದೆ. ಮತ್ತೊಂದೆಡೆ, ಕಾಂಬೋಡಿಯಾ ಥೈಲ್ಯಾಂಡ್ ತನ್ನ ಸಾರ್ವಭೌಮತ್ವವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದೆ.
ಥೈಲ್ಯಾಂಡ್ ಬೆದರಿಕೆ ಮಟ್ಟವನ್ನು “ಲೆವೆಲ್ 4” ಗೆ ಹೆಚ್ಚಿಸಿತು, ಇದು ಎರಡೂ ದೇಶಗಳ ಗಡಿಯುದ್ದಕ್ಕೂ ಎಲ್ಲಾ ಗಡಿ ಚೆಕ್‌ಪೋಸ್ಟ್‌ಗಳನ್ನು ಸಂಪೂರ್ಣವಾಗಿ ಮುಚ್ಚಲು ಕಾರಣವಾಯಿತು. 86 ಹಳ್ಳಿಗಳಿಂದ ಸುಮಾರು 40,000 ಥಾಯ್ ನಾಗರಿಕರನ್ನು ಸ್ಥಳಾಂತರಿಸಲಾಗಿದೆ.
ಬಿಕ್ಕಟ್ಟಿನ ಮೂಲದಲ್ಲಿ ಹೊಸ ಮಿಲಿಟರಿ ಹಗೆತನಗಳು ಮತ್ತು ಪವಿತ್ರ ಸ್ಥಳಗಳಿಗೆ ಸಂಬಂಧಿಸಿದ ಬಲವಾಗಿ ಬೇರೂರಿರುವ ಐತಿಹಾಸಿಕ ಉದ್ವಿಗ್ನತೆಗಳು, ಯುನೆಸ್ಕೋ ಪಟ್ಟಿಮಾಡಿದ ಸ್ಮಾರಕ ಮತ್ತು ಎರಡೂ ಕಡೆಗಳಲ್ಲಿ ಹೆಚ್ಚುತ್ತಿರುವ ರಾಷ್ಟ್ರೀಯತಾವಾದಿ ಭಾವನೆಗಳು ಸೇರಿವೆ.

ಪ್ರಮುಖ ಸುದ್ದಿ :-   ಬಂಗಾಳ ರಾಜಕೀಯದಲ್ಲಿ ಸುನಾಮಿ ; ದೀದಿಗೆ ಬಿಗ್ ಶಾಕ್ : ಟಿಂಎಂಸಿ ಶಾಸಕರ ಬೆಂಬಲದಿಂದಲೇ ವಿಧಾನಸಭೆ ವಿಪಕ್ಷದ ನಾಯಕನಾದ ಉಚ್ಚಾಟಿತ ಶಾಸಕ..!

11ನೇ ಶತಮಾನದ ತಾ ಮುಯೆನ್ ಥಾಮ್ ಮತ್ತು ತಾ ಮೋನ್ ಥಾಮ್ ದೇವಾಲಯಗಳ ಬಳಿ ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವೆ ಮತ್ತೆ ಘರ್ಷಣೆಗಳು ಭುಗಿಲೆದ್ದಿವೆ, ಇವು ಎರಡೂ ದೇಶಗಳು ಬಹಳ ಹಿಂದಿನಿಂದಲೂ ಈ ದೇವಾಲಯಗಳು ತಮ್ಮದೇ ಎಂದು ಹೇಳಿಕೊಂಡಿವೆ. 1962 ರ ಅಂತಾರಾಷ್ಟ್ರೀಯ ನ್ಯಾಯಾಲಯ(ICJ)ವು ಶಿವನಿಗೆ ಸಮರ್ಪಿತವಾದ ಹತ್ತಿರದ ಪ್ರೀಹ್ ವಿಹಾರ ದೇವಾಲಯ ಹಾಗೂ ಅದರ ಸಂಕೀರ್ಣ ಕಾಂಬೋಡಿಯಾಕ್ಕೆ ಸೇರಿದ್ದು ಎಂದು ತೀರ್ಪು ನೀಡಿದೆ. ಆದಾಗ್ಯೂ ಥೈಲ್ಯಾಂಡ್‌ ಇದನ್ನು ಒಪ್ಪಿಲ್ಲ. ಹಾಗೂ ಥಾಯ್ ಪಡೆಗಳು ಆ ಪ್ರದೇಶದ ಸುತ್ತಲೂ ಇನ್ನೂ ಉಳಿದುಕೊಂಡಿವೆ.
ಥೈಲ್ಯಾಂಡ್ ಗುರುವಾರ 11ನೇ ಶತಮಾನದ ತಾ ಮುಯೆನ್ ದೇವಾಲಯದ ಬಳಿ ಕಾಂಬೋಡಿಯನ್ ಡ್ರೋನ್ ಮತ್ತು ಸಶಸ್ತ್ರ ಸೈನಿಕರನ್ನು ಗುರುತಿಸಿರುವುದಾಗಿ ಹೇಳಿದ ನಂತರ ಇತ್ತೀಚಿನ ಘರ್ಷಣೆ ಭುಗಿಲೆದ್ದಿತು. ಹಲವಾರು ಎಚ್ಚರಿಕೆಗಳ ನಂತರ, ಕಾಂಬೋಡಿಯಾ ಗುಂಡು ಹಾರಿಸಿತು ಎಂದು ವರದಿಯಾಗಿದೆ. ಇದು ಥಾಯ್ ವಾಯುದಾಳಿಗಳಿಗೆ ಕಾರಣವಾಯಿತು. ಕಾಂಬೋಡಿಯಾ ಥೈಲ್ಯಾಂಡ್‌ನ ಗಡಿ ಪ್ರದೇಶಗಳಲ್ಲಿ ರಾಕೆಟ್ ದಾಳಿ ನಡೆಸಿತು ಮತ್ತು ಇದಕ್ಕೆ ಪ್ರತಿಯಾಗಿ, ಥಾಯ್ ವಾಯುಪಡೆಯು ಕಾಂಬೋಡಿಯನ್ ಮಿಲಿಟರಿ ನೆಲೆಗಳ ಮೇಲೆ ವಾಯುದಾಳಿಗಳನ್ನು ನಡೆಸಿತು.

ಯಾಕೆ ಈ ಸಂಘರ್ಷ…?
ಈ ಸಂಘರ್ಷದ ಹೃದಯಭಾಗದಲ್ಲಿ 9 ರಿಂದ 11 ನೇ ಶತಮಾನಗಳ ಹಿಂದಿನ ಪ್ರಾಚೀನ ದೇವಾಲಯಗಳ ಸಮೂಹವಿದೆ. ಮೂಲತಃ ಹಿಂದೂ ದೇವಾಲಯಗಳಾಗಿ ನಿರ್ಮಿಸಲಾದ ಈ ದೇವಾಲಯಗಳನ್ನು ನಂತರ ಪ್ರದೇಶದ ಪ್ರಬಲ ನಂಬಿಕೆ ವಿಕಸನಗೊಂಡಂತೆ ಬೌದ್ಧಧರ್ಮದವರು ನಡೆದುಕೊಳ್ಳುತ್ತಿದ್ದಾರೆ.
ಪ್ರಸ್ತುತ ಸಂಘರ್ಷದ ಸ್ಥಳವಾದ, ಥೈಲ್ಯಾಂಡ್, ಕಾಂಬೋಡಿಯಾ ಮತ್ತು ಲಾವೋಸ್ ಸಂಗಮಿಸುವ ಎಮರಾಲ್ಡ್ ಟ್ರಯಾಂಗಲ್, ಕಾಡು ಮತ್ತು ಪ್ರಾಚೀನ ದೇವಾಲಯಗಳಿಂದ ಕೂಡಿದ ಪ್ರದೇಶವಾಗಿದೆ. ಈ ವಿವಾದದ ಮೂಲವು ಕಾಂಬೋಡಿಯಾದ ಮೇಲೆ ಫ್ರೆಂಚ್ ಆಳ್ವಿಕೆಯಿದ್ದಾಗ ಚಿತ್ರಿಸಲಾದ 1907 ರ ವಸಾಹತುಶಾಹಿ ಯುಗದ ನಕ್ಷೆಯಿಂದ ಆರಂಭವಾಗುತ್ತದೆ. ಈ ನಕ್ಷೆಯಲ್ಲಿ ಪ್ರೀಹ್ ವಿಹಾರ ದೇವಾಲಯ ಕಾಂಬೋಡಿಯನ್ ಪ್ರದೇಶದೊಳಗೆ ಬರುತ್ತದೆ.
11ನೇ ಶತಮಾನದ ಪ್ರಿಯಾ ವಿಹಾರ ದೇವಾಲಯವು ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವಿನ ಯುದ್ಧಕ್ಕೆ ಕಾರಣವಾಗಿದೆ. ಈ ದೇವಾಲಯವು ಕಾಂಬೋಡಿಯಾದ ಪ್ರಿಯಾ ವಿಹಾರ ಪ್ರಾಂತ್ಯ ಮತ್ತು ಥೈಲ್ಯಾಂಡ್‌ನ ಸಿಸಾಕೆಟ್ ಪ್ರಾಂತ್ಯದ ಗಡಿಯಲ್ಲಿದೆ. 1962 ರಲ್ಲಿ, ಅಂತಾರಾಷ್ಟ್ರೀಯ ನ್ಯಾಯಾಲಯ (ICJ) ಈ ದೇವಾಲಯವು ಕಾಂಬೋಡಿಯಾಕ್ಕೆ ಸೇರಿದೆ ಎಂದು ತೀರ್ಪು ನೀಡಿತ್ತು. ಈ ಭೂಮಿ ತನಗೆ ಸೇರಿದೆ ಎಂದು ಥೈಲ್ಯಾಂಡ್ ಹೇಳುತ್ತದೆ. ಎಮರಾಲ್ಡ್ ಪ್ರದೇಶದಲ್ಲಿರುವ ಪ್ರಸತ್ ತಾ ಮುಯೆನ್ ಥಾಮ್ ಶಿವನ ದೇವಾಲಯವನ್ನು ಖಮೇರ್ ಆಡಳಿತಗಾರ ರಾಜ ಉದಯಾದಿತ್ಯವರ್ಮನ್ II ರ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ.ಇಲ್ಲಿ ಇನ್ನೂ ಶಿವಲಿಂಗವಿದೆ. ಇದು ಒಂದು ದೊಡ್ಡ ದೇವಾಲಯ ಸಂಕೀರ್ಣದ ಭಾಗವಾಗಿದೆ, ಇದು ಕನಿಷ್ಠ ಎರಡು ಇತರ ಪ್ರಾಚೀನ ದೇವಾಲಯಗಳನ್ನು ಒಳಗೊಂಡಿದೆ, ಇದು ಒಂದು ಕಾಲದಲ್ಲಿ ಇಂದಿನ ಕಾಂಬೋಡಿಯಾದ ಅಂಕೋರ್ ಅನ್ನು ಥೈಲ್ಯಾಂಡ್‌ನ ಫಿಮೈ ಜೊತೆ ಸಂಪರ್ಕಿಸುವ ಐತಿಹಾಸಿಕ ಖಮೇರ್ ಹೆದ್ದಾರಿಯ ಉದ್ದಕ್ಕೂ ನೆಲೆಗೊಂಡಿದೆ. ಸಂಕೀರ್ಣವು – ಟಾ ಮುಯೆನ್ ಥಾಮ್, ಟಾ ಮುಯೆನ್ ಮತ್ತು ಟಾ ಮುಯೆನ್ ಟೋಟ್ ಎಂಬ ಮೂರು ಪ್ರಮುಖ ದೇವಾಲಯಗಳನ್ನು ಒಳಗೊಂಡಿದೆ. ಇದೇ ಮಾರ್ಗದಲ್ಲಿ ಬರುವ ಅತ್ಯಂತ ಪ್ರಸಿದ್ಧವಾದ ರಚನೆಯೆಂದರೆ ಅಂಕೋರ್ ವಾಟ್.
ಥೈಲ್ಯಾಂಡ್ ತನ್ನ ಸುರಿನ್ ಪ್ರಾಂತ್ಯದೊಳಗೆ ಈ ದೇವಾಲಯಗಳಿವೆ ಎಂದು ಹೇಳುತ್ತದೆ. ಅವು ಒಂದು ಕಾಲದಲ್ಲಿ ಆಧುನಿಕ ಕಾಂಬೋಡಿಯಾ ಮತ್ತು ಥೈಲ್ಯಾಂಡ್‌ನ ಕೆಲವು ಭಾಗಗಳ ಅಡಿಯಲ್ಲಿ ಬಂದ ತನ್ನ ಐತಿಹಾಸಿಕ ಖಮೇರ್ ಸಾಮ್ರಾಜ್ಯದ ಪರಂಪರೆಯ ಭಾಗವಾಗಿದೆ ಎಂದು ಕಾಂಬೋಡಿಯಾ ವಾದಿಸುತ್ತದೆ.
ಹೀಗಾಗಿ ಸುತ್ತಮುತ್ತಲಿನ ಪ್ರದೇಶವು ಒಂದು ಉದ್ವಿಗ್ನ ತಾಣವಾಗಿ ಉಳಿದಿದೆ ಮತ್ತು 2008 ರಲ್ಲಿ ಕಾಂಬೋಡಿಯಾ ಪ್ರಿಯಾ ವಿಹಿಯರ್‌ಗೆ ಯುನೆಸ್ಕೋ ವಿಶ್ವ ಪರಂಪರೆಯ ಸ್ಥಾನಮಾನವನ್ನು ಕೋರಿದಾಗಿನಿಂದ ಘರ್ಷಣೆಗಳು ಪದೇ ಪದೇ ಭುಗಿಲೆದ್ದಿವೆ, ಇದು ಥೈಲ್ಯಾಂಡ್‌ನಲ್ಲಿ ಆಕ್ರೋಶಕ್ಕೆ ಕಾರಣವಾಯಿತು.
ಗಡಿ ವಿವಾದಗಳನ್ನು ಪರಿಹರಿಸಲು 2000 ರಲ್ಲಿ ರಚಿಸಲಾದ ಜಂಟಿ ಗಡಿ ಆಯೋಗ (JBC) ಸೀಮಿತ ಪ್ರಗತಿಯನ್ನು ಕಂಡಿದೆ. ಜೂನ್ 14 ರಂದು ನೋಮ್ ಪೆನ್‌ನಲ್ಲಿ ನಡೆದ ಇತ್ತೀಚಿನ ಸಭೆ ಯಾವುದೇ ಪ್ರಗತಿಯಿಲ್ಲದೆ ಕೊನೆಗೊಂಡಿದೆ. ಏತನ್ಮಧ್ಯೆ, ಮುಂದಿನ ವರ್ಷದಿಂದ ಕಡ್ಡಾಯ ಮಿಲಿಟರಿ ಸೇವೆಯನ್ನು ಪರಿಚಯಿಸುವ ಯೋಜನೆಯನ್ನು ಕಾಂಬೋಡಿಯಾ ಘೋಷಿಸಿದೆ, ಇದು ದೀರ್ಘಕಾಲದ ಬಿಕ್ಕಟ್ಟಿಗೆ ತಯಾರಿ ನಡೆಸುತ್ತಿದೆ ಎಂಬ ಸಂಕೇತವಾಗಿದೆ ಎಂದು ಥೈಲ್ಯಾಂಡ್‌ ಹೇಳಿದೆ.
ಎರಡೂ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವನ್ನು ಕಾಯ್ದುಕೊಳ್ಳುವ ಆದರೆ ಕಾಂಬೋಡಿಯಾದೊಂದಿಗೆ ನಿಕಟ ಸಂಬಂಧವನ್ನು ಹಂಚಿಕೊಳ್ಳುವ ಚೀನಾ ಮಧ್ಯಸ್ಥಿಕೆ ವಹಿಸುವ ಪ್ರಯತ್ನಗಳು ಇನ್ನೂ ಫಲ ನೀಡಿಲ್ಲ.

ಪ್ರಮುಖ ಸುದ್ದಿ :-   ದೆಹಲಿ ಹೊಟೇಲ್‌ ಅಗ್ನಿ ದುರಂತ : ಐಸಿಯುನಲ್ಲಿದ್ದ ತಂದೆ ಸನಿಹ ಇರಲು ಹೊಟೇಲ್‌ನಲ್ಲಿ ತಂಗಿದ್ದ ಸಿಎ ಕುಟುಂಬದ 8 ಮಂದಿ ಸಾವು

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement