3ನೇ ಮಹಡಿಯಿಂದ ಬಿದ್ದರೂ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ ; ವೀಡಿಯೊ ವೈರಲ್‌

ಜೋಧ್ಪುರ : ಮೂರನೇ ಮಹಡಿಯಿಂದ ಬಿದ್ದರೂ 25 ವರ್ಷದ ಒಬ್ಬ ಯುವ ವ್ಯಾಪಾರಿಯೊಬ್ಬರು ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ರಾಜಸ್ತಾನದ ಜೋಧ್ಪುರದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಈ ಯುವಕನ ಕಾಲು ಮೂಳೆ ಮುರಿದಿದೆ ಎಂದು ಹೇಳಲಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಘಟನೆ ಕೆಲದಿನಗಳ ಹಿಂದೆ ಜೋಧ್ಪುರದ ಒಂದು ಕಟ್ಟಡದಲ್ಲಿ ಸಂಭವಿಸಿದೆ. ನಜೀರ್ ಎಂಬ ಯುವಕ, ಮೂರನೇ ಮಹಡಿಯ ಬಾಲ್ಕನಿಯಲ್ಲಿ ನಿಂತು ಬಟ್ಟೆಗಳ ಬಂಡಲ್‌ ಅನ್ನು ಪರಿಶೀಲಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಅವರು ಬಟ್ಟೆಯ ಬಂಡಲ್ ಅನ್ನು ಪರಿಶೀಲಿಸುತ್ತಿದ್ದರು. ಇದ್ದಕ್ಕಿದ್ದಂತೆ, ಸಮತೋಲನ ಕಳೆದುಕೊಂಡು ಮೂರನೇ ಮಹಡಿಯಿಂದ ಕೆಳಗೆ ಬಿದ್ದರು. ಅವರು ಕೆಳಗೆ ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯ ಮೇಲೆ ಬಿದ್ದರು. ಇದು ಅವರಿಗೆ ಪ್ರಾಣಾಪಾಯದಿಂದ ಪಾರು ಮಾಡಿತು. ಇಂಡಿಯಾ ಟುಡೇ ವರದಿಯ ಪ್ರಕಾರ, ನಜೀರ್ ಅವರ ಪಾದದ ಮೂಳೆ ಮುರಿದಿದೆ.
ಸಿಸಿಟಿವಿ ದೃಶ್ಯಗಳಲ್ಲಿ ನಜೀರ್ ಬಟ್ಟೆಯ ಬಂಡಲ್ ಪರಿಶೀಲಿಸುವಾಗ ಹಿಂದಕ್ಕೆ ಹೆಜ್ಜೆ ಇಡುವುದನ್ನು ನೋಡಬಹುದು. ಅವರು ಹಿಂದುಗಡೆ ಕಟ್ಟೆಯಿದೆ ಅಥವಾ ಕಬ್ಬಿಣದ ಜಾಲರಿಯಿದೆ ಎಂಬ ತಪ್ಪು ಕಲ್ಪನೆಯಲ್ಲಿಯೇ ಹಿಂದಕ್ಕೆ ಹೋದಂತೆ ಭಾಸವಾಗುತ್ತದೆ.

ಆದರೆ ಸಮತೋಲನ ಕಳೆದುಕೊಂಡು ನೇರವಾಗಿ ಮೂರು ಅಂತಸ್ತು ಕೆಳಗೆ ಬಿದ್ದಿದ್ದಾರೆ. ಅವರು ಕೂಗಿಕೊಂಡಿದ್ದು ತಕ್ಷಣವೇ ಅಕ್ಕಪಕ್ಕದವರು ಓಡಿ ಬಂದು ಸಹಾಯ ಮಾಡಿದ್ದಾರೆ. ಬಾಲ್ಕನಿಯ ಹತ್ತಿರ ಒಂದು ಸಣ್ಣ ಕೋಣೆ ಇದ್ದು, ಅದು ಬಟ್ಟೆಗಳ ಗೋದಾಮಾಗಿ ಬಳಸಲಾಗುತ್ತಿತ್ತೆಂದು ಸಿಸಿಟಿವಿ ದೃಶ್ಯಗಳಿಂದ ಗೊತ್ತಾಗಿದೆ.
ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ, ಕಟ್ಟಡಗಳ ಸುರಕ್ಷತಾ ವ್ಯವಸ್ಥೆಗಳು ಸರಿಯಾಗಿ ಇಲ್ಲದ ಕಾರಣ ಹಲವರು ಬಿಲ್ಡರ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement