ವರ್ಲ್ಡ್‌ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ದಾಖಲಾದ ಪರ್ತಗಾಳಿ ಮಠದ ‘ಶ್ರೀರಾಮ ನಾಮ ಜಪ’ ಅಭಿಯಾನ

ಪರ್ತಗಾಳಿ (ಗೋವಾ): ಏಪ್ರಿಲ್‌ 17, 2024ರಂದು ಗೋಕರ್ಣ ಪರ್ತಗಾಳಿ ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮಿಜಿಯವರು ಆರಂಭಿಸಿದ ಶ್ರೀರಾಮ ನಾಮ ಜಪ ಅಭಿಯಾನವು ಹೊಸ ಇತಿಹಾಸವು ಗೋಕರ್ಣ ಪರ್ತಗಾಳಿ ಮಠದ ಪುಟದಲ್ಲಿ ದಾಖಲಿಸಿದೆ. ಶ್ರೀರಾಮ ನಾಮ ಜಪ 550 ದಿನಗಳಲ್ಲಿ 593 ಕೋಟಿ ಜಪ ಮಾಡುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್‌ ಹಾಗೂ ಏಷ್ಯಾ ಬುಕ್ ರೆಕಾರ್ಡ್‌, ವರ್ಲ್ಡ್‌ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ.
ಈ ಕುರಿತು ಏಷ್ಯಾ ಬುಕ್ ಆಫ್ ರೆಕಾರ್ಡ್‌ನ ಡಾ. ಚಿತ್ರಾ ಜೈನ್ ದಾಖಲೆಯ ಕುರಿತು ಮಾಹಿತಿ ನೀಡಿದ್ದಾರೆ. ಮೂರು ರಾಜ್ಯಗಳ ಜಪಕೇಂದ್ರಗಳಲ್ಲಿ ನಾವು ಪರೀಶೀಲನೆ ಮಾಡಿದ್ದೇವೆ. ಶ್ರೀರಾಮ ಜಯರಾಮ ಜಯಜಯ ರಾಮ ಎಂಬ ರಾಮ ತಾರಕ ಮಂತ್ರ ಭಕ್ತಿಯ ಹೊಸ ಸಂಚಲನ ಮೂಡಿಸಿದೆ. ಇಲ್ಲಿ ಶ್ರೀ ರಾಮ ಜಯರಾಮ ನಾಮ ಜಪವೂ ಹೊಸ ಕಂಪನವನ್ನೆ ಸೃಷ್ಟಿಸಿದೆ. 120 ಕೇಂದ್ರಗಳು, 104 ಸಹಕೇಂದ್ರಗಳಲ್ಲಿ 593 ಕೋಟಿ ಜಪದ ಪಠನೆ ಮಾಡುವ ಮೂಲಕ ಜಿಎಸ್‌ಬಿ ಸಮಾಜವೂ ಹೊಸ ದಾಖಲೆ ಸೃಷ್ಟಿಸಿದೆ ಎಂದು ಅವರು ಹೇಳಿದರು. ಪರಮೇಶ್ವರ ಯಾಗಲೆ ಪಾಟೀಲ ಆಗಮಿಸಿ ಶ್ರೀರಾಮ ನಾಮ ಜಪ ವರ್ಲ್ಡ್‌ ಬುಕ್‌ ಆಫ್‌ ರೆಕಾರ್ಡ್ಸ್‌ ದಾಖಲಾಗಿದೆ ಎಂದು ಶ್ರೀಗಳಿಗೆ ಪ್ರಮಾಣ ಪತ್ರ ನೀಡಿದರು.

ಪ್ರಮುಖ ಸುದ್ದಿ :-   ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ ನೇಮಕ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement