3ನೇ ಹೆಂಡತಿಯಿಂದ ವ್ಯಕ್ತಿಯ ಕೊಲೆ…2ನೇ ಹೆಂಡತಿಯಿಂದ ಮೃತದೇಹ ಪತ್ತೆ…3 ಮದುವೆಯಾಗಿದ್ದ ವ್ಯಕ್ತಿಯ ಕೊಲೆ ಹಿಂದಿತ್ತು ದ್ರೋಹ-ಪಿತೂರಿ…

ಭೋಪಾಲ್: ಮಧ್ಯಪ್ರದೇಶದ ಹಳ್ಳಿಯೊಂದರ ಬಾವಿಯಲ್ಲಿ ವ್ಯಕ್ತಿಯೊಬ್ಬನ ಶವ ಕಂಬಳಿಯಲ್ಲಿ ಸುತ್ತಿ ಚೀಲದಲ್ಲಿ ತುಂಬಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದು ಸಾಮಾನ್ಯ ಕೊಲೆ ಪ್ರಕರಣದಂತೆ ಮೇಲ್ನೋಟಕ್ಕೆ ಕಂಡರೂ ನಂತರದಲ್ಲಿ ದ್ರೋಹ ಮತ್ತು ಪಿತೂರಿಯ ಕಥೆ ಎಂಬುದು ಬಹಿರಂಗವಾಯಿತು.
ಮಧ್ಯಪ್ರದೇಶದ ಅನುಪ್ಪುರ ಜಿಲ್ಲೆಯ ಸಕಾರಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಮೃತ ವ್ಯಕ್ತಿಯನ್ನು 60 ವರ್ಷದ ಭಯ್ಯಾಲಾಜ ರಜಕ್ ಎಂದು ಗುರುತಿಸಲಾಗಿದೆ. ಅವರ ವೈಯಕ್ತಿಕ ಜೀವನವು ಅಪರಾಧದ ಕಥೆಯಷ್ಟೇ ಜಟಿಲವಾಗಿತ್ತು. ಭಯ್ಯಾಲಾಲ ಮೂರು ಮದುವೆಯಾಗಿದ್ದರು. ಅವರ ಮೊದಲ ಹೆಂಡತಿ ಅವರನ್ನು ತೊರೆದು ಹೋಗಿದ್ದರು. ಅವರ ಎರಡನೇ ಹೆಂಡತಿ ಗುಡ್ಡಿ ಬಾಯಿ ಮಕ್ಕಳನ್ನು ಹೆತ್ತಿರಲಿಲ್ಲ. ಹೀಗಾಗಿ ಮಕ್ಕಳನ್ನು ಪಡೆಯಲು ಭಯ್ಯಾಲಾಲ ಗುಡ್ಡಿಯ ತಂಗಿಯಾದ ಮುನ್ನಿಯನ್ನೇ ಮದುವೆಯಾದರು. ಮುನ್ನಿಗೆ ಇಬ್ಬರು ಮಕ್ಕಳು ಜನಿಸಿದರು. ಆದರೆ ಈ ಮದುವೆ  ಹಿಂದೆ ಅಪಾಯಕಾರಿ ರಹಸ್ಯವೂ ಅಡಗಿತ್ತು: ಸ್ಥಳೀಯ ಆಸ್ತಿ ವ್ಯಾಪಾರಿ ನಾರಾಯಣ ದಾಸ ಕುಶ್ವಾಹ ಎಂಬಾತನೊಂದಿಗೆ ಮುನ್ನಿಯ ಅನೈತಿಕ ಸಂಬಂಧವಿತ್ತು.

ಪೊಲೀಸರ ಪ್ರಕಾರ, ಮುನ್ನಿ ಮತ್ತು ಲಲ್ಲು (ನಾರಾಯಣ ದಾಸ ಕುಶ್ವಾಹ) ಅವರ ಅಕ್ರಮ ಸಂಬಂಧವು ಎಷ್ಟು ತೀವ್ರವಾಗಿತ್ತೆಂದರೆ, ಇಬ್ಬರೂ ಭಯ್ಯಾಲಾಲ ಅವರ ಕೊಲೆಗೆ ಸಂಚು ರೂಪಿಸಿದರು. ಭಯ್ಯಾಲಾಲ ಅವರನ್ನು ಮುಗಿಸಲು 25 ವರ್ಷದ ಕಾರ್ಮಿಕ ಧೀರಜ್ ಕೋಲ್‌ ಎಂಬಾತನನ್ನು ಗೊತ್ತುಪಡಿಸಿದ.
ಆಗಸ್ಟ್ 30 ರ ರಾತ್ರಿ, ಭಯ್ಯಾಲಾಲ ತನ್ನ ನಿರ್ಮಾಣ ಹಂತದ ಮನೆಯಲ್ಲಿ ಹಾಸಿಗೆಯ ಮೇಲೆ ಮಲಗಿದ್ದಾಗ, ಕೊಲೆಗಾರರು ಗುಂಡು ಹಾರಿಸಿದರು. ಬೆಳಗಿನ ಜಾವ 2 ಗಂಟೆ ಸುಮಾರಿಗೆ, ಲಲ್ಲು ಉರುಫ್‌ ನಾರಾಯಣ ದಾಸ ಮತ್ತು ಧೀರಜ ಮನೆಯ ಒಳಗೆ ನುಸುಳಿ ಭಯ್ಯಾಲಾಲನ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಂದರು. ನಂತರ ಅವರ ದೇಹವನ್ನು ಚೀಲ ಮತ್ತು ಕಂಬಳಿಯಲ್ಲಿ ಸುತ್ತಿ, ಹಗ್ಗಗಳು ಮತ್ತು ಸೀರೆಗಳಿಂದ ಕಟ್ಟಿ, ಹಳ್ಳಿಯ ಬಾವಿಗೆ ಎಸೆದರು.

ಪ್ರಮುಖ ಸುದ್ದಿ :-   ಕೇವಲ 23ನೇ ವಯಸ್ಸಿಗೆ 19 ಸರ್ಕಾರಿ ಪರೀಕ್ಷೆ ಪಾಸ್ ! ರಾಷ್ಟ್ರಪತಿಯಿಂದ 'ಅಟ್-ಹೋಮ್' ಗೌರವಕ್ಕೆ ಆಯ್ಕೆಯಾದ ಯುವತಿ

ಆದರೆ ವಿಧಿ ಬೇರೆಯದೇ ಯೋಜನೆಗಳನ್ನು ಹೊಂದಿತ್ತು. ಮರುದಿನ ಬೆಳಿಗ್ಗೆ, ಎರಡನೇ ಹೆಂಡತಿ ಗುಡ್ಡಿ ಬಾಯಿ ಬಾವಿಯಲ್ಲಿ ಏನೋ ತೇಲುತ್ತಿರುವುದನ್ನು ಗಮನಿಸಿದಳು. ಈ ಬಗ್ಗೆ ಅಕ್ಕಪಕ್ಕದವರಿಗೆ ಮಾಹಿತಿ ನೀಡಿದಳು. ನೋಡಿದಾಗ ಅದರಲ್ಲಿ ಭಯ್ಯಾಲಾಲನ ಮೃತದೇಹವಿತ್ತು. ಆಕೆಯ ಗಂಡನ ದೇಹವನ್ನು ಕಟ್ಟಿ ಬಿಸಾಡಿದ ಭಯಾನಕ ದೃಶ್ಯವು ಗ್ರಾಮವನ್ನು ಭಯಭೀತಗೊಳಿಸಿತು. ಪೊಲೀಸರನ್ನು ಕರೆಸಲಾಯಿತು, ಬಾವಿಯನ್ನು ಬರಿದು ಮಾಡಲಾಯಿತು ಮತ್ತು ಭಯ್ಯಾಲಾಲನ ಮೃತಹದೇಹವನ್ನು ಮಾತ್ರವಲ್ಲದೆ ಅವರ ಮೊಬೈಲ್ ಫೋನ್ ಅನ್ನು ಸಹ ಬಾಯಿಯಿಂದ ವಶಪಡಿಸಿಕೊಳ್ಳಲಾಯಿತು.
ಮರಣೋತ್ತರ ಪರೀಕ್ಷೆಯಲ್ಲಿ ಭಯ್ಯಾಲಾಲ ತಲೆಗೆ ತೀವ್ರವಾದ ಹೊಡೆತ ಬಿದ್ದಿದ್ದು, ಗಂಭೀರ ಗಾಯಗಳಿಂದ ಮೃತಪಟ್ಟಿದ್ದಾರೆ ಎಂದು ದೃಢಪಟ್ಟಿತು.

ಕೊಲೆ ನಡೆದ 36 ಗಂಟೆಗಳಲ್ಲಿ, ಕೊಟ್ವಾಲಿ ಪೊಲೀಸರು ಪ್ರಕರಣವನ್ನು ಭೇದಿಸಿದರು. “ಮೃತ ಭಯ್ಯಾಲಾಲ ರಜಕ್ ಅವರ ಶವವನ್ನು ಬಾವಿಯಲ್ಲಿ ಚೀಲಗಳಿಂದ ಕಟ್ಟಿ ಎಸೆಯಲಾಗಿತ್ತು. ಅವರಿಗೆ ಮೂರು ವಿವಾಹಗಳಿದ್ದವು. ಮೂರನೇ ಪತ್ನಿ ಮುನ್ನಿ ಅಲಿಯಾಸ್ ವಿಮ್ಲಾ ರಜಕ್, ನಾರಾಯಣ ದಾಸ್ ಕುಶ್ವಾಹ ಅಲಿಯಾಸ್ ಲಲ್ಲು ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಕಾರ್ಮಿಕ ಧೀರಜ ಕೋಲ್ ಜೊತೆ ಸೇರಿಕೊಂಡು, ಅವರು ಭಯ್ಯಾಲಾಲ ರಜಕ್‌ ಅವರನ್ನು ರಾಡ್‌ನಿಂದ ಹೊಡೆದು ಕೊಂದು ಶವವನ್ನು ಬಾವಿಗೆ ಎಸೆದರು. ಮೊಬೈಲ್ ಫೋನ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ” ಎಂದು ಪೊಲೀಸ್ ವರಿಷ್ಠಾಧಿಕಾರಿ ಮೋತಿ ಉರ್ ರೆಹಮಾನ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಮೂವರು ಆರೋಪಿಗಳಾದ ಮುನ್ನಿ, ಲಲ್ಲು ಮತ್ತು ಧೀರಜ ಅವರನ್ನು ಬಂಧಿಸಿ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಪ್ರಮುಖ ಸುದ್ದಿ :-   ಹ್ಯಾರಿಯರ್ ಕಾರು, ನಕಲಿ ಎನ್‌ಎಸ್‌ಜಿ ಕಮಾಂಡೋಗಳು ! ಸೇನೆಯ ಬ್ರಿಗೇಡಿಯರ್ ಸೋಗಿನಲ್ಲಿ ಓಡಾಡುತ್ತಿದ್ದ ಯುವಕ ಬಲೆಗೆ ಬಿದ್ದಿದ್ದೇ ರೋಚಕ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement