ಅಂಕೋಲಾ: ತಂದೆ ತೆಂಗಿನಮರ ಹತ್ತಿದ ಸಂದರ್ಭದಲ್ಲಿ ಸಹಾಯ ಮಾಡಲು ಹೋದ ಮಗಳು ತೋಟದ ಬಾವಿಗೆ ಬಿದ್ದು ಮೃತ ಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಚವೆ ಚನಗಾರದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಮೃತರನ್ನು ಅಚವೆ ಚನಗಾರ ನಿವಾಸಿ ವೀಣಾ ಗೌಡ(30) ಎಂದು ಗುರುತಿಸಲಾಗಿದೆ. ಕೃಷಿಕರಾಗಿರುವ ಇವರು ತೋಟದಲ್ಲಿ ತೆಂಗಿನಕಾಯಿ ತೆಗೆಯುತ್ತಿದ್ದ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ. ಮೃತಳ ತಂದೆ ಬಾವಿಯ ಪಕ್ಕದಲ್ಲಿ ಇದ್ದ ತೆಂಗಿನಮರ ಹತ್ತಿ ಕಾಯಿ ಮತ್ತು ಎಳೆನೀರು ಕೊಯ್ಯುತ್ತಿದ್ದ ವೇಳೆ ಅದು ಮೈ ಮೇಲೆ ಬೀಳದಂತೆ ತಪ್ಪಿಸಿಕೊಳ್ಳಲು ಹಿಂದೆ ಸರಿದಾಗ ನಿಯಂತ್ರಣ ತಪ್ಪಿ ತೆರೆದ ನೆಲಮಟ್ಟದ ಬಾವಿಗೆ ಬಿದ್ದಿದ್ದಾರೆ ಎನ್ನಲಾಗಿದೆ. ಅಂಕೋಲಾ ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ, ಪಿ.ಎಸ್.ಐ ಗುರನಾಥ ಹಾದಿಮನಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ