ವಕ್ಫ್ ತಿದ್ದುಪಡಿ ಕಾಯಿದೆ : ಕೆಲ ಸೆಕ್ಷನ್‌ಗಳಿಗೆ ಸುಪ್ರೀಂ ಕೋರ್ಟ್‌ ತಡೆ

ನವದೆಹಲಿ: ವಕ್ಫ್‌ ತಿದ್ದುಪಡಿ ಕಾಯಿದೆ 2025ರ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ಕ್ಫ್ ತಿದ್ದುಪಡಿ ಕಾಯ್ದೆಗೆ ತಡೆ ನೀಡಲುನಿರಾಕರಿಸಿದ ಸುಪ್ರೀಂಕೋರ್ಟ್, ಅಂತಿಮ ತೀರ್ಪು ಬರುವವರೆಗೆ ಕಾಯಿದೆಯ ಕೆಲ ಸೆಕ್ಷನ್‌ಗಳಿಗೆ ಸುಪ್ರೀಂ ಕೋರ್ಟ್‌ ಸೋಮವಾರ (ಸೆಪ್ಟೆಂಬರ್ 14) ತಡೆ ನೀಡಿದೆ.
ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ಸೋಮವಾರ ಮಧ್ಯಂತರ ಆದೇಶ ಹೊರಡಿಸಿತು. ಆದರೆ ಕಾಯಿದೆಗೆ ಸಂಪೂರ್ಣವಾಗಿ ತಡೆ ನೀಡಲು ಯಾವುದೇ ಪೂರಕ ಕಾರಣ ದೊರೆತಿಲ್ಲ. ಕೆಲ ಸೆಕ್ಷನ್‌ಗಳಿಗೆ ತಡೆ ನೀಡಲಾಗಿದೆ ಎಂದು ನ್ಯಾಯಾಲಯ ತಿಳಿಸಿತು.
ಒಬ್ಬ ವ್ಯಕ್ತಿ ಆಸ್ತಿಯನ್ನು ವಕ್ಫ್‌ ಎಂದು ಘೋಷಿಸುವ ಮುನ್ನ ಆತ ಕನಿಷ್ಠ 5 ವರ್ಷ ಮುಸ್ಲಿಂ ಆಗಿರಬೇಕೆಂಬ ನಿಯಮಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿದ್ದು ಪ್ರಭುತ್ವವು ಧರ್ಮ ಪಾಲನೆ ಮಾಡುವ (ಪ್ರಾಕ್ಟಿಸಿಂಗ್‌ ಮುಸ್ಲಿಂ) ಎಂಬುದನ್ನು ಪರಿಶೀಲಿಸಲು ಸ್ಪಷ್ಟ ನಿಯಮ ರೂಪಿಸುವವರೆಗೆ ಈ ನಿಯಮ ಜಾರಿಯಲ್ಲಿ ಇರುವುದಿಲ್ಲ. ಇಂತಹ ನಿಯಮ ಜಾರಿಯಲ್ಲಿ ಇಲ್ಲದೆ ಈ ಸೆಕ್ಷನ್‌ ಕಾರ್ಯರೂಪಕ್ಕೆ ಬಂದರೆ ಅದು ಅಧಿಕಾರದ ದುರುಪಯೋಗಕ್ಕೆ ಕಾರಣವಾಗುತ್ತದೆ ಎಂದು ಪೀಠ ಹೇಳಿದೆ.

ಪ್ರಮುಖ ಸುದ್ದಿ :-   ಉದ್ಧವ್‌ಗೆ ಭಾರಿ ಹಿನ್ನಡೆ ; ಶಿಂಧೆ ಬಣದ ಜೊತೆ ಶಿವಸೇನೆ(ಯುಬಿಟಿ) 6 ಸಂಸದರ ವಿಲೀನಕ್ಕೆ ಲೋಕಸಭೆ ಸ್ಪೀಕರ್ ಅನುಮೋದನೆ

ವೈಯಕ್ತಿಕ ನಾಗರಿಕರ ಹಕ್ಕುಗಳನ್ನು ನಿರ್ಣಯಿಸಲು ಜಿಲ್ಲಾಧಿಕಾರಿಗೆ ಅನುಮತಿ ನೀಡುವ ನಿಯಮಕ್ಕೂ ಪೀಠ ತಡೆ ನೀಡಿದ್ದು, ಇದಕ್ಕೆ ತಡೆ ನೀಡದೆ ಹೋದರೆ ಅಧಿಕಾರ ಪ್ರತ್ಯೇಕತೆಯ ಉಲ್ಲಂಘನೆಯಾಗುತ್ತದೆ. ವಕ್ಫ್‌ ನ್ಯಾಯಮಂಡಳಿ ತೀರ್ಪು ಬರುವವರೆಗೆ ತೃತೀಯ ವ್ಯಕ್ತಿಗೆ ಹಕ್ಕುಗಳನ್ನು ಸೃಷ್ಟಿಸಲು ಅವಕಾಶ ಇರುವುದಿಲ್ಲ ಎಂದು ಪೀಠ ತಿಳಿಸಿದೆ.
ವಕ್ಫ್ ಸಂಸ್ಥೆಗಳಲ್ಲಿ ಮುಸ್ಲಿಮೇತರರನ್ನು ಸೇರಿಸಿಕೊಳ್ಳುವ ನಿಬಂಧನೆಯ ಬಗ್ಗೆಯೂ ನ್ಯಾಯಾಲಯ ಪ್ರಸ್ತಾಪಿಸಿದೆ. ಸದ್ಯಕ್ಕೆ, ಕೇಂದ್ರ ವಕ್ಫ್ ಕೌನ್ಸಿಲ್‌ನಲ್ಲಿ, ಮುಸ್ಲಿಮೇತರ ಸದಸ್ಯರ ಸಂಖ್ಯೆ 4 ಮೀರಬಾರದು. ರಾಜ್ಯ ವಕ್ಫ್ ಮಂಡಳಿಗಳಲ್ಲಿ, ಮುಸ್ಲಿಮೇತರ ಸದಸ್ಯರು ಸಂಖ್ಯೆ 3 ಮೀರಬಾರದು ಎಂದು ನಿರ್ದೇಶಿಸಿದೆ.
ಆದರೆ, ವಕ್ಫ್ ಆಸ್ತಿಗಳ ನೋಂದಣಿಗೆ ಇರುವ ಅವಶ್ಯಕತೆಯನ್ನು ತಡೆಹಿಡಿಯಲು ನ್ಯಾಯಾಲಯ ನಿರಾಕರಿಸಿದೆ , ಏಕೆಂದರೆ ಈ ಸೆಕ್ಷನ್‌ ಹಿಂದಿನ ಕಾನೂನಿನಲ್ಲಿಯೂ ಇತ್ತು. ಇದು ಹೊಸದೇನಲ್ಲ ಎಂದು ಅದು ಸ್ಪಷ್ಟಪಡಿಸಿದೆ. 1995ರಿಂದ 2013 ರವರೆಗೆ ನೋಂದಣಿ ಅಸ್ತಿತ್ವದಲ್ಲಿದೆ. ಆದ್ದರಿಂದ ನೋಂದಣಿ ಹೊಸದಲ್ಲ ಎಂದು ಹೇಳಿದೆ.

ಅಲ್ಲದೆ, ಸುದೀರ್ಘ ಕಾಲ ಧಾರ್ಮಿಕ ಅಥವಾ ದತ್ತಿ ಚಟುವಟಿಕೆಗಳಿಗೆ ಬಳಲಸಾದ – ʼಬಳಕೆಯಿಂದಾದ ವಕ್ಫ್‌ʼ (ವಕ್ಫ್‌ ಬೈ ಯುಸರ್ಸ್‌) ಎಂಬುದನ್ನು ಅಳಿಸಿ ಹಾಕಲು ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ಪೀಠವು ತಡೆ ನೀಡಲಿಲ್ಲ. ಆದರೆ, ಬಳಕೆಯಿಂದಾದ ವಕ್ಫ್‌ಗೆ (ವಕ್ಫ್‌ ಬೈ ಯುಸರ್ಸ್‌) ಮಧ್ಯಂತರ ರಕ್ಷಣೆ ನೀಡಿದೆ.
ತಾನು ನೀಡಿರುವುದು ಮೇಲ್ನೋಟದ ಅಭಿಪ್ರಾಯ ಎಂದು ಹೇಳಿರುವ ನ್ಯಾಯಾಲಯ ಕಾಯಿದೆಯ ಸಿಂಧುತ್ವ ಪ್ರಶ್ನಿಸಿ ಮುಂದಿನ ವಿಚಾರಣೆ ವೇಳೆ ಪಕ್ಷಕಾರರು ಮಂಡಿಸುವ ವಾದಗಳಿಗೆ ತಡೆ ಇರುವುದಿಲ್ಲ ಎಂದು ಹೇಳಿದೆ.
ವಕ್ಫ್ ತಿದ್ದುಪಡಿ ಕಾಯಿದೆ ಮುಸ್ಲಿಮರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಿವಿಧ ಅರ್ಜಿಗಳು ಸಲ್ಲಿಕೆಯಾಗಿದ್ದವು. ವಿವಿಧ ವ್ಯಕ್ತಿಗಳು, ರಾಜಕೀಯ ಪಕ್ಷಗಳು ನ್ಯಾಯಾಲಯದ ಮೊರೆ ಹೋಗಿದ್ದರು. ಕಾಯಿದೆ ಸಂಬಂಧ ಮಧ್ಯಂತರ ಪರಿಹಾರ ಕೋರಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು.

ಪ್ರಮುಖ ಸುದ್ದಿ :-   ಮೊದಲು ಹಾಲಿನಲ್ಲಿ ನಿದ್ದೆ ಮಾತ್ರೆ...ನಂತರ ಹಾಸಿಗೆ ಮೇಲೆ ವಿಷದ ಹಾವು ! ಗಂಡನ ಕೊಲೆಗೆ ಪತ್ನಿಯ ಭಯಾನಕ ಸಂಚು...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement