ಇರುವೆಗಳ ಭಯದಿಂದ ಆತ್ಮಹತ್ಯೆ ಮಾಡಿಕೊಂಡ ಮಹಿಳೆ…!

ಹೈದರಾಬಾದ್ : ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ 25 ವರ್ಷದ ಮಹಿಳೆಯೊಬ್ಬರು ಇರುವೆಗಳ ಭಯದಿಂದ (ಮೈರ್ಮೆಕೊಫೋಬಿಯಾ) ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಈ ದುರಂತವು ನವೆಂಬರ್ 4 ರಂದು ಸಂಭವಿಸಿದೆ. 2022 ರಲ್ಲಿ ವಿವಾಹವಾಗಿದ್ದ ಮತ್ತು ಮೂರು ವರ್ಷದ ಮಗಳಿರುವ ಈ ಮಹಿಳೆ ಸೀಲಿಂಗ್ ಫ್ಯಾನ್‌ಗೆ ಸೀರೆಯಿಂದ ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಹಿಳೆಯು ಬಾಲ್ಯದಿಂದಲೂ ಇರುವೆಗಳ ಬಗ್ಗೆ ತೀವ್ರ ಭಯ (ಮೈರ್ಮೆಕೊಫೋಬಿಯಾ) ಹೊಂದಿದ್ದರು ಮತ್ತು ಈ ಹಿಂದೆ ತಮ್ಮ ತವರು ಪಟ್ಟಣವಾದ ಮಂಚೆರಿಯಾಲ್‌ನಲ್ಲಿರುವ ಆಸ್ಪತ್ರೆಯಲ್ಲಿ ಈ ಬಗ್ಗೆ ವೈದ್ಯಕೀಯ ಕೌನ್ಸೆಲಿಂಗ್ ಸಹ ಪಡೆದಿದ್ದರು ಎಂದು ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.

ಆತ್ಮಹತ್ಯೆ ಮಾಡಿಕೊಳ್ಳುವ ದಿನದಂದು, ಮಹಿಳೆಯು ಮಗಳನ್ನು ತಮ್ಮ ಸಂಬಂಧಿಕರ ಮನೆಯಲ್ಲಿ ಬಿಟ್ಟು ತಮ್ಮ ಮನೆಯನ್ನು ಸ್ವಚ್ಛಗೊಳಿಸಿದ ನಂತರ ಕರೆದುಕೊಂಡು ಹೋಗುವುದಾಗಿ ತಿಳಿಸಿ ಬಂದಿದ್ದರು. ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದ ಆಕೆಯ ಪತಿ ಸಂಜೆ ಮನೆಗೆ ಮರಳಿದಾಗ, ಮುಖ್ಯ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ನೆರೆಹೊರೆಯವರ ಸಹಾಯದಿಂದ ಬಾಗಿಲು ಒಡೆದು ಒಳಗೆ ಹೋದಾಗ, ಪತ್ನಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

ಪತ್ತೆಯಾದ ಆತ್ಮಹತ್ಯಾ ಪತ್ರ
ಘಟನಾ ಸ್ಥಳದಲ್ಲಿ ದೊರೆತ ಆತ್ಮಹತ್ಯಾ ಪತ್ರ ದರಕಿದ್ದು, ಅದರಲ್ಲಿ “ಶ್ರೀ, ನನ್ನನ್ನು ಕ್ಷಮಿಸು, ಈ ಇರುವೆಗಳೊಂದಿಗೆ ನಾನು ಬದುಕಲು ಸಾಧ್ಯವಿಲ್ಲ. (ಮಗಳನ್ನು) ಚೆನ್ನಾಗಿ ನೋಡಿಕೋ. ಎಚ್ಚರಿಕೆಯಿಂದಿರು. ಅನ್ನವರಂ, ತಿರುಪತಿಗೆ ರೂ. 1,116… ಎಲ್ಲಮ್ಮ ವಾಡಿ ಬಯ್ಯಂ (ಅನ್ನ ದಾನ) ಮರೆಯಬೇಡ” ಎಂದು ಬರೆಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
“ಆಕೆ ಮನೆ ಸ್ವಚ್ಛಗೊಳಿಸುವಾಗ ಇರುವೆಗಳನ್ನು ನೋಡಿ, ಭಯದಿಂದ ಈ ತೀವ್ರ ನಿರ್ಧಾರ ತೆಗೆದುಕೊಂಡಿರಬಹುದು,” ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಅಮೀನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement