ಜಿಎಸ್‌ಟಿ ಹೊಸ ತೆರಿಗೆ ಸ್ಲ್ಯಾಬ್‌ ; ಯಾವುದು ಅಗ್ಗ..? ಯಾವುದು ದುಬಾರಿ..? ಪೂರ್ಣ ಪಟ್ಟಿ

ನವದೆಹಲಿ: ಜಿಎಸ್‌ಟಿ ಕೌನ್ಸಿಲ್ ತನ್ನ 56 ನೇ ಸಭೆಯಲ್ಲಿ ಪರೋಕ್ಷ ತೆರಿಗೆಗಳಲ್ಲಿ ವ್ಯಾಪಕ ಬದಲಾವಣೆಗಳಿಗೆ ಅನುಮೋದನೆ ನೀಡಿದ ನಂತರ ದಿನಸಿ ಮತ್ತು ಔಷಧಿಗಳಿಂದ ಹಿಡಿದು ಸಿಮೆಂಟ್ ಮತ್ತು ಸಣ್ಣ ಕಾರುಗಳವರೆಗೆ, ವಿವಿಧ ರೀತಿಯ ಅಗತ್ಯ ವಸ್ತುಗಳ ಬೆಲೆಗಳು ಕಡಿಮೆಯಾಗಲಿವೆ. ಅದೇ ಸಮಯದಲ್ಲಿ, ಜಿಎಸ್‌ಟಿ ಕೌನ್ಸಿಲ್ ತಂಬಾಕು, ಫಿಜ್ಜಿ ಪಾನೀಯಗಳು ಮತ್ತು ದುಬಾರಿ ವಾಹನಗಳ ಮೇಲಿನ ದರಗಳನ್ನು ಹೆಚ್ಚಿಸಿರುವುದರಿಂದ ಸಿನ್‌ ಸರಕುಗಳು (sin goods) ಮತ್ತು ಐಷಾರಾಮಿ ಉತ್ಪನ್ನಗಳು ಹೆಚ್ಚು ದುಬಾರಿಯಾಗಲಿವೆ.
ಯಾವುದು ಅಗ್ಗವಾಗಲಿದೆ…?
ದೈನಂದಿನ ಅಗತ್ಯ ವಸ್ತುಗಳು: ಯುಎಚ್‌ಟಿ ಹಾಲು, ಪನೀರ್, ಪರಾಠಾಗಳು, ಪಿಜ್ಜಾ ಬ್ರೆಡ್, ಖಾಖ್ರಾ ಮತ್ತು ರೊಟ್ಟಿಗಳನ್ನು ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ. ಬೆಣ್ಣೆ, ತುಪ್ಪ, ಚೀಸ್, ಜಾಮ್‌ಗಳು, ಸಾಸ್‌ಗಳು, ಸೂಪ್‌ಗಳು, ಪಾಸ್ತಾ, ನಮ್ಕೀನ್‌ಗಳು ಮತ್ತು ಮಿಠಾಯಿಗಳು ಈಗ ಕೇವಲ 5% ತೆರಿಗೆಯನ್ನು ಹೊಂದಿವೆ, ಇದು 12–18% ತೆರಿಗೆ ಸ್ಲ್ಯಾಬ್‌ನಿಂದ 5% ತೆರಿಗೆ ಸ್ಲ್ಯಾಬ್‌ಗೆ ಬಂದಿದೆ. ಬಾದಾಮಿ, ಪಿಸ್ತಾ ಮತ್ತು ಗೋಡಂಬಿಗಳಂತಹ ಒಣ ಹಣ್ಣುಗಳು, ಹಾಗೆಯೇ ಖರ್ಜೂರ ಮತ್ತು ಸಿಟ್ರಸ್ ಹಣ್ಣುಗಳು ಸಹ 5% ದರದಲ್ಲಿರುವುದುರಿಂದ ಇವುಗಳ ದರಗಳು ಕಡಿಮೆಯಾಗಲಿವೆ. ಶಾಂಪೂದಿಂದ ಕೂದಲಿನ ಎಣ್ಣೆಯವರೆಗೆ, ಜಿಎಸ್‌ಟಿ ಕಡಿತದ ನಂತರ ದೈನಂದಿನ ವಸ್ತುಗಳ ಬೆಲೆ ಕಡಿಮೆಯಾಗುತ್ತದೆ

ಆರೋಗ್ಯ: ಅಗಲ್ಸಿಡೇಸ್ ಬೀಟಾ, ಒನಾಸೆಮ್ನೋಜೀನ್, ಡರಟುಮುಮಾಬ್ ಮತ್ತು ಅಲೆಕ್ಟಿನಿಬ್‌ನಂತಹ ಜೀವ ಉಳಿಸುವ ಔಷಧಿಗಳು ಈಗ ತೆರಿಗೆ ಮುಕ್ತವಾಗಿರುತ್ತವೆ. ಹೆಚ್ಚಿನ ಔಷಧಿಗಳು, ವೈದ್ಯಕೀಯ ಸಾಧನಗಳು, ರೋಗನಿರ್ಣಯ ಕಿಟ್‌ಗಳು, ಬ್ಯಾಂಡೇಜ್‌ಗಳು, ಥರ್ಮಾಮೀಟರ್‌ಗಳು ಮತ್ತು ಆಮ್ಲಜನಕದ ಮೇಲೆ ಈವರೆಗೆ ವಿಧಿಸಲಾಗುತ್ತಿದ್ದ 12–18% ತೆರಿಗೆ ಬದಲಿಗೆ ಇನ್ನು 5% ತೆರಿಗೆ ವಿಧಿಸಲಾಗುತ್ತದೆ. ಹೀಗಾಗಿ ಇವುಗಳ ಬೆಲೆಗಳು ಸಹ ಕಡಿಮೆಯಾಗಲಿವೆ. ಎಸಿಗಳು, ಟಿವಿಗಳು, ಡಿಶ್‌ ವಾಶರ್‌ಗಳ ಮೊದಲಾದ ಉತ್ಪನ್ನಗಳ ಮೇಲಿನ ದರಗಳನ್ನು ಜಿಎಸ್‌ಟಿ ಕೌನ್ಸಿಲ್ ಕಡಿತಗೊಳಿಸಿದೆ
ಗ್ರಾಹಕ ವಸ್ತುಗಳು: ಕೂದಲಿನ ಎಣ್ಣೆ, ಶಾಂಪೂಗಳು, ಟೂತ್‌ಪೇಸ್ಟ್, ಸೋಪ್‌ಗಳು, ಶೇವಿಂಗ್ ಉತ್ಪನ್ನಗಳು, ಟಾಲ್ಕಮ್ ಪೌಡರ್, ಟೂತ್ ಬ್ರಷ್‌ಗಳು, ಮೇಣದಬತ್ತಿಗಳು ಮತ್ತು ಸುರಕ್ಷತಾ ಬೆಂಕಿಕಡ್ಡಿಗಳು ಈಗ ಅಗ್ಗವಾಗಲಿದೆ. ಯಾಕೆಂದರೆ ಇವುಗಳ ಮೇಲೆ ಕೇವಲ 5% ಜಿಎಸ್‌ಟಿ ನಿಗದಿಪಡಿಸಲಾಗಿದೆ. ಆಟಿಕೆಗಳು, ಕ್ರೀಡಾ ವಸ್ತುಗಳು, ಕರಕುಶಲ ವಸ್ತುಗಳು ಮತ್ತು ಬಿದಿರು ಅಥವಾ ಕಬ್ಬಿನಿಂದ ಮಾಡಿದ ಪೀಠೋಪಕರಣಗಳ ಜೊತೆಗೆ ನೋಟ್‌ಬುಕ್‌ಗಳು, ಪೆನ್ಸಿಲ್‌ಗಳು, ಶಾರ್ಪನರ್‌ಗಳು ಮತ್ತು ಎರೇಸರ್‌ಗಳಂತಹ ಸ್ಟೇಷನರಿ ವಸ್ತುಗಳು ಸಹ ಅಗ್ಗವಾಗುತ್ತವೆ.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

ಸಾರಿಗೆ ಮತ್ತು ವಸತಿ: ಸಿಮೆಂಟ್ ಮೇಲಿನ ತೆರಿಗೆಗಳನ್ನು 28% ರಿಂದ 18% ಕ್ಕೆ ಇಳಿಸಲಾಗಿದೆ. ಟ್ರ್ಯಾಕ್ಟರ್‌ಗಳು, ಬೈಸಿಕಲ್‌ಗಳು, 350 ಸಿಸಿಗಿಂತ ಕಡಿಮೆ ಇರುವ ಮೋಟಾರ್‌ಸೈಕಲ್‌ಗಳು, ಸಣ್ಣ ಕಾರುಗಳು (ಪೆಟ್ರೋಲ್/ಡೀಸೆಲ್ <1200–1500 ಸಿಸಿ, ಉದ್ದ <4 ಮೀ), ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳು ಮತ್ತು ಆಂಬ್ಯುಲೆನ್ಸ್‌ಗಳ ಮೇಲಿನ ತೆರಿಗೆ ಕಡಿಮೆ ಮಾಡಲಾಗಿದೆ. ಮಾರ್ಬಲ್, ಗ್ರಾನೈಟ್ ಬ್ಲಾಕ್‌ಗಳು ಮತ್ತು ಕಣ ಫಲಕಗಳಂತಹ ಪರಿಸರ ಸ್ನೇಹಿ ಕಟ್ಟಡ ಸಾಮಗ್ರಿಗಳ ಮೇಲೆ ಕೇವಲ 5% ಜಿಎಸ್‌ಟಿ ವಿಧಿಸಲಾಗಿದೆ. ಹೀಗಾಗಿ ಇವುಗಳ ಬೆಲೆಗಳು ಸಹ ಕಡಿಮೆಯಾಗಲಿದೆ.

ಯಾವುದು ದುಬಾರಿಯಾಗಲಿದೆ…?
ಜಿಎಸ್‌ಟಿ ಕೌನ್ಸಿಲ್ ಸಭೆಯ ನಂತರ ಕೆಲವು ವಸ್ತುಗಳು ದುಬಾರಿಯಾಗಲಿವೆ. ತಂಬಾಕು ಮತ್ತು ಸಿನ್‌ ಸರಕುಗಳಾದ ಪಾನ್ ಮಸಾಲಾ, ಗುಟ್ಕಾ, ಜಗಿಯುವ ತಂಬಾಕು ಮತ್ತು ಸಿಗರೇಟ್‌ಗಳ ಮೇಲೆ ಇರುವ 28% ಜಿಎಸ್‌ಟಿಯನ್ನು 40%ಕ್ಕೆ ಏರಿಸಲಾಗುತ್ತದೆ. ಕಾರ್ಬೊನೇಟೆಡ್ ತಂಪು ಪಾನೀಯಗಳು, ಕೆಫೀನ್ ಮಾಡಿದ ಪಾನೀಯಗಳು ಮತ್ತು ಹಣ್ಣು ಆಧಾರಿತ ಫಿಜ್ಜಿ ಪಾನೀಯಗಳಿಗೂ 40%ರ ತೆರಿಗೆ ವಿಧಿಸಲಾಗುತ್ತದೆ.
ಐಷಾರಾಮಿ ವಸ್ತುಗಳು: 1200 ಸಿಸಿ/1500 ಸಿಸಿಗಿಂತ ಹೆಚ್ಚಿನ ಎಂಜಿನ್‌ಗಳನ್ನು ಹೊಂದಿರುವ ಎಸ್‌ಯುವಿಗಳು ಮತ್ತು ದೊಡ್ಡ ಕಾರುಗಳು, 350 ಸಿಸಿಗಿಂತ ಹೆಚ್ಚಿನ ಮೋಟಾರ್‌ಸೈಕಲ್‌ಗಳು, ವಿಹಾರ ನೌಕೆಗಳು, ಖಾಸಗಿ ವಿಮಾನಗಳು ಮತ್ತು ರಿವಾಲ್ವರ್‌ಗಳು ಮತ್ತು ಪಿಸ್ತೂಲ್‌ಗಳ ಮೇಲೆ ಈಗ 40% ಜಿಎಸ್‌ಟಿ ವಿಧಿಸಲಾಗುತ್ತದೆ..
ಇತರ ಏರಿಕೆಗಳು: ಕಲ್ಲಿದ್ದಲು, ಲಿಗ್ನೈಟ್ ಮತ್ತು ಪೀಟ್‌ಗೆ 5% ರ ಬದಲಿಗೆ 18% ತೆರಿಗೆ ವಿಧಿಸಲಾಗುತ್ತದೆ, ಆದರೆ ಡೀಸೆಲ್‌ನೊಂದಿಗೆ ಬೆರೆಸದ ಬಯೋಡೀಸೆಲ್‌ಗೆ 12%ರ ಬದಲು 18% ತೆರಿಗೆ ಏರಿಕೆಯಾಗುತ್ತದೆ. ಪ್ರತಿ ಪೀಸ್‌ ₹2,500 ಕ್ಕಿಂತ ಹೆಚ್ಚಿರುವ ಪ್ರೀಮಿಯಂ ಉಡುಪು ಮತ್ತು ಜವಳಿ ಮತ್ತು ಹೆಚ್ಚಿನ ಮೌಲ್ಯದ ಹತ್ತಿ ಕ್ವಿಲ್ಟ್‌ಗಳಿಗೆ 18% ಜಿಎಸ್‌ಟಿ ವಿಧಿಸಲಾಗುತ್ತದೆ. ಅನ್‌ಕೋಟೆಡ್ ಮತ್ತು ಕ್ರಾಫ್ಟ್ ಪೇಪರ್ ಸೇರಿದಂತೆ ಕೆಲವು ಕಾಗದದ ಉತ್ಪನ್ನಗಳು ಈಗ 18% ಜಿಎಸ್‌ಟಿ ಸ್ಲ್ಯಾಬ್‌ಗೆ ಬರುತ್ತವೆ.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement