ವಿವಾಹಿತರ ಪ್ರೇಮ್‌ ಕಹಾನಿ ಕೊಲೆಯಲ್ಲಿ ಅಂತ್ಯ ; ತನ್ನಿಂದ ದೂರವಾದ ಪ್ರೇಯಸಿ ಹತ್ಯೆ ಮಾಡಿ ಆತ್ಮಹತ್ಯೆಗೆ ಶರಣಾದ ಪ್ರಿಯಕರ

ಬೆಳಗಾವಿ : ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವಿವಾಹಿತ ವ್ಯಕ್ತಿಯೊಬ್ಬ ತನ್ನ ಪ್ರೇಯಸಿ ತನ್ನಿಂದ ದೂರವಾದ ಹಿನ್ನೆಲೆಯಲ್ಲಿ ಕೋಪದಿಂದ ಆ ವಿವಾಹಿತೆಯನ್ನು ಬರ್ಬರವಾಗಿ ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ ಎಂದು ವರದಿಯಾಗಿದೆ.
ಖಾನಾಪುರ ತಾಲೂಕಿನ ಬೀಡಿ ಗ್ರಾಮದ ರೇಶ್ಮಾ ತಿರವೀರ (28) ಎಂಬ ಮಹಿಳೆ ಪ್ರಿಯಕರನಿಂದ ಹತ್ಯೆಯಾದ ದುರ್ದೈವಿಯಾಗಿದ್ದು, ಆನಂದ ಸುತಾರ (30) ಎಂಬಾತ ಆಕೆಯನ್ನು ಹತ್ಯೆ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ವಿವಾಹಿತನಾಗಿದ್ದಾನೆ.
ಆನಂದ ಹಾಗೂ ರೇಶ್ಮಾ ಇವರಿಬ್ಬರು ಒಂದೇ ಗ್ರಾಮದವರಾಗಿದ್ದು ಇಬ್ಬರ ನಡುವೆ ಮೊದಲಿನಿಂದಲೂ ಸಂಬಂಧವಿತ್ತು ಎನ್ನಲಾಗಿದೆ ಇವರಿಬ್ಬರೂ ವಿವಾಹಿತರಾಗಿದ್ದು, ಇಬ್ಬರಿಗೂ ಮಕ್ಕಳಿದ್ದಾರೆ.

ರೇಶ್ಮಾ ವಿವಾಹಿತೆ ಎಂದು ಗೊತ್ತಿದ್ದರೂ ಆನಂದ ಅವಳ ಜೊತೆ ಸಂಬಂಧವನ್ನು ಮುಂದುವರೆಸಿದ್ದ. ಇವರಿಬ್ಬರೂ ಮೇಲಿಂದ ಮೇಲೆ ಭೇಟಿಯಾಗುತ್ತಿದ್ದರು ಮತ್ತು ಮೊಬೈಲ್ ನಲ್ಲಿ ದಿನನಿತ್ಯ ಮಾತಾಡುತ್ತಿದ್ದರು. ರೇಶ್ಮಾ ಮತ್ತು ಆನಂದ ಅವರ ಸಂಬಂಧದ ವಿಷಯ ರೇಶ್ಮಾಳ ಪತಿಗೆ ಕೆಲ ದಿನಗಳ ಹಿಂದೆ ತಿಳಿದಿದೆ. ನಂತರ ಅವರು ನಂದಗಡ ಪೊಲೀಸ್ ಠಾಣೆಗೆ ತೆರಳಿ ಆನಂದ ವಿರುದ್ಧ ದೂರು ನೀಡಿದ್ದರು. ದೂರು ಸ್ವೀಕರಿಸಿದ್ದ ನಂದಗಡ ಪೊಲೀಸರು ಆನಂದನನ್ನು ಠಾಣೆಗೆ ಕರೆಸಿ ರೇಶ್ಮಾಳ ತಂಟೆಗೆ ಹೋಗದಂತೆ ಬುದ್ಧಿಹೇಳಿ ತಪ್ಪೊಪ್ಪಿಗೆ ಬರೆಸಿಕೊಂಡು ಕಳಿಸಿದ್ದರಂತೆ. ಇದಾದ ಬಳಿಕ ಹಲವು ದಿನಗಳ ಕಾಲ ರೇಶ್ಮಾ ಹಾಗೂ ಆನಂದ ಪರಸ್ಪರ ಮಾತಾಡಿರಲಿಲ್ಲ.

ಪ್ರಮುಖ ಸುದ್ದಿ :-   ಹೊನ್ನಾವರದ ಪ್ರಕೃತಿಯ ‘ಮಾಯಾಲೋಕ’ಕ್ಕೆ ಆನಂದ ಮಹೀಂದ್ರಾ ಫಿದಾ ! ಕೇರಳದ ಹಿನ್ನೀರಿನಷ್ಟೇ ಸುಂದರ ಎಂದ ಉದ್ಯಮಿ

ತನ್ನ ಪ್ರೇಯಸಿ ತನ್ನಿಂದ ಅಂತರ ಕಾಯ್ದುಕೊಂಡಿದ್ದರಿಂದ ಕೋಪಗೊಂಡ ಆನಂದ ಶುಕ್ರವಾರ ಆಕೆಯ ಮನೆಗೆ ನುಗ್ಗಿ ಆಕೆಯ ಹೊಟ್ಟೆ ಹಾಗೂ ಎದೆಯ ಭಾಗಕ್ಕೆ ಹಲವು ಬಾರಿ ಚಾಕುವಿನಿಂದ ಇರಿದು ಗಾಯಗೊಳಿಸಿ ಹತ್ಯೆ ಮಾಡಿದ್ದಾನೆ. ಆಕೆ ಮೃತಪಟ್ಟ ಬಳಿಕ ತಾನೂ ಚಾಕುವಿನಿಂದ ಇರಿದುಕೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಈತನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲಿ ಮೃತಪಟ್ಟರಿವುದಾಗಿ ಪೊಲೀಸರು ತಿಳಿಸಿದ್ದಾರೆ.

5 / 5. 1

ಶೇರ್ ಮಾಡಿ :
advertisement