ಕೊಡಗು | ರಾತ್ರಿಯಿಡೀ ಕಾಫಿ ಎಸ್ಟೇಟ್‌ನಲ್ಲಿ ಕಾಣೆಯಾಗಿದ್ದ 2 ವರ್ಷದ ಮಗುವನ್ನು ಪತ್ತೆ ಹಚ್ಚಿದ ಸಾಕು ನಾಯಿ…!

ಕೊಡಗಿನ ಪೊನ್ನಂಪೇಟೆ ತಾಲೂಕಿನ ಕೊಂಗಣ ಗ್ರಾಮದಲ್ಲಿ ನಾಪತ್ತೆಯಾಗಿದ್ದ ಎರಡು ವರ್ಷದ ಮಗುವೊಂದನ್ನುವಮರುದಿನ ಸಾಕು ನಾಯಿ ಪತ್ತೆ ಮಾಡಿದೆ ಎಂದು ವರದಿಯಾಗಿದೆ. ಎಸ್ಟೇಟ್ ಮನೆಯಿಂದ ಕಾಣೆಯಾಗಿದ್ದ ಎರಡು ವರ್ಷದ ಹೆಣ್ಣು ಮಗು, ಅರಣ್ಯ ಇಲಾಖೆಯ ಸಿಬ್ಬಂದಿ, ಸಾಕಿದ ನಾಯಿ ಮತ್ತು ಇತರ ಗ್ರಾಮಸ್ಥರ ನಿರಂತರ ಪ್ರಯತ್ನದ ನಂತರ ಪತ್ತೆಯಾಗಿ ಪೋಷಕರ ಮಡಿಲು ಸೇರಿದೆ.  ಅರಣ್ಯದಂಚಿನಲ್ಲಿರುವ ಕೊಂಗನ ಗ್ರಾಮದಲ್ಲಿ … Continued

ಬೆಂಗಳೂರು : ಅಪಾರ್ಟ್‌ಮೆಂಟ್ ಲಿಫ್ಟ್‌ನಲ್ಲಿ ಸಾಕು ನಾಯಿಯನ್ನು ನೆಲಕ್ಕೆ ಬಡಿದು ಕೊಂದ ಮನೆಕೆಲಸದವಳು…!

ಬೆಂಗಳೂರು: ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಮಹಿಳೆಯೊಬ್ಬರು ಸಾಕು ನಾಯಿಯನ್ನು ಅಪಾರ್ಟ್‌ಮೆಂಟ್ ಲಿಫ್ಟ್‌ನ ನೆಲಕ್ಕೆ ಬಡಿದು ಭೀಕರ ಕೊಂದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಪುಟ್ಟ ನಾಯಿಮರಿಯನ್ನು ನೋಡಿಕೊಳ್ಳುವುದಕ್ಕೆಂದೇ ಕೆಲಸಕ್ಕಿದ್ದ ಮಹಿಳೆ ಅಮಾನವೀಯ ಕೃತ್ಯ ಎಸಗಿದ್ದು, ಆಕೆಯ ವಿರುದ್ಧ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನವೆಂಬರ್ 1 … Continued

ರತನ್ ಟಾಟಾ 10,000 ಕೋಟಿ ರೂ. ಆಸ್ತಿಯ ಉಯಿಲು(Will) ; ಆಸ್ತಿಯಲ್ಲಿ ಸಾಕು ನಾಯಿಗಳು, ಬಟ್ಲರ್‌, ಅಡುಗೆಯವನಿಗೂ ಪಾಲು….!

ಮುಂಬೈ: ಭಾರತದ ರಾಷ್ಟ್ರೀಯ ಐಕಾನ್‌ ಕೈಗಾರಿಕೋದ್ಯಮಿ ರತನ್ ಟಾಟಾ ತಮ್ಮ ಉಯಿಲಿನಲ್ಲಿ ತಮ್ಮ ಪ್ರೀತಿಯ ನಾಯಿ ಟಿಟೊಗೂ ಪಾಲು ನೀಡಿದ್ದಾರೆ…!ಲೋಕೋಪಕಾರಿ ರತನ್‌ ಟಾಟಾ ಅವರ ಆಸ್ತಿ ಸುಮಾರು 10,000 ಕೋಟಿ ಎಂದು ಅಂದಾಜಿಸಲಾಗಿದೆ, ಅವರು ಹೆಚ್ಚಿನ ಪಾಲನ್ನು ಟಾಟಾ ಫೌಂಡೇಶನ್‌ಗೆ ನೀಡಿದ್ದರೆ, ತಮ್ಮ ಸಹೋದರ-ಸಹೋದರಿಯರಿಗೆ, ನಿಷ್ಠಾವಂತ ಮನೆಯ ಸಿಬ್ಬಂದಿಗೆ ಪಾಲನ್ನು ನೀಡಿದ್ದಾರೆ. ಜೊತೆಗೆ ತಮ್ಮ ಬಟ್ಲರ್ … Continued

ನೇತ್ರಾವತಿ ನದಿಗೆ ಹಾರಲು ಯತ್ನಿಸಿದ್ದ ಮಹಿಳೆಯ ಜೀವ ಉಳಿಸಿದ ಸಾಕು ನಾಯಿ….!

ಮಂಗಳೂರು : ನೇತ್ರಾವತಿ ನದಿಗೆ ಹಾರಿ ಪ್ರಾಣ ಬಿಡಲು ಯತ್ನಿಸಿದ ಮಹಿಳೆಯೊಬ್ಬರನ್ನು ಸಾಕುನಾಯಿ ರಕ್ಷಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಉಪ್ಪಿನಂಗಡಿ ಸಮೀಪದ ಪಿಲಿಗೂಡಿನ 36 ವರ್ಷದ ಮಹಿಳೆಯೊಬ್ಬರು ಪತಿಯೊಂದಿಗೆ ಜಗಳವಾಡಿದ ನಂತರ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯ ತಡೆಗೋಡೆ ಏರಿ ನದಿಗೆ ಹಾರಲು ಮುಂದಾದಾಗ ಅವರನ್ನೇ … Continued

ಕೊಡಗು : ಸಾಕು ನಾಯಿ ಕಚ್ಚಿದರೆ ಮಾಲೀಕರಿಗೆ ಜೈಲು, ದಂಡ ; ಪೊಲೀಸರ ವಾರ್ನಿಂಗ್‌

ಮಡಿಕೇರಿ : ನಾಯಿಗಳನ್ನು ಸಾಕುವ ಮನೆಯ ಮಾಲೀಕರಿಗೆ ಕೊಡಗು ಜಿಲ್ಲಾ ಪೊಲೀಸರು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಸಾಕು ನಾಯಿಗಳು ಜನರ ಮೇಲೆ ದಾಳಿ ಮಾಡಿದರೆ ಅದರ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಪೊಲೀಸರು, ಮನೆಯಲ್ಲಿ ನಾಯಿಗಳನ್ನು ಎಚ್ಚರಿಕೆಯಿಂದ ಸಾಕದೆ ಮನೆಗೆ ಬರುವವರ ಮೇಲೆ ದಾಳಿ ನಡೆಸಿದರೆ … Continued