ನಿವೃತ್ತ ಪ್ರಾಂಶುಪಾಲ ಶ್ರೀಪತಿ ರಾವ್‌ ನಿಧನ

ಪುತ್ತೂರು : ನಗರದ ಕೊಂಬೆಟ್ಟು ನಿವಾಸಿ ನಿವೃತ್ತ ಪ್ರಾಂಶುಪಾಲರಾಗಿದ್ದ ಎಂ. ಶ್ರೀಪತಿ ರಾವ್ ಅವರು ಬುಧವಾರ (ಆಗಸ್ಟ್‌) ನಿಧನರಾಗಿದ್ದಾರೆ. ಇವರು ಪತ್ನಿ ಮೋಹಿನಿ ರಾವ್ ಮಕ್ಕಳಾದ ಸರಿತಾ, ಸುಪ್ರಿತಾ ಹಾಗೂ ಅಳಿಯಂದಿರಾದ ಸಂತೋಷ, ಶ್ರೀಧರ ಮತ್ತು ಮೊಮ್ಮಕ್ಕಳು ಹಾಗೂ ಅಪಾರ ಸಂಖ್ಯೆಯ ಬಂಧು ವರ್ಗ ಹಾಗೂ ಶಿಷ್ಯ ಸಮೂಹವನ್ನು ಅಗಲಿದ್ದಾರೆ.ಕನ್ಯಾನ ಮೂಲದವರಾದ ಶ್ರೀಪತಿ ತಾವ್‌ ಅವರು ಪುತ್ತೂರಿನ ಕೊಂಬೆಟ್ಟು ನಿವಾಸಿಯಾಗಿದ್ದರು. ಸುದೀರ್ಘ ನಲವತ್ತು ವರ್ಷಗಳ ಬೋಧಕ ವೃತ್ತಿ ಜೀವನದಲ್ಲಿ ತುಂಬಾ ವಿಶಾಲವಾದ ಶಿಷ್ಯ ಸಮೂಹವನ್ನು ಹೊಂದಿದ್ದ ಇವರು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಹೈಸ್ಕೂಲು ಮತ್ತು ಕಾಲೇಜುಗಳಲ್ಲಿ ಸೇವೆಯನ್ನು ಸಲ್ಲಿಸಿದ್ದರು. ಅನೇಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಇವರು ಪುತ್ತೂರು ಬಿಜೆಪಿಯ ಬೂತ್ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.

2 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement