
ಮಂಗಳವಾರ ಉತ್ತರಾಖಂಡದಲ್ಲಿ ಪ್ರಬಲವಾದ ಕ್ಲೌಡ್ ಬರ್ಸ್ಟ್‌ನಿಂದ ಉಂಟಾದ ವಿನಾಶಕಾರಿ ಹಠಾತ್ ಪ್ರವಾಹದಲ್ಲಿ ಜನರು ಸಿಲುಕಿಕೊಂಡಿದ್ದ ಕಾರು ನೀರಿನಲ್ಲಿ ಕೊಚ್ಚಿಹೋಗಿರುವ ವೀಡಿಯೊವೊಂದು ವೈರಲ್ ಆಗಿದೆ.
ಉತ್ತರಕಾಶಿ ಜಿಲ್ಲೆಯ ಹರ್ಷಿಲ್ ಬಳಿಯ ಧರಾಲಿ ಪ್ರದೇಶದಲ್ಲಿ ಮೇಘಸ್ಫೋಟದಿಂದಾಗಿ ಹಠಾತ್ ಪ್ರವಾಹ ಉಂಟಾಗಿ ಆ ಪ್ರದೇಶದಲ್ಲಿ ವ್ಯಾಪಕ ವಿನಾಶ ಉಂಟಾಯಿತು. ಕಾರು ನೀರಿನಲ್ಲಿ ತೇಲಿ ಹೋಗುತ್ತಿರುವ ಬಗ್ಗೆ “ಕಾರ್ ಪುರಾ ಭರಾ ಹುವಾ ಹೈ, ಆದ್ಮಿ ಹೈ ಇಸ್ಮೆ, ಆದ್ಮಿ ಹೈ (ಕಾರು ಜನರಿಂದ ತುಂಬಿದೆ. ಒಳಗೆ ಜನರಿದ್ದಾರೆ),” ಎಂದು ವೀಡಿಯೊದಲ್ಲಿ ಒಬ್ಬರು ಹೇಳುತ್ತಿರುವುದು ಕೇಳುತ್ತದೆ.

ಹರ್ಷಿಲ್‌ನಲ್ಲಿರುವ ಭಾರತೀಯ ಸೇನಾ ಶಿಬಿರದಿಂದ ಕೇವಲ 4 ಕಿ.ಮೀ ದೂರದಲ್ಲಿರುವ ಧರಾಲಿ ಗ್ರಾಮ ಪ್ರದೇಶದ ಬಳಿ ಮಧ್ಯಾಹ್ನ 1:45 ಕ್ಕೆ ಮೇಘಸ್ಫೋಟ ಸಂಭವಿಸಿದೆ. ಧರಾಲಿ ಗಂಗೋತ್ರಿಗೆ ಹೋಗುವ ದಾರಿಯಲ್ಲಿ ಪ್ರಮುಖ ನಿಲುಗಡೆ ಸ್ಥಳವಾಗಿದ್ದು, ಅನೇಕ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಹೋಂಸ್ಟೇಗಳಿಗೆ ನೆಲೆಯಾಗಿದೆ. ಖೀರ್ ಗಂಗಾ ನದಿಯ ಜಲಾನಯನ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಭೀಕರ ಪ್ರವಾಹಕ್ಕೆ ಕಾರಣವಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆ ನಡೆದ ಹತ್ತು ನಿಮಿಷಗಳಲ್ಲಿ, ಸೇನೆಯು ವಿಪತ್ತು ಸ್ಥಳಕ್ಕೆ 150 ಸಿಬ್ಬಂದಿಯನ್ನು ನಿಯೋಜಿಸಿತು. ರಕ್ಷಣಾ ತಂಡಗಳು ತಕ್ಷಣವೇ ಸಿಕ್ಕಿಬಿದ್ದ ಗ್ರಾಮಸ್ಥರನ್ನು ಸ್ಥಳಾಂತರಿಸಲು ಸಹಾಯ ಮಾಡಿದರು. ಭಾರತೀಯ ಸೇನೆಯು ಒಂದು ಹೇಳಿಕೆಯಲ್ಲಿ, “ಪರಿಸ್ಥಿತಿ ನಿರಂತರ ಮೇಲ್ವಿಚಾರಣೆಯಲ್ಲಿದೆ ಮತ್ತು ಭಾರತೀಯ ಸೇನೆಯು ಪೀಡಿತ ನಾಗರಿಕರಿಗೆ ಸಾಧ್ಯವಿರುವ ಎಲ್ಲಾ ಸಹಾಯವನ್ನು ಒದಗಿಸಲು ಸಂಪೂರ್ಣವಾಗಿ ಬದ್ಧವಾಗಿದೆ” ಎಂದು ಹೇಳಿದೆ.


ನಿಮ್ಮ ಕಾಮೆಂಟ್ ಬರೆಯಿರಿ