ಕಾರವಾರ | ನಿಂತಿದ್ದ ಬಸ್ಸಿಗೆ ಬೈಕ್ ಡಿಕ್ಕಿ ; ಬೈಕಿಗೆ ಪಿಕ್‌ಅಪ್‌ ಡಿಕ್ಕಿ ; ಬೈಕ್‌ ಸವಾರ ಸಾವು

ಕಾರವಾರ: ಸರಣಿ ಅಪಘಾತದಿಂದ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ದಿವೇಕರ ಕಾಲೇಜಿನ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಭವಿಸಿದೆ ಎಂದು ವರದಿಯಾಗಿದೆ.
ಸದಾಶಿವಗಡ ಮೂಲದ ಮೈಕಲ್ ಮಾರ್ಷಲ್ ನರೋನಾ (42) ಎಂಬವರು ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಅವರು ಸದಾಶಿವಗಡದಿಂದ ಕಾರವಾರಕ್ಕೆ ಬರುತ್ತಿದ್ದ ವೇಳೆ, ದಿವೇಕರ ಕಾಲೇಜಿನ ಬಳಿ ನಿಂತಿದ್ದ ಸಾರಿಗೆ ಬಸ್ಸಿನ ಹಿಂಭಾಗಕ್ಕೆ ಅವರ ಬೈಕ್ ಡಿಕ್ಕಿ ಹೊಡೆದಿದೆ. ತಕ್ಷಣವೇ ಹಿಂಬದಿ ಬಂದ ಪಿಕಪ್ ವಾಹನವು ಬೈಕಿಗೆ ಮತ್ತೊಮ್ಮೆ ಡಿಕ್ಕಿ ಹೊಡೆದಿದ್ದರಿಂದ ಬೈಕ್ ಸವಾರ ಸ್ಥಳದಲ್ಲೇ ಮೃತಟ್ಟಿದ್ದಾರೆ. ಬೈಕಿನ ಹಿಂಬದಿ ಸವಾರ ಅರುಣ ಸುಬ್ರಾಯ ನಾಯ್ಕ ಎಂಬವರು ಗಂಭೀರ ತಲೆಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿಯಿಂದ ಬೈಕ್ ಸಂಪೂರ್ಣ ಜಖಂಗೊಂಡಿದ್ದು, ಪಿಕಪ್ ವಾಹನಕ್ಕೂ ಹಾನಿಯಾಗಿದೆ. ಸ್ಥಳಕ್ಕೆ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement