ಚಾಮರಾಜನಗರ : ಸಫಾರಿ ವಾಹನದ ಮೇಲೆ ಕಾಡಾನೆ (Wild Elephant) ದಾಳಿಗೆ ಯತ್ನಿಸಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಸಫಾರಿಯಲ್ಲಿ ನಡೆದಿದೆ. ಈಗ ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಫಾರಿ (Safari) ವಾಹನ ಹೋಗುತ್ತಿದ್ದಾಗ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಕಾಡಾನೆ ಸಫಾರಿ ಜೀಪ್ ಕಂಡ ಕೂಡಲೇ ಕೋಪಗೊಂಡು ಅಟ್ಟಾಡಿಸಿಕೊಂಡು ಬಂದಿದೆ. ಈ ವೇಳೆ ಚಾಲಕ ಎಚ್ಚೆತ್ತುಕೊಂಡು ಜೀಪ್ ಅನ್ನು ಸುಮಾರು ದೂರದ ವರೆಗೆ ರಿವರ್ಸ್ ಚಲಾಯಿಸಿಕೊಂಡು ಬಂದಿದ್ದರಿಂದ ಪ್ರವಾಸಿಗರು ಅಪಾಯದಿಂದ ಪಾರಾಗಿದ್ದಾರೆ. ಕೋಪಗೊಂಡ ಕಾಡಾನೆ ಸಫಾರಿ ಜೀಪ್ ಅನ್ನು ಅಟ್ಟಾಡಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೊದಲು ಸಫಾರಿ ಜೀಪ್ ನೋಡಿ ಕೋಪಗೊಂಡ ಆನೆ ವಾಹನ ಬೆನ್ನಟ್ಟಿ ಬಂದಿದೆ. ಆಗ ಚಾಲಕ ವಾಹನವನ್ನು ರಿವರ್ಸ್ ಚಲಾಯಿಸಿದ್ದಾರೆ. ಸ್ವಲ್ಪದೂರದ ವರೆಗೆ ಅಟ್ಟಿಸಿಕೊಂಡು ಬಂದ ಕಾಡಾನೆ ನಂತರ ನಿಂತುಕೊಂಡಿದೆ. ಆಗ ಸಫಾರಿ ವಾಹನವನ್ನೂ ನಿಲ್ಲಿಸಿದ್ದಾರೆ. ಆಗ ಕಾಡಾನೆ ನೆಲಕ್ಕೆ ಕಾಲು ಕೆರೆದು ವಾರ್ನಿಂಗ್ ಕೊಟ್ಟಿದೆ. ನಂತರ ಅದು ಸಫಾರಿ ಜೀಪ್ ಅನ್ನು ಮತ್ತೆ ಅಟ್ಟಿಸಿಕೊಂಡು ಬಂದಿದೆ. ಈ ಬಾರಿ ಚಾಲಕ ಪೂರ್ಣ ರಿವರ್ಸ್‌ನಲ್ಲಿ ವಾಃನ ಚಲಾಯಿಸಿ ಆನೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ನಂತರ ಆನೆ ಅಷ್ಟಕ್ಕೆ ಸುಮ್ಮನಾಗಿರುವುದು ವೀಡಿಯೊದಲ್ಲಿ ಕಂಡುಬಂದಿದೆ.


ನಿಮ್ಮ ಕಾಮೆಂಟ್ ಬರೆಯಿರಿ