ಶಿರಸಿ: ಅಕ್ರಮ ಚಟುವಟಿಕೆಗಳಿಗಾಗಿ ಇರಿಸಲಾಗಿದ್ದ ನಾಡ ಬಾಂಬ್ ಸಿಡಿದು ಹಸುವೊಂದು ಮಾರಣಾಂತಿಕವಾಗಿ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ಮಳಲಿ ಗ್ರಾಮದ ಹೊಸಮನೆ ಬಳಿ ನಡೆದಿದೆ ಎಂದು ವರದಿಯಾಗಿದೆ.
ಶಿರಸಿ ತಾಲೂಕಿನ ಹೊಸಮನೆ ನಿವಾಸಿ ಲಕ್ಷ್ಮಣ ಗೌಡ ಎಂಬವರಿಗೆ ಸೇರಿದ ಈ ಆಕಳು, ಅಕೇಶಿಯಾ ತೋಪಿನಲ್ಲಿ ಮೇಯುತ್ತಿದ್ದಾಗ ಆಹಾರವೆಂದು ತಿಳಿದು ಅಲ್ಲಿ ಇರಿಸಲಾಗಿದ್ದ ನಾಡ ಬಾಂಬ್ ಅನ್ನು ಬಾಯಿಯಲ್ಲಿ ಕಚ್ಚಿದೆ. ಆಗ ಬಾಂಬ್ ಸ್ಫೋಟಗೊಂಡಿದ್ದು, ಸ್ಫೋಟದ ರಭಸಕ್ಕೆ ಹಸುವಿನ ಮುಖದ ಭಾಗಗಳು ಛಿದ್ರಗೊಂಡಿವೆ.
ಹಸು ಆಹಾರ ಸೇವಿಸಲಾಗದೆ ಮತ್ತು ನೀರು ಕುಡಿಯಲಾಗದೆ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದೆ.
ಈ ಘಟನೆ ಕುರಿತು ಗ್ರಾಮೀಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ತನಿಖೆ ನಡೆಯುತ್ತಿದೆ.ಇತ್ತೀಚಿಗಂತೂ ಹೊಸಮನೆ ಸುತ್ತಮುತ್ತ ಅಕ್ರಮ ಚಟುವಟಿಕೆಗಳು ಸದ್ದಿಲ್ಲದೇ ನಡೆಯುತ್ತಿದ್ದು, ಇಂತಹ ಅಕ್ರಮ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ