ನವದೆಹಲಿ: ಗುರುವಾರ ಭಾರತದ ಅತ್ಯಂತ ಗೌರವಾನ್ವಿತ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಉದ್ಯಮ ಲೀಡರ್ಗಳಲ್ಲಿ ಒಬ್ಬರಾದ ರತನ್ ಟಾಟಾ ಅವರ ಮೊದಲ ಪುಣ್ಯತಿಥಿ. ರತನ್ ಟಾಟಾ 1991 ರಲ್ಲಿ ಟಾಟಾ ಸ್ಟೀಲ್ನ ಅಧ್ಯಕ್ಷರಾದರು ಮತ್ತು ಅದನ್ನು ಜಾಗತಿಕ ಬ್ರ್ಯಾಂಡ್ ಮಾಡುವಲ್ಲಿ ಯಶಸ್ವಿಯಾದರು. ಭಾರತದ ಅತ್ಯಂತ ಹಳೆಯ ಉದ್ಯಮ ಸಂಸ್ಥೆಗಳಲ್ಲಿ ಒಂದನ್ನು ಜಾಗತೀಕರಣಕ್ಕೆ ಒಳಪಡುವಲ್ಲಿ ಮತ್ತು ಆಧುನೀಕರಿಸುವಲ್ಲಿ ರತನ್ ಟಾಟಾ ಪ್ರಮುಖ ಪಾತ್ರ ವಹಿಸಿದ್ದಲ್ಲದೆ, ಕಂಪನಿಯನ್ನು ಜಾಗತಿಕವಾಗಿ ವಿಸ್ತರಿಸಲು ಕೆಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡರು. ರತನ್ ಟಾಟಾ ತೆಗೆದುಕೊಂಡು ಕೆಲವು ಮಹತ್ವದ ನಿರ್ಧಾರಗಳು ಟಾಟಾದ ಜಾಗತಿಕ ಹೆಜ್ಜೆಗುರುತನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರ ಬಗ್ಗೆ ಅವರ ಒಂದು ವರ್ಷದ ಪುಣ್ಯ ಸ್ಮರಣೆ ಸಂದರ್ಭದಲ್ಲಿ ಒಂದು ಅವಲೋಕನ.
ಟೆಟ್ಲಿ ಟೀ (2000)
ಇದು ಭಾರತೀಯ ವ್ಯಾಪಾರ ಇತಿಹಾಸದಲ್ಲಿ ಒಂದು ಮಹತ್ವದ ಕ್ಷಣವಾಗಿತ್ತು. ಟಾಟಾ ಟೀ (ಈಗ ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್) ಬ್ರಿಟಿಷ್ ಚಹಾ ಕಂಪನಿ ಟೆಟ್ಲಿಯನ್ನು $450 ಮಿಲಿಯನ್ಗೆ ಸ್ವಾಧೀನಪಡಿಸಿಕೊಂಡಿತು ಹಾಗೂ ತಕ್ಷಣವೇ ವಿಶ್ವದ ಅತಿದೊಡ್ಡ ಚಹಾ ಕಂಪನಿಗಳಲ್ಲಿ ಒಂದಾಯಿತು. ರತನ್ ಟಾಟಾ ಅವರ ಜಾಗತಿಕ ವಿಸ್ತರಣಾ ತಂತ್ರವನ್ನು ಪ್ರಾರಂಭಿಸಿದರು. ಇದು ಭಾರತೀಯ ಕಂಪನಿಯಿಂದ ನಡೆದ ಮೊದಲ ಜಾಗತಿಕ ಕಂಪನಿಯನ್ನು ಖರೀದಿಸಿದ ಪ್ರಮುಖ ಅಂತಾರಾಷ್ಟ್ರೀಯ ಖರೀದಿಯಲ್ಲಿ ಒಂದಾಗಿದೆ.
ಕೋರಸ್ ಸ್ಟೀಲ್ (2007)
$12.9 ಶತಕೋಟಿ ಮೌಲ್ಯದ, ಬ್ರಿಟನ್ ಮೂಲದ ಉಕ್ಕು ಉತ್ಪಾದಕ ಕೋರಸ್ ಕಂಪನಿಯನ್ನು ಟಾಟಾ ಕಂಪನಿ ಖರೀದಿಸಿತು. ಖರೀದಿಯು ಯಾವುದೇ ಭಾರತೀಯ ಕಂಪನಿಯು ಈವರೆಗೆ ಮಾಡಿದ ಅತಿದೊಡ್ಡ ಖರೀದಿಯಲ್ಲಿ ಒಂದಾಗಿದೆ. ಇದು ತಕ್ಷಣವೇ ಟಾಟಾ ಸ್ಟೀಲ್ ಅನ್ನು ಜಾಗತಿಕವಾಗಿ ಟಾಪ್ -10 ಉಕ್ಕು ಉತ್ಪಾದಕರಲ್ಲಿ ಒಂದನ್ನಾಗಿ ಮಾಡಿತು, ವಿಶ್ವ ದರ್ಜೆಯ ಕೈಗಾರಿಕಾ ಸಮೂಹವನ್ನು ರಚಿಸುವ ರತನ್ ಟಾಟಾ ಅವರ ದೃಷ್ಟಿಕೋನವನ್ನು ಈ ಖರೀದಿ ನಿರ್ಧಾರವು ಪ್ರದರ್ಶಿಸಿತು.
ಜಾಗ್ವಾರ್ ಲ್ಯಾಂಡ್ ರೋವರ್ (JLR) (2008)
ರತನ್ ಟಾಟಾ ಅವರು 2008ರಲ್ಲಿ ಔಷಾರಾಮಿ ಕಾರು ತಯಾರಿಕೆ ಕಂಪನಿಯಾದ ಜಾಗ್ವಾರ್ ಲ್ಯಾಂಡ್ ರೋವರ್ (JLR)ಘಟಕವನ್ನು ವಿಶ್ವ ವಿಖ್ಯಾತ ಫೋರ್ಡ್ ಕಂಪನಿಯಿಂದ $2.3 ಶತಕೋಟಿಗೆ ಖರೀದಿಸಿದರು. ವಿಶ್ವ ವಿಖ್ಯಾತ ಕಾರು ತಯಾರಕ ಜಾಗ್ವಾರ್ ಲ್ಯಾಂಡ್ ರೋವರ್ ಖರೀದಿಯು ಟಾಟಾ ಮೋಟಾರ್ಸ್ಗೆ ಒಂದು ಪ್ರಮುಖ ಕ್ಷಣವಾಗಿತ್ತು. ಈ ಒಪ್ಪಂದವು ಗಮನಾರ್ಹ ಯಶಸ್ಸನ್ನು ಸಾಬೀತುಪಡಿಸಿತು, ಐಕಾನಿಕ್ ಬ್ರಿಟಿಷ್ ಐಷಾರಾಮಿ ಬ್ರ್ಯಾಂಡ್ಗಳನ್ನು ಪುನರುಜ್ಜೀವನಗೊಳಿಸಿತು ಮತ್ತು ಟಾಟಾ ಮೋಟಾರ್ಸ್ ಅನ್ನು ಆಟೋಮೋಟಿವ್ ವಲಯದಲ್ಲಿ ಪ್ರಬಲ ಜಾಗತಿಕ ಕಂಪನಿಯಾಗಿ ಪರಿವರ್ತಿಸಿತು.
ಡೇವೂ ವಾಣಿಜ್ಯ ವಾಹನಗಳು (2004)
ಟಾಟಾ ಮೋಟಾರ್ಸ್ ದಕ್ಷಿಣ ಕೊರಿಯಾದಲ್ಲಿ ಡೇವೂ ಅವರ ವಾಣಿಜ್ಯ ವಾಹನ ಘಟಕವನ್ನು $102 ಮಿಲಿಯನ್ಗೆ ಖರೀದಿಸಿತು. ಈ ಕ್ರಮವು ಮುಂದುವರಿದ ಟ್ರಕ್-ತಯಾರಿಕೆ ತಂತ್ರಜ್ಞಾನ ಮತ್ತು ಹೊಸ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಪ್ರವೇಶವನ್ನು ಒದಗಿಸುವ ಮೂಲಕ ಜಾಗತಿಕ ವಾಣಿಜ್ಯ ವಾಹನ ಮಾರುಕಟ್ಟೆಯಲ್ಲಿ ಟಾಟಾದ ಪಾಲ್ಗೊಳ್ಳುವಿಕೆಯನ್ನು ಗಮನಾರ್ಹವಾಗಿ ಹೆಚ್ಚಿಸಿತು.
ಸ್ಟಾರ್ಬಕ್ಸ್ ಜೊತೆ ಜಂಟಿ ಉದ್ಯಮ (2012)
ಒಂದು ಮಹತ್ವದ ಒಪ್ಪಂದದಲ್ಲಿ, ಟಾಟಾ ಗ್ಲೋಬಲ್ ಬೆವರಜಸ್ (ಈಗ ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್) ಭಾರತದಲ್ಲಿ ಸ್ಟಾರ್ಬಕ್ಸ್ ಮಳಿಗೆಗಳನ್ನು ಪ್ರಾರಂಭಿಸಲು ಅಮೆರಿಕ ಮೂಲದ ಸ್ಟಾರ್ಬಕ್ಸ್ ಜೊತೆ ಜಂಟಿ ಉದ್ಯಮಕ್ಕೆ ಸಹಿ ಹಾಕಿತು. ಈ ಪಾಲುದಾರಿಕೆಯು ಟಾಟಾಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಭಾರತೀಯ ಕಾಫಿ ಚಿಲ್ಲರೆ ಮಾರುಕಟ್ಟೆಯನ್ನು ಪ್ರವೇಶಿಸಲು ಅನುವು ಮಾಡಿಕೊಟ್ಟಿತು, ಇದು ನಂತರದ ವರ್ಷಗಳಲ್ಲಿ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ.
ಏರ್ ಇಂಡಿಯಾವನ್ನು ಮತ್ತೆ ತೆಕ್ಕೆಗೆ ತೆಗೆದುಕೊಂಡ ರತನ್
2021 ರಲ್ಲಿ ಟಾಟಾ ಕಂಪನಿಯು ಏರ್ ಇಂಡಿಯಾವನ್ನು ಮತ್ತೆ ಟಾಟಾ ಕಂಪನಿ ತೆಕ್ಕೆಗೆ ಸೇರಿಸಿಕೊಳ್ಳುವ ನಿರ್ಧಾರವು ಬ್ರ್ಯಾಂಡ್ನೊಂದಿಗಿನ ಅವರ ಭಾವನಾತ್ಮಕ ಸಂಪರ್ಕವನ್ನು ಪ್ರತಿಬಿಂಬಿಸುತ್ತದೆ. ಅದು ಭಾರತ ಸರ್ಕಾರದ ಬಿಡ್ನಲ್ಲಿ ಏರ್ ಇಂಡಿಯಾವನ್ನು ಖರೀದಿ ಮಾಡಿತು. ನಷ್ಟದಲ್ಲಿದ್ದ ಭಾರತದ ರಾಷ್ಟ್ರೀಯ ವಾಹಕವಾದ ಏರ್ ಇಂಡಿಯಾವನ್ನು ಪುನರುಜ್ಜೀವನಗೊಳಿಸುವ ಟಾಟಾ ಸಮೂಹದ ಪ್ರಯತ್ನವು ಕೇವಲ ವ್ಯವಹಾರದ ಕ್ರಮವಾಗಿರಲಿಲ್ಲ, ಬದಲಾಗಿ ಭಾರತದ ವಾಯುಯಾನ ಪರಂಪರೆಯನ್ನು ಪುನಃಸ್ಥಾಪಿಸುವ ಧ್ಯೇಯವಾಗಿತ್ತು.
ರತನ್ ಟಾಟಾ ಅವರು ಏರ್ ಇಂಡಿಯಾವನ್ನು ಮರಳಿ ಟಾಟಾ ತೆಕ್ಕೆಗೆ ತೆಗೆದುಕೊಳ್ಳುವ ನಿಟ್ಟನಲ್ಲಿ ವೈಯಕ್ತಿಕವಾಗಿ ಉದ್ಯೋಗಿ ಸಂಘಗಳು ಮತ್ತು ಏರ್ ಇಂಡಿಯಾ ಪಾಲುದಾರರೊಂದಿಗೆ ತೊಡಗಿಸಿಕೊಂಡರು, ಏರ್ ಇಂಡಿಯಾದ ಸುಗಮ ಪರಿವರ್ತನೆಯ ಬಗ್ಗೆ ಅವರಿಗೆ ಭರವಸೆ ನೀಡಿದರು.


ನಿಮ್ಮ ಕಾಮೆಂಟ್ ಬರೆಯಿರಿ