ಬೆಂಗಳೂರು : ಅಪಾರ್ಟ್‌ಮೆಂಟ್ ಲಿಫ್ಟ್‌ನಲ್ಲಿ ಸಾಕು ನಾಯಿಯನ್ನು ನೆಲಕ್ಕೆ ಬಡಿದು ಕೊಂದ ಮನೆಕೆಲಸದವಳು…!

ಬೆಂಗಳೂರು: ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಮಹಿಳೆಯೊಬ್ಬರು ಸಾಕು ನಾಯಿಯನ್ನು ಅಪಾರ್ಟ್‌ಮೆಂಟ್ ಲಿಫ್ಟ್‌ನ ನೆಲಕ್ಕೆ ಬಡಿದು ಭೀಕರ ಕೊಂದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಪುಟ್ಟ ನಾಯಿಮರಿಯನ್ನು ನೋಡಿಕೊಳ್ಳುವುದಕ್ಕೆಂದೇ ಕೆಲಸಕ್ಕಿದ್ದ ಮಹಿಳೆ ಅಮಾನವೀಯ ಕೃತ್ಯ ಎಸಗಿದ್ದು, ಆಕೆಯ ವಿರುದ್ಧ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನವೆಂಬರ್ 1 ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ಲಿಫ್ಟ್ ಒಳಗೆ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯು ಶುಕ್ರವಾರ ಉತ್ತರ ಬೆಂಗಳೂರಿನ ಬಾಗಲೂರು ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಲಿಫ್ಟ್‌ನ ಬಾಗಿಲು ಮುಚ್ಚುತ್ತಿದ್ದಂತೆ, ಮನೆಕೆಲಸದಾಕೆ ಪುಷ್ಪಲತಾ ಎಂಬವಳು ಕೊರಳಿಗೆ ಕಟ್ಟಿದ್ದ ಬೆಲ್ಟ್ ಹಿಡಿದು ಎತ್ತಿ ನಾಯಿಯನ್ನು ಜೋರಾಗಿ ನೆಲಕ್ಕೆ ಬಡಿದು ಸಾಯಿಸಿದ್ದಾಳೆ.

ಮಾಲೀಕರಿಗೆ ಸುಳ್ಳು ಹೇಳಿದ್ದ ಆರೋಪಿ
ಎಫ್‌ಐಆರ್ (FIR) ಪ್ರಕಾರ, ನಾಯಿಯ ಮಾಲೀಕರು ತಮ್ಮ ನಾಲ್ಕು ವರ್ಷದ ಸಾಕು ನಾಯಿಯ ಆರೈಕೆಗಾಗಿ ಮಾಸಿಕ ₹23,000 ಸಂಬಳಕ್ಕೆ ಸೆಪ್ಟೆಂಬರ್ 11 ರಂದು ಪುಷ್ಪಲತಾಳನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದರು. ನಾಯಿ ಸಾವಿಗೀಡಾದ ವಿಷಯ ತಿಳಿದ ನಂತರ ಮಾಲೀಕರು ಪುಷ್ಪಲತಾಳನ್ನು ಪ್ರಶ್ನಿಸಿದಾಗ, ಲಿಫ್ಟ್​​ನಿಂದ ಬಿದ್ದು ಗೂಫಿ ಸತ್ತುಹೋಗಿದೆ ಎಂದು ಸುಳ್ಳು ಹೇಳಿದ್ದಳು. ಆದರೆ ನಂತರ, ಅಪಾರ್ಟ್‌ಮೆಂಟ್‌ನ ಸಿಸಿಟಿವಿ ತುಣುಕನ್ನು ಪರಿಶೀಲಿಸಿದಾಗ ಸತ್ಯ ಬಯಲಾಗಿದೆ. ತಕ್ಷಣವೇ, ಪ್ರಾಣಿಗಳ ಮೇಲಿನ ದೌರ್ಜನ್ಯಕ್ಕಾಗಿ ದೂರು ದಾಖಲಿಸಲಾಯಿತು ಮತ್ತು ಎಫ್‌ಐಆರ್ ನೋಂದಾಯಿಸಲಾಯಿತು. ಪೊಲೀಸರು ಪುಷ್ಪಲತಾಳ ಬಂಧನವನ್ನು ದೃಢಪಡಿಸಿದ್ದು, ಈ ಕುರಿತು ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement