ತೇಜಸ್ ಯುದ್ಧ ವಿಮಾನಕ್ಕಾಗಿ ಜನರಲ್ ಎಲೆಕ್ಟ್ರಿಕ್ ಏರೋಸ್ಪೇಸ್ ಜೊತೆ ಎಚ್‌ ಎಎಲ್‌ ಮಹತ್ವದ ಒಪ್ಪಂದ

ನವದೆಹಲಿ: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಸಂಸ್ಥೆಯು ತನ್ನ ಮಹತ್ವಾಕಾಂಕ್ಷೆಯ ತೇಜಸ್ ಲಘು ಯುದ್ಧ ವಿಮಾನ (LCA) ಕಾರ್ಯಕ್ರಮಕ್ಕಾಗಿ ಅಮೆರಿಕ ಮೂಲದ ಜನರಲ್ ಎಲೆಕ್ಟ್ರಿಕ್ ಏರೋಸ್ಪೇಸ್ (General Electric Aerospace) ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದದ ಅಡಿಯಲ್ಲಿ, ಎಚ್‌ಎಎಲ್ (HAL) ಒಟ್ಟು 113 ಜೆಟ್ ಎಂಜಿನ್‌ಗಳನ್ನು ಖರೀದಿಸಲಿದೆ.
ಎಚ್‌ಎಎಲ್, 97 ತೇಜಸ್ MK-1A ಲಘು ಯುದ್ಧ ವಿಮಾನಗಳಿಗಾಗಿ ಅಗತ್ಯವಿರುವ F404-GE-IN20 ಎಂಜಿನ್‌ಗಳು ಮತ್ತು ಸಹಾಯಕ ಪ್ಯಾಕೇಜ್ ಅನ್ನು ಜನರಲ್ ಎಲೆಕ್ಟ್ರಿಕ್‌ನಿಂದ ಪಡೆಯಲಿದೆ. ಎಂಜಿನ್‌ಗಳ ಪೂರೈಕೆಯು 2027 ರಿಂದ ಪ್ರಾರಂಭವಾಗಲಿದ್ದು, 2032 ರೊಳಗೆ ಸಂಪೂರ್ಣ ಪೂರೈಕೆಯನ್ನು ಪೂರ್ಣಗೊಳಿಸಬೇಕಿದೆ.

ಭಾರತೀಯ ವಾಯುಪಡೆಯು (IAF) ಈಗಾಗಲೇ ಎಚ್‌ಎಎಲ್ ಗೆ ಎರಡು ಹಂತಗಳಲ್ಲಿ ತೇಜಸ್ MK-1A ವಿಮಾನಗಳಿಗಾಗಿ ಬೇಡಿಕೆ ಇಟ್ಟಿದೆ. ಮೊದಲ ಆರ್ಡರ್‌ 83 ವಿಮಾನಗಳಾಗಿದ್ದರೆ, ಎರಡನೆಯದ್ದು 97 ವಿಮಾನಗಳಿಗೆ ಆಗಿದೆ. ಕಳೆದ ಸೆಪ್ಟೆಂಬರ್‌ನಲ್ಲಿ, ರಕ್ಷಣಾ ಸಚಿವಾಲಯವು ವಾಯುಪಡೆಗೆ 97 ತೇಜಸ್ MK-1A ವಿಮಾನಗಳನ್ನು ಖರೀದಿಸಲು HAL ಜೊತೆ ₹62,370 ಕೋಟಿಗಳ ಬೃಹತ್ ಒಪ್ಪಂದವನ್ನು ಅಂತಿಮಗೊಳಿಸಿತ್ತು.
ತೇಜಸ್ ಒಂದು ಎಂಜಿನ್ ಹೊಂದಿರುವ, ಬಹು-ಪಾತ್ರ ನಿರ್ವಹಣಾ ಸಾಮರ್ಥ್ಯದ ಯುದ್ಧ ವಿಮಾನವಾಗಿದೆ. ತೇಜಸ್ Mk1A, ಇದು ಕಳೆದ ತಿಂಗಳು ತನ್ನ ಮೊದಲ ಹಾರಾಟವನ್ನು ಪೂರ್ಣಗೊಳಿಸಿದ್ದು, Mk1 ನ ಸುಧಾರಿತ ಆವೃತ್ತಿಯಾಗಿದೆ. ಈ ಎರಡೂ ವಿಮಾನಗಳಿಗೆ ಜೆನರಲ್‌ ಇಲೆಕ್ಟ್ರಿಕ್‌ (GE) ಏರೋಸ್ಪೇಸ್‌ನಿಂದ ಪೂರೈಸಲ್ಪಟ್ಟ ಎಂಜಿನ್‌ಗಳೇ ಶಕ್ತಿ ತುಂಬಿವೆ.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement