
ನವದೆಹಲಿ: ಗಾಯದ ಕಾರಣದಿಂದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಉಳಿದ ಪಂದ್ಯಗಳಿಂದ ಹೊರಬಿದ್ದ ಕೆಲವೇ ದಿನಗಳಲ್ಲಿ ಭಾರತದ ಆಲ್ರೌಂಡರ್ ನಿತೀಶಕುಮಾರ ರೆಡ್ಡಿ ಅವರು ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೆಂಗಳೂರು ಮೂಲದ ಪ್ರತಿಭಾ ನಿರ್ವಹಣಾ ಸಂಸ್ಥೆ ಸ್ಕ್ವೇರ್ ದಿ ಒನ್, ಕ್ರಿಕೆಟಿಗನ ವಿರುದ್ಧ 5 ಕೋಟಿ ರೂಪಾಯಿಗೂ ಹೆಚ್ಚಿನ ಹಣ ಪಾವತಿ ಬಾಕಿ ಇದೆ ಎಂದು ಮೊಕದ್ದಮೆ ಹೂಡಿದೆ ಎಂದು ವರದಿಯಾಗಿದೆ. ದೆಹಲಿ ಹೈಕೋರ್ಟ್ನಲ್ಲಿ ನಿತೀಶ್ ಕುಮಾರ್ ರೆಡ್ಡಿ ವಿರುದ್ಧ ಅರ್ಜಿ ಸಲ್ಲಿಸಲಾಗಿದೆ
ಇಂಡಿಯಾ ಟುಡೇ ವರದಿಯ ಪ್ರಕಾರ, ಕಳೆದ ವರ್ಷ ಬಾರ್ಡರ್-ಗವಾಸ್ಕರ್ ಟ್ರೋಫಿಯ ಸಮಯದಲ್ಲಿ ನಿತೀಶಕುಮಾರ ರೆಡ್ಡಿ ಮತ್ತು ಅವರ ಮಾಜಿ ಸಂಸ್ಥೆಯ ನಡುವಿನ ಸಂಬಂಧವು ಮುರಿದುಹೋಯಿತು, ಆಲ್ರೌಂಡರ್ ಕಳೆದ ವರ್ಷ ಟೀಮ್ ಇಂಡಿಯಾದ ಭಾಗವಾಗಿದ್ದರು ಮತ್ತು ನಂತರ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಭಾಗವಾಗಿದ್ದ ನಿತೀಶ ರೆಡ್ಡಿ ಮತ್ತೊಂದು ಸಂಸ್ಥೆಯ ಜೊತೆ ಒಪ್ಪಂದಕ್ಕೆ ಸಹಿ ಹಾಕಿದರು.

ಆದಾಗ್ಯೂ, ಸ್ಕ್ವೇರ್ ದಿ ಒನ್ ಪ್ರೈವೇಟ್ ಲಿಮಿಟೆಡ್, ನಿತೀಶ ರೆಡ್ಡಿ ಒಪ್ಪಂದವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದೆ. ಆಟಗಾರ ನಿರ್ವಹಣಾ ಸಂಸ್ಥೆಯು ಮಧ್ಯಸ್ಥಿಕೆ ಮತ್ತು ಸಂಧಾನ ಕಾಯ್ದೆಯ ಸೆಕ್ಷನ್ 11(6) ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದು, ನಿತೀಶಕುಮಾರ ರೆಡ್ಡಿ ಒಪ್ಪಂದದ ಉಲ್ಲಂಘನೆ ಮಾಡಿದ್ದಾರೆ ಮತ್ತು ಬಾಕಿ ಹಣ ಪಾವತಿಸಿಲ್ಲ ಎಂದು ಆರೋಪ ಹೊರಿಸಿದೆ.
ಆಟಗಾರನು ಒಪ್ಪಂದವನ್ನು ಮುರಿದುಕೊಂಡ ನಂತರ ಒಪ್ಪಂದದ ಪ್ರಕಾರ ಬಾಕಿ ಹಣವನ್ನು ಪಾವತಿಸದಿರುವ ಆರೋಪದ ವಿವಾದವನ್ನು ಇತ್ಯರ್ಥಪಡಿಸಲು ಸ್ವತಂತ್ರ ಮಧ್ಯಸ್ಥಗಾರರನ್ನು ನೇಮಿಸುವಂತೆ ಅರ್ಜಿದಾರರಾದ ಸ್ಕ್ವೇರ್ ದಿ ಒನ್ ಪ್ರೈವೇಟ್ ಲಿಮಿಟೆಡ್ ಕೋರಿದೆ.
ಸ್ಕ್ವೇರ್ ದಿ ಒನ್ ಪ್ರೈವೇಟ್ ಲಿಮಿಟೆಡ್ 2021 ರಿಂದ ನಿತೀಶಕುಮಾರ ರೆಡ್ಡಿ ಅವರ ಒಪ್ಪಂದಗಳು ಮತ್ತು ಅನುಮೋದನೆಗಳನ್ನು ನಿರ್ವಹಿಸುತ್ತಿತ್ತು ಎಂದು ಎನ್ನಲಾಗಿದೆ.
ನಿತೀಶಕುಮಾರ ರೆಡ್ಡಿ ತಮ್ಮ ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಬಾಕಿ ಪಾವತಿಗಳನ್ನು ಡೀಫಾಲ್ಟ್ ಮಾಡಿದ್ದಾರೆ ಎಂದು ಸಂಸ್ಥೆ ಹೇಳಿಕೊಂಡಿದೆ.


ನಿಮ್ಮ ಕಾಮೆಂಟ್ ಬರೆಯಿರಿ