ವೀಡಿಯೊ..| ಕಾರವಾರ : ಸಮುದ್ರದ ಅಲೆಗಳ ಅಬ್ಬರಕ್ಕೆ ತೀರಕ್ಕೆ ಬಂದುಬಿದ್ದ ಡಾಲ್ಫಿನ್ ಮೀನು : ರಕ್ಷಿಸಿ ಪುನಃ ನೀರಿಗೆ ಬಿಟ್ಟ ಜನ

ಕಾರವಾರ : ಅರಬ್ಬಿ ಸಮುದ್ರದಲ್ಲಿ ಬಿರುಗಾಳಿಯ ಪರಿಣಾಮದಿಂದ ಉಂಟಾದ ಅಲೆಗಳ ಅಬ್ಬರಕ್ಕೆ ಕಡಲತೀರಕ್ಕೆ ಬಂದು ಸಿಲುಕ್ಕಿದ್ದ ಇಂಡೋ-ಪೆಸಿಫಿಕ್ ಹಂಪ್‌ಬ್ಯಾಕ್‌ ತಳಿಯ ಡಾಲ್ಫಿನ್ ಮೀನನ್ನು ಕಾರವಾರ ತಾಲೂಕಿನ ದೇವಬಾಗ ಕಡಲತೀರದಲ್ಲಿ ರಕ್ಷಣೆ ಮಾಡಲಾಗಿದೆ.
ಸೋಮವಾರ ಮಧ್ಯಾಹ್ನ 12ರ ಸುಮಾರಿಗೆ ಡಾಲ್ಫಿನ್‌ ಮೀನಿನ ಮರಿಯನ್ನು ರಕ್ಷಿಸಲಾಗಿದೆ. ಸಮುದ್ರಕ್ಕೆ ಹಿಂತಿರುಗಲು ಡಾಲ್ಫಿನ್ ಒದ್ದಾಡುತ್ತಿರುವುದು ಕಂಡು ಬಂದ ನಂತರ ಅಲ್ಲಿದ್ದ ಜಂಗಲ್ ಲಾಡ್ಜಸ್ ಆ್ಯಂಡ್ ರೆಸಾರ್ಟ್ ಸಿಬ್ಬಂದಿ ತಕ್ಷಣ ಬಂದು ಅದು ಪುನಃ ನೀರಿಗೆ ಹೋಗುವಂತೆ ಮಾಡಿದ್ದಾರೆ.

ಸಮುದ್ರತೀರದಲ್ಲಿ ಅಲೆಗಳ ರಭಸಕ್ಕೆ ದಡಕ್ಕೆ ಬಂದಿದ್ದ ಡಾಲ್ಫಿನ್ ಮರಳಿ ಆಳ ಸಾಗರಕ್ಕೆ ಹೋಗಲು ಸಾಧ್ಯವಾಗದೇ ಒದ್ದಾಡುತ್ತಿತ್ತು. ಸ್ಥಳೀಯರು ಇದನ್ನು ಗಮನಿಸಿ ತಕ್ಷಣ ರೆಸಾರ್ಟ್ ಸಿಬ್ಬಂದಿಗೆ ಮಾಹಿತಿ ನೀಡಿದರು. ನಂತರ ಸ್ಥಳಕ್ಕಾಗಮಿಸಿದ ಸಿಬ್ಬಂದಿ ನೀಲೇಶ, ಸುನೀಲ ಮತ್ತು ಸಂತೋಷ ಎಂಬವರು ಶ್ರಮಪಟ್ಟು ಡಾಲ್ಫಿನ್ ಸುರಕ್ಷಿತವಾಗಿ ಪುನಃ ಸಮುದ್ರಕ್ಕೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.

ಹಂಪ್‌ಬ್ಯಾಕ್ ಡಾಲ್ಫಿನ್‌ಗಳು ಏಶಿಯಾ, ಆಸ್ಟ್ರೇಲಿಯಾ, ಆಫ್ರಿಕಾ ಖಂಡದ ಕರಾವಳಿಯುದ್ದಕ್ಕೂ ತೀರದ ಹತ್ತಿರದ ಅಷ್ಟೊಂದು ಆಳವಿಲ್ಲದ ಸಮುದ್ರದ ನೀರಿನಲ್ಲಿ ವಾಸಿಸುತ್ತವೆ. ಹಂಪ್‌ಬ್ಯಾಕ್ ಡಾಲ್ಫಿನ್‌ಗಳು, ನಿರ್ದಿಷ್ಟವಾಗಿ ಇಂಡೋ-ಪೆಸಿಫಿಕ್ ಪ್ರದೇಶದ ಬೆಳೆದ ಹಂಪ್‌ಬ್ಯಾಕ್ ಡಾಲ್ಫಿನ್ ಮೀನು ಸಾಮಾನ್ಯವಾಗಿ 2 ರಿಂದ 3.5 ಮೀಟರ್ (6.6 ರಿಂದ 11.6 ಅಡಿ ವರೆಗೆ) ಉದ್ದವಿರುತ್ತವೆ. ಹಿಂದೂ ಮಹಾಸಾಗರದ ಹಂಪ್‌ಬ್ಯಾಕ್ ಡಾಲ್ಫಿನ್‌ಗಳು: ಸ್ವಲ್ಪ ಚಿಕ್ಕದಾಗಿರುತ್ತವೆ, ಉದ್ದ 2 ರಿಂದ 2.8 ಮೀಟರ್ (6.6 ರಿಂದ 9.2 ಅಡಿ) ವರೆಗೆ ಇರುತ್ತದೆ. ಅವುಗಳ ತೂಕವು 150 ರಿಂದ 230 ಕಿಲೋಗ್ರಾಂಗಳಷ್ಟು ಇರುತ್ತವೆ.

ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement