ನಟಿ ರಶ್ಮಿಕಾ ಮಂದಣ್ಣ-ನಟ ವಿಜಯ ದೇವರಕೊಂಡ ಮದುವೆ ಫೆಬ್ರವರಿಯಲ್ಲಿ…?

ನವದೆಹಲಿ: ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ ದೇವರಕೊಂಡ ಅವರ ನಿಶ್ಚಿತಾರ್ಥದ ಬಗ್ಗೆ ಕಳೆದ ಹಲವು ತಿಂಗಳುಗಳಿಂದ ತೀವ್ರ ಕುತೂಹಲ ಮನೆ ಮಾಡಿದೆ. ಇದೀಗ ಅವರ ಮದುವೆ ಮತ್ತು ಇತರೆ ವಿವರಗಳ ಹೊಸ ಮಾಹಿತಿ ಹೊರಬಿದ್ದಿದೆ.
ವರದಿಗಳ ಪ್ರಕಾರ, ರಶ್ಮಿಕಾ ಮತ್ತು ವಿಜಯ ದೇವರಕೊಂಡ ಅವರ ವಿವಾಹವು ಫೆಬ್ರವರಿ 26, 2026 ರಂದು ನಡೆಯುವ ಸಾಧ್ಯತೆ ಇದೆ. ಈ ಮದುವೆಯು ಅದ್ದೂರಿಯಾಗಿ ಮತ್ತು ಅದೇ ಸಮಯದಲ್ಲಿ ಅತ್ಯಂತ ಆಪ್ತರಿಂದ ಮಾತ್ರ ಕೂಡಿರುವ ಖಾಸಗಿ ಸಮಾರಂಭವಾಗಿರಲಿದೆ ಎಂದು ವರದಿಗಳು ಸೂಚಿಸಿವೆ.
NDTV ಗೆ ರಶ್ಮಿಕಾ ಮತ್ತು ವಿಜಯ ಅವರ ಆಪ್ತ ಮೂಲಗಳು ಖಚಿತಪಡಿಸಿರುವಂತೆ, ಈ ಜೋಡಿ ಈಗಾಗಲೇ ಅಕ್ಟೋಬರ್ 3, 2025 ರಂದು ಅತ್ಯಂತ ಆಪ್ತ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಕಾರ್ಯಕ್ರಮವು ಕೇವಲ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಗುಟ್ಟಾಗಿ ನಡೆದಿದೆ ಎನ್ನಲಾಗಿದೆ.
ಇಂಡಿಯಾ ಟುಡೇ ವರದಿಯ ಪ್ರಕಾರ, ಮದುವೆಯ ಸಿದ್ಧತೆಗಳು ಈಗಾಗಲೇ ಶುರುವಾಗಿವೆ ಎಂದು ಆಪ್ತ ಮೂಲವೊಂದು ಬಹಿರಂಗಪಡಿಸಿದೆ. ಅಷ್ಟೇ ಅಲ್ಲದೆ, ವಿವಾಹದ ಸಂಪ್ರದಾಯಗಳು ದಕ್ಷಿಣ ಭಾರತ ಮತ್ತು ರಾಜಸ್ಥಾನಿ ಸಂಸ್ಕೃತಿಗಳ ಮಿಶ್ರಣವಾಗಿರಲಿವೆ ಎಂದೂ ಹೇಳಲಾಗಿದೆ. ಆದರೆ ಈ ಬಗ್ಗೆ ಇಬ್ಬರೂ ಅವರಿಬ್ಬರು ಇನ್ನೂ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಮುಖ ಸುದ್ದಿ :-   ತೃಣಮೂಲ ಬಂಡಾಯ ಸಂಸದರನ್ನು ಯಾಕೆ ಆಹ್ವಾನಿಸಿದ್ದೀರಿ ? : ಸರ್ವಪಕ್ಷ ಸಭೆಗೆ ಕೆಲಕಾಲ ಬಹಿಷ್ಕರಿಸಿದ ವಿಪಕ್ಷಗಳು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement