ಎಲ್‌ ಪಿಜಿ ವಾಣಿಜ್ಯ ಸಿಲಿಂಡರ್ ದರ ಇಳಿಕೆ: ಇಂದಿನಿಂದಲೇ (ಸೆ.1) ಜಾರಿ

ನವದೆಹಲಿ: ತೈಲ ಮಾರುಕಟ್ಟೆಗಳು ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ದರ ಇಳಿಕೆ ಮಾಡಲಾಗಿದೆ. ಸಿಲಿಂಡರ್‌ಗೆ 51.50 ರೂ. ಗಳಷ್ಟು ಬೆಲೆ ಇಳಿಕೆ ಆಗಿದ್ದು, ಹೊಸ ದರ ಸಿಲಿಂಡರ್ ಒಂದಕ್ಕೆ 1580 ರೂ ಆಗಲಿದೆ. ಇದು ಇಂದಿನಿಂದಲೇ ಜಾರಿಗೆ ಬರಲಿದೆ. ಆದರೆ ಗೃಹ ಬಳಕೆಯ 14.2 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರಕ್ಕೆ ಅನುಗುಣವಾಗಿ ಎಲ್‌ಪಿಜಿ ದರ ಪ್ರತಿ ತಿಂಗಳು ಪರಿಷ್ಕರಣೆಯಾಗುತ್ತಿರುತ್ತದೆ.ಕೆಲವು ತಿಂಗಳುಗಳಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಇಳಿಕೆ ಮಾಡುತ್ತಾ ಬರಲಾಗಿದೆ. ಇದರಿಂದ ವ್ಯಾಪಾರ ಮಾಡುವವರಿಗೆ, ಹೋಟೆಲ್ ಉದ್ದಿಮೆಗಳಿಗೆ ಅನುಕೂಲವಾಗಲಿದೆ.

ಕಳೆದ ತಿಂಗಳು ಆಗಸ್ಟ್ 1 ರಂದು ಸಹ ತೈಲ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 33.50 ರೂಪಾಯಿಗಳಷ್ಟು ಕಡಿಮೆ ಮಾಡಿದ್ದವು.  ಅದಕ್ಕೂ ಮೊದಲು ಜುಲೈ 1 ರಂದು 58.50 ರೂಪಾಯಿಗಳಷ್ಟು ಬೆಲೆ ಕಡಿತ ಮಾಡಲಾಗಿತ್ತು. ಜೂನ್ ತಿಂಗಳಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು 24 ರೂ.ಗಳಷ್ಟು ಕಡಿತಗೊಳಿಸಲಾಗಿತ್ತು.
ಭಾರತದಲ್ಲಿ ಶೇಕಡಾ 90 ರಷ್ಟು ಎಲ್‌ಪಿಜಿಯನ್ನು ಅಡುಗೆಗೆ ಬಳಸಲಾಗುತ್ತದೆ. ಉಳಿದ ಶೇಕಡಾ 10 ರಷ್ಟನ್ನು ಮಾತ್ರ ವಾಣಿಜ್ಯ, ಕೈಗಾರಿಕೆ ಮತ್ತು ವಾಹನಗಳಿಗೆ ಬಳಸಲಾಗುತ್ತದೆ. ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಏರಿಳಿತವಾದರೂ, ಮನೆಯ ಸಿಲಿಂಡರ್‌ಗಳ ಬೆಲೆ ಸಾಮಾನ್ಯವಾಗಿ ಸ್ಥಿರವಾಗಿರುತ್ತದೆ.
ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಈ ತಿಂಗಳು 2025-26ರ ಹಣಕಾಸು ವರ್ಷದಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ (ಪಿಎಂಯುವೈ) ಫಲಾನುಭವಿಗಳಿಗೆ ವರ್ಷಕ್ಕೆ 9 ಮರುಪೂರಣಗಳಿಗೆ (ಮತ್ತು 5 ಕೆಜಿ ಸಿಲಿಂಡರ್‌ಗೆ ಅನುಗುಣವಾಗಿ ಅನುಪಾತದಲ್ಲಿ) 14.2 ಕೆಜಿ ಸಿಲಿಂಡರ್‌ಗೆ 300 ರೂ.ಗಳ ಬೆಲೆಯನ್ನು ಅನುಮೋದಿಸಿದೆ. ಇದಕ್ಕಾಗಿ ಕೇಂದ್ರ ಸರಕಾರ ರೂ. 12,000 ಕೋಟಿ ವೆಚ್ಚ ಮಾಡಿದೆ.

ಪ್ರಮುಖ ಸುದ್ದಿ :-   ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಜನಿಸಿದ ಮಗು ಮಾರಾಟ ಆರೋಪ, ಆಕೆ ಮತ್ತೆ ಗರ್ಭಿಣಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement