ವೀಡಿಯೊ…: 14 ಅಡಿ ಉದ್ದದ ಬೃಹತ್‌ ಕಾಳಿಂಗ ಸರ್ಪದ ರಕ್ಷಣೆ

ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ರಾಗಿಹೊಸಳ್ಳಿಯ ಮನೆಯೊಂದರ ತೋಟದಲ್ಲಿ ಎರಡು ದಿನಗಳ ಹಿಂದೆ ಬೃಹತ್‌ ಕಾಳಿಂಗ ಸರ್ಪವನ್ನು ಉರಗ ಪ್ರೇಮಿ ಕುಮಟಾದ ಪವನ್‌ ನಾಯ್ಕ ಸೆರೆ ಹಿಡಿದಿದ್ದಾರೆ.
ರಾಗಿಹೊಸಳ್ಳಿಯ ಪ್ರಶಾಂತ ಹೆಗಡೆ ಎಂಬವರ ಮನೆಯ ತೋಟಕ್ಕೆ ಹಾಕಲಾಗಿದ್ದ ಬಲೆಯ ಬೇಲಿಯಲ್ಲಿ ಈ ಕಾಳಿಂಗ ಸರ್ಪ ಎರಡು ದಿನಗಳಿಂದ ಓಡಾಡುತ್ತಿತ್ತು. ಇದನ್ನು ಕಂಡ ಮಾಲಕರು ಉರಗ ಪ್ರೇಮಿ ಪವನ್‌ ನಾಯ್ಕ ಅವರಿಗೆ ಮಾಹಿತಿ ನೀಡಿದ್ದಾರೆ. ಅವರು ಆಗಮಿಸಿ ಕಾಳಿಂಗ ಸರ್ಪವನ್ನು ಹಿಡಿದು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.

2 ದಿನದಿಂದ ಓಡಾಡುತ್ತಿದ್ದ ಕಾಳಿಂಗ ತೋಟಕ್ಕೆ ಕಾಡುಹಂದಿಯ ರಕ್ಷಣೆಗೆಂದು ಹಾಕಿದ ಬೆಲೆಯು ಸುತ್ತುವರಿದಿದ್ದರಿಂದ ಹೋಗುವ ದಾರಿ ಕಾಣದೆ ಅಲ್ಲಿಯೇ ಓಡಾಡುತ್ತಿದ್ದರಿಬಹುದು ಅಥವಾ ತೋಟದಲ್ಲಿ ಓಡಾಡಿಕೊಂಡಿರುವ ಕೆರೆ ಹಾವು, ನಾಗರ ಹಾವು ಹಾಗೂ ಇತರೆ ಹಾವಿನ ಬೇಟೆಗೆಂದೂ ಅದು ಕಾದು ಕುಳಿತಿರಬಹುದು ಎಂದು ಪವನ್‌ ನಾಯ್ಕ ತಿಳಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement