ಕಾರವಾರ: ಕಡಲತೀರದಲ್ಲಿ ಹೆಲಿಕಾಪ್ಟರ್ ಏರಿ ಸಂಭ್ರಮಪಟ್ಟ ಮಕ್ಕಳು…

ಕಾರವಾರ : ಕಾರವಳಿ ಉತ್ಸವದ ಸಂಭ್ರಮದ ನಡುವೆ ವಿಶೇಷ ಶಾಲೆಯ ಮಕ್ಕಳು ಇಂದು, ಬುಧವಾರ ಹೆಲಿಕಾಪ್ಟರ್ ಏರಿ ಅರಬ್ಬಿ ಸಮುದ್ರ, ಕಾಳಿ ನದಿ ಸಂಗಮ ಮತ್ತು ಕಾರವಾರದ ನಿಸರ್ಗ ಸೌಂದರ್ಯವನ್ನು ಆಕಾಶದಿಂದ ವೀಕ್ಷಿಸುವ ಮೂಲಕ ಸಂಭ್ರಮಿಸಿದರು.
ಕರಾವಳಿ ಉತ್ಸವದ-2025 ರ ಅಂಗವಾಗಿ ಉತ್ತರ ಕನ್ನಡ ಜಿಲ್ಲಾಡಳಿತ ಹಾಗೂ ಖಾಸಗಿ ವಿಮಾನಯಾನ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಗಿರುವ ಐದು ದಿನಗಳ ಹೆಲಿಕಾಪ್ಟರ್ ವಿಹಾರಕ್ಕೆ (Joy Ride) ಈ ಮೂಲಕ ಬುಧವಾರ ಅತ್ಯಂತ ಅರ್ಥಪೂರ್ಣ ಚಾಲನೆ ಸಿಕ್ಕಿತು. ಕಾರವಾರದ ಲಂಡನ್ ಬ್ರಿಡ್ಜ್ ಬಳಿ ಶಾಸಕ ಸತೀಶ್ ಕೆ. ಸೈಲ್ ಬುಧವಾರ ಚಾಲನೆ ನೀಡಿದರು. ಆಶಾನಿಕೇತನ ವಿಶೇಷ ಶಾಲೆಯ ಮಕ್ಕಳೇ ಇದನ್ನು ಉದ್ಘಾಟಿಸಿ ಅದರಲ್ಲಿ ಹಾರಾಟ ನಡೆಸಿದ್ದು ವಿಶೇಷವಾಗಿತ್ತು.

ಈ ಹೃದಯಸ್ಪರ್ಶಿ ಕಾರ್ಯದ ಹಿಂದೆ ಸ್ಥಳೀಯ ಶಾಸಕ ಸತೀಶ್ ಸೈಲ್ ಪುತ್ರಿ ಸಚಿ ಸೈಲ್ ತಮ್ಮ ತಂದೆಯ ಜನ್ಮದಿನದ ಅಂಗವಾಗಿ ಪ್ರತಿವರ್ಷ ವಿಶೇಷ ಮಕ್ಕಳಿಗೆ ನೆರವಾಗುವ ಸಂಪ್ರದಾಯವನ್ನು ಮುಂದುವರಿಸಿದ್ದು, ಈ ಬಾರಿ ಸುಮಾರು 20ಕ್ಕೂ ಹೆಚ್ಚು ವಿಶೇಷ ಚೇತನ ಮಕ್ಕಳಿಗೆ, ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಪೌರಕಾರ್ಮಿಕರಿಗೆ ಸ್ವಂತ ಖರ್ಚಿನಲ್ಲಿ ಉಚಿತ ಹೆಲಿಕಾಪ್ಟರ್ ಪ್ರವಾಸದ ವ್ಯವಸ್ಥೆ ಮಾಡಿದ್ದರು.

ಸುಮಾರು ಏಳು ನಿಮಿಷಗಳ ಕಾಲ ನಡೆದ ಈ ಹಾರಾಟದಲ್ಲಿ ಆಗಸದಿಂದ ಸಮುದ್ರದ ಅಲೆಗಳು, ಕಾಳಿ ನದಿ ಮತ್ತು ಸಮುದ್ರದ ಸಂಗಮ ಸ್ಥಾನ ಹಾಗೂ ಕಾರವಾರದ ದೃಶ್ಯಗಳನ್ನು ವೀಕ್ಷಿಸಿದರು. ಮತ್ತೊಂದು ವಿಶೇಷವೆಂದರೆ, ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಅವರು ಪೌರಕಾರ್ಮಿಕರೊಂದಿಗೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿ ಗಮನ ಸೆಳೆದರು.
5 ದಿನಗಳ ಕಾಲ ಹೆಲಿಕ್ಯಾಪ್ಟರ್ ರೈಡ್ ಬೆಳಿಗ್ಗೆ 9ರಿಂದ ಸಂಜೆ 4ರ ವರೆಗೆ ಹಾರಡಲಿದ್ದು, ಕಾರವಾರ ಪ್ರದೇಶವನ್ನು 7 ನಿಮಿಷದಲ್ಲಿ ಸುತ್ತು ಹಾಕಲಾಗುತ್ತದೆ. ಸಾರ್ವಜನಿಕರಿಗೆ ಪ್ರತಿ ವ್ಯಕ್ತಿಗೆ ₹3,900 ನಿಗದಿಪಡಿಸಲಾಗಿದೆ.

ಪ್ರಮುಖ ಸುದ್ದಿ :-   ವಿಡಿಯೊ | ನೀಟ್ ಜಟಾಪಟಿ : ಬಿಜೆಪಿಯಿಂದ ಕೆಪಿಸಿಸಿ ಕಚೇರಿ ಮುತ್ತಿಗೆ ಯತ್ನ; ಬಿಜೆಪಿ ಶಾಸಕ ಬಿಪಿ ಹರೀಶ ಮೇಲೆ ಮೊಟ್ಟೆ ಎಸೆತ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement