ಲಂಡನ್ : ʼರಾಜಕುಮಾರʼ ಪದವಿ ಕಳೆದುಕೊಂಡ ಬ್ರಿಟನ್ನಿನ ಕಿಂಗ್ ಚಾರ್ಲ್ಸ್ ಸಹೋದರ ಆಂಡ್ರ್ಯೂ ; ಕಾರಣವೇನೆಂದರೆ…

ಬ್ರಿಟನ್‌ನ ಕಿಂಗ್ ಚಾರ್ಲ್ಸ್ III ಅವರು ತಮ್ಮ ಕಿರಿಯ ಸಹೋದರ ಆಂಡ್ರ್ಯೂ ಅವರಿಂದ ರಾಜಕುಮಾರ (Prince) ಎಂಬ ಬಿರುದನ್ನು ಹಿಂಪಡೆದಿದ್ದು, ವಿಂಡ್ಸರ್ ನಿವಾಸದಿಂದ ಹೊರಹಾಕಿದ್ದಾರೆ ಎಂದು ಬಕಿಂಗ್‌ಹ್ಯಾಮ್ ಅರಮನೆ ಗುರುವಾರ ತಿಳಿಸಿದೆ.
ಜೆಫ್ರಿ ಎಪ್‌ಸ್ಟೀನ್ ಹಗರಣದ ಜೊತೆಗಿನ ಆಂಡ್ರ್ಯೂ ಅವರ ಸಂಪರ್ಕದಿಂದಾಗಿ ರಾಜಮನೆತನದಿಂದ ದೂರವಿಡಲು ಈ ಕ್ರಮ ಕೈಗೊಳ್ಳಲಾಗಿದೆ.
65 ವರ್ಷದ ಆಂಡ್ರ್ಯೂ, ಕಿಂಗ್ ಚಾರ್ಲ್ಸ್ ಅವರ ಕಿರಿಯ ಸಹೋದರ ಮತ್ತು ದಿವಂಗತ ಕ್ವೀನ್ ಎಲಿಜಬೆತ್ ಅವರ ಎರಡನೇ ಪುತ್ರ. ಲೈಂಗಿಕ ಅಪರಾಧಿ ಎಪ್‌ಸ್ಟೀನ್ ಜೊತೆಗಿನ ಸಂಬಂಧದಿಂದಾಗಿ ಅವರು ಇತ್ತೀಚಿನ ವರ್ಷಗಳಲ್ಲಿ ತೀವ್ರ ಒತ್ತಡ ಎದುರಿಸುತ್ತಿದ್ದರು.
ಈ ತಿಂಗಳ ಆರಂಭದಲ್ಲಿ, ಅವರಿಗೆ ನೀಡಲಾಗಿದ್ದ ಡ್ಯೂಕ್ ಆಫ್ ಯಾರ್ಕ್ ಎಂಬ ಬಿರುದನ್ನು ಬಳಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಲಾಗಿತ್ತು.
ಈಗ, ಚಾರ್ಲ್ಸ್ ಅವರು ಆಂಡ್ರ್ಯೂ ಅವರ ಎಲ್ಲಾ ಬಿರುದುಗಳನ್ನು ಹಿಂಪಡೆದಿದ್ದಾರೆ. ಇನ್ನು ಮುಂದೆ ಅವರನ್ನು ಕೇವಲ ಆಂಡ್ರ್ಯೂ ಮೌಂಟ್‌ಬ್ಯಾಟನ್ ವಿಂಡ್ಸರ್ ಎಂದು ಕರೆಯಲಾಗುತ್ತದೆ. ಅವರಿಗೆ ಪ್ರಿನ್ಸ್‌ ಎಂಬ ಬಿರುದು ಇರುವುದಿಲ್ಲ.

ನಿವಾಸದಿಂದ ಗೇಟ್‌ಪಾಸ್, ಹೊಸ ನೆಲೆ ಸ್ಯಾಂಡ್ರಿಂಗ್‌ಹ್ಯಾಮ್‌ನಲ್ಲಿ 
ಬಕಿಂಗ್‌ಹ್ಯಾಮ್ ಅರಮನೆಯ ಹೇಳಿಕೆಯ ಪ್ರಕಾರ, ಲಂಡನ್‌ನ ಪಶ್ಚಿಮದಲ್ಲಿರುವ ವಿಂಡ್ಸರ್ ಎಸ್ಟೇಟ್‌ನಲ್ಲಿನ ರಾಯಲ್ ಲಾಡ್ಜ್ ಭವನದ ಗುತ್ತಿಗೆಯನ್ನು (Lease) ಹಿಂದಿರುಗಿಸುವಂತೆ ಆಂಡ್ರ್ಯೂಗೆ ಔಪಚಾರಿಕ ನೋಟಿಸ್ ನೀಡಲಾಗಿದೆ. ಹೀಗಾಗಿ ಅವರು ಇಂಗ್ಲೆಂಡ್‌ನ ಪೂರ್ವ ಭಾಗದಲ್ಲಿರುವ ಸ್ಯಾಂಡ್ರಿಂಗ್‌ಹ್ಯಾಮ್ ಎಸ್ಟೇಟ್‌ನಲ್ಲಿನ ಪರ್ಯಾಯ ಖಾಸಗಿ ವಾಸಸ್ಥಳಕ್ಕೆ ಸ್ಥಳಾಂತರಗೊಳ್ಳಲಿದ್ದಾರೆ.
ಕ್ಯಾನ್ಸರ್‌ಗೆ ನಿಯಮಿತ ಚಿಕಿತ್ಸೆ ಪಡೆಯುತ್ತಿರುವ ಕಿಂಗ್‌ ಚಾರ್ಲ್ಸ್ ಅವರ ಈ ನಿರ್ಧಾರ, ಆಧುನಿಕ ಬ್ರಿಟಿಷ್ ಇತಿಹಾಸದಲ್ಲಿ ರಾಜಮನೆತನದ ಸದಸ್ಯರ ವಿರುದ್ಧ ಕೈಗೊಂಡಿರುವ ಅತ್ಯಂತ ಪ್ರಮುಖ ಕ್ರಮಗಳಲ್ಲಿ ಒಂದಾಗಿದೆ.

ಪ್ರಮುಖ ಸುದ್ದಿ :-   ವಿಡಿಯೊ | ವಿಶ್ವಕಪ್ ವಿಜಯೋತ್ಸವ ಪೋಡಿಯಂನಲ್ಲಿ ಟ್ರಂಪ್ ವರ್ತನೆ ಚರ್ಚೆಗೆ ಗ್ರಾಸ ; ಪರಿಸ್ಥಿತಿ ನಿಭಾಯಿಸಿದ ಫಿಫಾ ಮುಖ್ಯಸ್ಥ

“ಸಂತ್ರಸ್ತರ ಜೊತೆ ನಮ್ಮ ಸಹಾನುಭೂತಿ”: ಅರಮನೆ ಹೇಳಿಕೆ
“ತಮ್ಮ ವಿರುದ್ಧದ ಆರೋಪಗಳನ್ನು ಅವರು ನಿರಾಕರಿಸುತ್ತಾ ಬಂದಿದ್ದರೂ, ಈ ಕ್ರಮಗಳು ಅಗತ್ಯವೆಂದು ಪರಿಗಣಿಸಲಾಗಿದೆ” ಎಂದು ಅರಮನೆಯ ಹೇಳಿಕೆ ತಿಳಿಸಿದೆ. “ಯಾವುದೇ ರೀತಿಯ ದೌರ್ಜನ್ಯದ ಸಂತ್ರಸ್ತರು ಮತ್ತು ಬದುಕುಳಿದವರ ಬಗ್ಗೆ ಆಲೋಚನೆಗಳು ಮತ್ತು ಪರಮಾನುಕಂಪ ಇರುತ್ತದೆ ಮತ್ತು ಅದು ಮುಂದುವರಿಯುತ್ತದೆ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತಾರೆ” ಎಂದು ಅರಮನೆ ತಿಳಿಸಿದೆ.
1980 ರ ದಶಕದ ಆರಂಭದಲ್ಲಿ ಫಾಕ್ಲ್ಯಾಂಡ್ಸ್ ಯುದ್ಧದಲ್ಲಿ ಸೇವೆ ಸಲ್ಲಿಸಿದ್ದ ಆಂಡ್ರ್ಯೂ ಒಮ್ಮೆ ಜನಪ್ರಿಯ ನೌಕಾಧಿಕಾರಿಯಾಗಿದ್ದರು.
ಆದರೆ, ಲೈಂಗಿಕ ದುರ್ವರ್ತನೆಯ ಆರೋಪಗಳ ನಡುವೆ ಅವರು 2011 ರಲ್ಲಿ ಯುಕೆ ವ್ಯಾಪಾರ ರಾಯಭಾರಿ ಪಾತ್ರದಿಂದ, 2019 ರಲ್ಲಿ ಎಲ್ಲಾ ರಾಜಮನೆತನದ ಕರ್ತವ್ಯಗಳಿಂದ ಮತ್ತು 2022 ರಲ್ಲಿ ಮಿಲಿಟರಿ ಸಂಬಂಧಗಳು ಹಾಗೂ ರಾಜಮನೆತನದ ಪೋಷಕತ್ವಗಳಿಂದ ಕೆಳಗಿಳಿಯಲು ಒತ್ತಾಯಿಸಲ್ಪಟ್ಟಿದ್ದರು. ಅವರು ಯಾವಾಗಲೂ ಆರೋಪಗಳನ್ನು ನಿರಾಕರಿಸುತ್ತಾ ಬಂದಿದ್ದಾರೆ.

ವರ್ಜೀನಿಯಾ ಗಿಯುಫ್ರೆ (ಏಪ್ರಿಲ್‌ನಲ್ಲಿ ನಿಧನರಾಗಿದ್ದಾರೆ) ಅವರು ಹದಿಹರೆಯದಲ್ಲಿದ್ದಾಗ ತಮ್ಮನ್ನು ಲೈಂಗಿಕವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿ ದಾಖಲಿಸಿದ್ದ ಮೊಕದ್ದಮೆಯನ್ನು ಅವರು 2022 ರಲ್ಲಿ ಇತ್ಯರ್ಥಪಡಿಸಿದ್ದರು. ಇತ್ತೀಚೆಗೆ ಅವರ ಆತ್ಮಚರಿತ್ರೆ ಬಿಡುಗಡೆಯಾದಾಗ ಈ ವಿಷಯ ಮತ್ತೆ ಮುನ್ನಲೆಗೆ ಬಂದಿದೆ.
ಚಾರ್ಲ್ಸ್ ನಿರ್ಧಾರಕ್ಕೆ ಕುಟುಂಬದ ಬೆಂಬಲ:
ಈ ನಿರ್ಧಾರವನ್ನು ಕಿಂಗ್ ಚಾರ್ಲ್ಸ್ ಕೈಗೊಂಡಿದ್ದರೂ, ಸಿಂಹಾಸನದ ಉತ್ತರಾಧಿಕಾರಿ ಪ್ರಿನ್ಸ್ ವಿಲಿಯಂ ಸೇರಿದಂತೆ ಇಡೀ ಕುಟುಂಬದ ಬೆಂಬಲ ಅವರಿಗೆ ಇದೆ ಎಂದು ಅರಮನೆಯ ಮೂಲಗಳು ತಿಳಿಸಿವೆ. ಆಂಡ್ರ್ಯೂ ಅವರು ತಮ್ಮ 30-ಕೋಣೆಗಳ ಭವನಕ್ಕೆ ಎರಡು ದಶಕಗಳಿಂದ ಬಾಡಿಗೆ ಪಾವತಿಸಿಲ್ಲ ಎಂಬ ವರದಿಗಳ ನಂತರ, ವಿಂಡ್ಸರ್‌ನಿಂದ ಅವರನ್ನು ದೂರವಿರಿಸುವ ನಿರ್ಧಾರ ಮಹತ್ವ ಪಡೆದಿದೆ.

ಪ್ರಮುಖ ಸುದ್ದಿ :-   ಅರ್ಜೆಂಟೀನಾ ಕನಸು ಭಗ್ನ; 107ನೇ ನಿಮಿಷದ ಗೋಲಿನಿಂದ 2026ರ ಫೀಫಾ ವಿಶ್ವಕಪ್ ಚಾಂಪಿಯನ್ ಆದ ಸ್ಪೇನ್‌

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement